ಪುತ್ತೂರು: ಎಲ್ಲಾ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಪ್ರಾರಂಭಿಸುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ, ಈಗಾಗಲೇ ಸ್ವಯಂ ಆಗಿ ಕೆಲವೊಂದು ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಆರಂಭ ಮಾಡಲಾಗಿದ್ದು ಇದು ಉತ್ತಮ ಬೆಳವನಿಗೆ ನಮ್ಮ ಮಕ್ಕಳಿಗೆ ಕನ್ನಡದ ಮಾದರಿಯಲ್ಲೇ ಇಂಗ್ಲೀಷ್ ಭಾಷೆಯನ್ನು ಕಲಿಸಬೇಕು ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಕಷ್ಟಪಡಬೇಕಾದ ಅನಿವಾರ್ಯತೆ ಇದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ವೀರಮಂಗಲ ಸರಕಾರಿ ಹಿಪ್ರಾ ಶಾಲೆಯಲ್ಲಿ ಪಿಎಂಶ್ರೀ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ 15 ಸಾವಿರ ಸರಕಾರಿ ಶಾಲೆಗಳನ್ನು ಪಿಎಂಶ್ರೀ ಯೋಜನೆಗೆ ಸರಕಾರ ಆಯ್ಕೆ ಮಾಡಿದ್ದು ಅದರಲ್ಲಿ ವೀರಮಂಗಲ ಶಾಲೆಯೂ ಸೇರಿದೆ. ಈ ಯೋಜನೆಯಿಂದ ಶಾಲೆಗೆ ಸುಮಾರು 5 ಕೋಟಿ ಅನುದಾನವೂ ಬರುತ್ತದೆ. ಕಟ್ಟಡ ಕಾಮಗಾರಿ ಸೇರಿದಂತೆ ಇತರೆ ಯೋಜನೆಗಳಿಗೆ ಆ ಅನುದಾನವನ್ನು ಬಳಕೆ ಮಾಡಬಹುದಾಗಿದೆ. ಶಾಲೆಯಲ್ಲಿ ಆಂಗ್ಲ ಭಾಷೆಯನ್ನು ಮಕ್ಕಳಿಗೆ ಕಲಿಸಬೇಕು. ಬಡವರ ಮಕ್ಕಳೂ, ಗ್ರಾಮೀಣ ಮಕ್ಕಳೂ ಕನ್ನಡದಂತೆ ನಿರರ್ಗಳವಾಗಿ ಇಂಗ್ಲೀಷಲ್ಲಿ ಮಾತನಾಡುವುದನ್ನು ಕಲಿಯಬೇಕು ಎಂದು ಹೇಳಿದರು.
ಸರಕಾರಿ ಶಾಲೆಗಳಲ್ಲಿ ಮುಂದಿನ ದಿನಗಳಲ್ಲಿ ಖಾಲಿ ಇರುವ ಶಿಕ್ಷಕರ ನೇಮಕವಾಗಲಿದೆ. ಪ್ರತೀ ಶಾಲೆಗೂ ಆಯಾ ವಿಂಷಯವಾರು ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ. ಆಂಗ್ಲ ಮಾಧ್ಯಮ ಎಲ್‍ಕೆಜಿ ಮತ್ತು ಯುಕೆಜಿ ತರಗತಿಯನ್ನು ಆರಂಭ ಮಾಡುವ ಬಗ್ಗೆ ನಾನು ಸರಕಾರದ ಜೊತೆ ಮಾತುಕತೆ ನಡೆಸುತ್ತೇನೆ. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಉದ್ಯೋಗ ಸಿಗಬೇಕಾದರೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾದರೆ ಇಂಗ್ಲೀಷ್ ಭಾಷೆ ಕಡ್ಡಾಯವಾಗಿ ಬೇಕಾಗುತ್ತದೆ. ಕನ್ನಡವನ್ನು ಉಳಿಸಿ ಬೆಳಸುವುದರ ಜೊತೆ ಆಂಗ್ಲ ಭಾಷೆ ಗೂ ಹೆಚ್ಚಿನ ಪ್ರಾಧಾನ್ಯತೆಯನ್ನು ಪೋಷಕರು ನೀಡಬೇಕು ಎಂದು ಹೇಳಿದು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ ಮಾತನಾಡಿ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ತರಬೇತಿ ಪಡೆದ ಶಿಕ್ಷಕರೇ ಸರಕಾರಿ ಶಾಲೆಗಳನ್ನು ಮಕ್ಕಳಿಗೆ ಪಾಠ ಮಾಡುತ್ತಿದ್ದು ಕಳೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪುತ್ತೂರು ತಾಲೂಕಿನಲ್ಲಿರುವ ಸರಕಾರಿ ಶಾಲೆಗಳಲ್ಲಿ ಉತ್ತಮ ಪಲಿತಾಂಶವೂ ಬಂದಿದೆ ಎಂದು ಹೇಳಿದರು.
ಪಿಎಂಶ್ರೀ ಯೋಜನೆಯನ್ನು ಶಾಸಕರು ಉದ್ಘಾಟಿಸಿದರು. ವೇದಿಕೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ನವೀನ್ ವೇಗಸ್, ಗ್ರಾಪಂ ಸದಸ್ಯರುಗಳಾದ ಬಾಬು ಶೆಟ್ಟಿ, ಪದ್ಮಾವತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ನವೀನ್ ರೈ, ಮುಖ್ಯಗುರುಗಳಾದ ತಾರನಾಥ ಪಿ, ಶಿಕ್ಷಕರಾದ ಹರಿಣಾಕ್ಷಿ, ಶೋಭಾ, ಹೇಮಾವತಿ, ಶ್ರೀಲತಾ, ಕವಿತಾ, ಶರಣ್ಯ,ನರ್ಸರಿ ಶಿಕ್ಷಕಿ ನಳಿನಿ, ಕಡಬ ತಾಲೂಕು ಧೈಹಿಕ ಶಿಕ್ಷಕರ ಸಂಘದ ಕಾರ್ಯದರ್ಶಿ ಬಾಲಕೃಷ್ಣ ಧೈಹಿಕ ಸಿಕ್ಷಕ ಸಹದೇವ, ಮುಖ್ಯಗುರುಗಳ ಸಂಘದ ಜಿಲ್ಲಾ ಅಧ್ಯಕ್ಷರಾದ ಲಿಂಗರಾಜು ಸೇರಿದಂತೆ ಕಾರ್ಯಕ್ರಮದಲ್ಲಿ ಪೋಷಕರು, ವಿದ್ಯಾರ್ಥಿಗಳು, ಎಸ್‍ಡಿಎಂಸಿ ಸದಸ್ಯರುಗಳು ಉಪಸ್ತಿತರಿದ್ದರು.