ಹೈದರಾಬಾದ್: ಸೌತ್ ಇಂಡಸ್ಟ್ರಿಯ ಯಶಸ್ವಿ ನಟಿ ನಯನತಾರಾ ತಮ್ಮ ಮಕ್ಕಳು ಮತ್ತು ಪತಿ ವಿಘ್ನೇಶ್ ಶಿವನ್ ಅವರೊಂದಿಗೆ ಓಣಂ ಹಬ್ಬವನ್ನು ಆಚರಿಸಿಕೊಂಡರು.
ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿಲ್ಲವಾದರೂ, ಅವರ ಪತಿ ಆಗಾಗ್ಗೆ ಕುಟುಂಬದ ಕ್ಷಣಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಕೇರಳದಲ್ಲಿ ಆ.27 ರಿಂದ ಓಣಂ ಹಬ್ಬ ಪ್ರಾರಂಭವಾಗಿದ್ದು, ಈ ಹಬ್ಬ 10 ದಿನಗಳ ಕಾಲ ನಡೆಯಲಿದೆ.
ಪ್ರತಿಯೊಬ್ಬರೂ ತಮ್ಮ ಕುಟುಂಬದೊಂದಿಗೆ ಈ ವಿಶೇಷ ಹಬ್ಬವನ್ನು ಆಚರಿಸುತ್ತಾರೆ. ಅದರಂತೆ ನಯನತಾರಾ ಮತ್ತು ವಿಘ್ನೇಶ್ ಅವರು ತಮ್ಮ ಮಕ್ಕಳೊಂದಿಗೆ ಮೊದಲ ಬಾರಿಗೆ ಓಣಂ ಆಚರಿಸುತ್ತಿರುವುದು ಕಂಡು ಬಂದಿತು. ಚಿತ್ರಗಳಲ್ಲಿ, ಪೋಷಕರಾದ ನಯನತಾರಾ ಮತ್ತು ವಿಘ್ನೇಶ್ ಇಬ್ಬರೂ ತುಂಬಾ ಉತ್ಸಾಹ ಮತ್ತು ಸಂತೋಷದಿಂದ ಕಾಣುತ್ತಿದ್ದಾರೆ. ಈ ಹಬ್ಬದಂದು ದಂಪತಿಗಳು ಮಕ್ಕಳಿಗೆ ಸಾಂಪ್ರದಾಯಿಕ ಬಟ್ಟೆಗಳನ್ನು ತೊಡಿಸಿದ್ದರು. ನಯನತಾರಾ ಅವರ ಅವಳಿ ಮಕ್ಕಳು ಧೋತಿ ಧರಿಸಿದ್ದು, ಓಣಂ ಔತಣವನ್ನು ಸವಿಯುತ್ತಿರುವ ಮುದ್ದಾದ ಚಿತ್ರಗಳು ಗಮನ ಸೆಳೆಯುತ್ತಿವೆ.
ಓಣಂ ಹಬ್ಬ ಆಚರಣೆ ಕುರಿತು ನಯನತಾರಾ ಪತಿ ವಿಘ್ನೇಶ್ ಶಿವನ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅವಳಿ ಮಕ್ಕಳು ಓಣಂ ಔತಣವನ್ನು ಸವಿಯುತ್ತಿರುವಾಗ ಹಿಂಬದಿಯಿಂದ ಅವರ ಫೋಟೋಗಳನ್ನು ತೆಗೆಯಲಾಗಿದೆ. ಸ್ಟಾರ್ ದಂಪತಿ ತಮ್ಮ ಮಕ್ಕಳ ಮೊದಲ ಓಣಂ ಹಬ್ಬದ ಮುದ್ದಾದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.