ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು ಹಾಗೂ ಪ್ರಗತಿ ವಿದ್ಯಾ ಸಂಸ್ಥೆ ಕಾಣಿಯೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕು ಮಟ್ಟದ ಯೋಗಾಸನ ಸ್ಪರ್ಧೆಯು ದಿನಾಂಕ 16ಕಾಣಿಯೂರಿನಲ್ಲಿ ನಡೆಯಿತು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.
ಪ್ರಾಥಮಿಕ ಶಾಲಾ ವಿಭಾಗದಲ್ಲಿ : ಧನೀಶ್, 6ನೇ ತರಗತಿ(ಶ್ರೀ ಜನಾರ್ಧನ ಮತ್ತು ಶ್ರೀಮತಿ ಯಶೋಧ ದಂಪತಿ ಪುತ್ರ) –ಗುಂಪು ಸ್ಪರ್ಧೆಯಲ್ಲಿ –ದ್ವಿತೀಯ ಸ್ಥಾನ, ಸೃಷ್ಟಿ, 7ನೇ ತರಗತಿ(ಶ್ರೀ ರವಿ ಮತ್ತು ಶ್ರೀಮತಿ ಕುಸುಮ ದಂಪತಿ ಪುತ್ರ) – ರಿದಮಿಕ್ ಯೋಗದಲ್ಲಿ ಪ್ರಥಮ ಸ್ಥಾನ, ಧ್ರುವಿ, 7ನೇ ತರಗತಿ (ಶ್ರೀ ನಾಗೇಶ್ ರೈ ಮತ್ತು ಶ್ರೀಮತಿ ಲಕ್ಷ್ಮೀ.ಎಂ.ಆರ್ ದಂಪತಿ ಪುತ್ರಿ)- ಅಥ್ಲೆಟಿಕ್ಸ್ನಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಪ್ರೌಢ ಶಾಲಾ ವಿಭಾಗದಲ್ಲಿ : ಸೃಜನ್, 8ನೇ ತರಗತಿ(ಶ್ರೀ ರಾಮಕೃಷ್ಣ ಮತ್ತು ಶ್ರೀಮತಿ ರವಿಕಲಾ ದಂಪತಿ ಪುತ್ರ)- ಗುಂಪು ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಮೋಕ್ಷಿತ್, 8ನೇ ತರಗತಿ(ಶ್ರೀ ಮೋಹನ ಮತ್ತು ಶ್ರೀಮತಿ ಶಕುಂತಲಾ ದಂಪತಿ ಪುತ್ರ)- ರಿದಮಿಕ್ ಯೋಗದಲ್ಲಿ ದ್ವಿತೀಯ ಸ್ಥಾನ, ಧೃತಿಕ್, 9ನೇ ತರಗತಿ(ಶ್ರೀ ಪ್ರದೀಪ್ ಪೂಜಾರಿ ಮತ್ತು ಶ್ರೀಮತಿ ಸವಿತಾ ಪೂಜಾರಿ ದಂಪತಿ ಪುತ್ರಿ)-ರಿದಮಿಕ್ ಯೋಗದಲ್ಲಿ ಪ್ರಥಮ ಸ್ಥಾನ, ಸೇವಿತ್, 9ನೇ ತರಗತಿ(ಶ್ರೀ ಪುರುಷೋತ್ತಮ ಮತ್ತು ಶ್ರೀಮತಿ ಪ್ರಮೀಳ ದಂಪತಿ ಪುತ್ರಿ)- ಅಥ್ಲೆಟಿಕ್ಸ್ನಲ್ಲಿ ದ್ವಿತೀಯ ಸ್ಥಾನ, ಮೋಕ್ಷ, 8ನೇ ತರಗತಿ( ಶ್ರೀ ಕಿಶೋರ್ ಕುಮಾರ್ ಮತ್ತು ಶ್ರೀಮತಿ ರತ್ನ ದಂಪತಿ ಪುತ್ರಿ)- ರಿದಮಿಕ್ ಯೋಗದಲ್ಲಿ ದ್ವಿತೀಯ ಸ್ಥಾನ ಮತ್ತು ಅಪೇಕ್ಷಾ, 8ನೇ ತರಗತಿ(ಶ್ರೀ ವೆಂಕಟರಮಣ ಕಾರಂತ್ ಮತ್ತು ಶ್ರೀಮತಿ ಸಂಧ್ಯಾ ದಂಪತಿ ಪುತ್ರಿ)- ಅಥ್ಲೆಟಿಕ್ಸ್ನಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಇದರಲ್ಲಿ ಪ್ರಾಥಮಿಕ ವಿಭಾಗ ಮತ್ತು ಪ್ರೌಢ ಶಾಲಾ ವಿಭಾಗದಲ್ಲಿ ಧನೀಶ್(6ನೇ ತರಗತಿ), ಸೃಷ್ಟಿ(7ನೇ ತರಗತಿ) ಮತ್ತು ಧೃತಿಕ್(9ನೇ ತರಗತಿ) – ಒಟ್ಟು 3 ಮೂರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.