ತಾಲೂಕು ಮಟ್ಟದ ಶಟಲ್ ಬ್ಯಾಡ್‌ಮಿಂಟನ್: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 14ರ ವಯೋಮಾನದ ಬಾಲಕರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ – ಕಹಳೆ ನ್ಯೂಸ್
ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು ಮತ್ತು ಸಂತ ಫಿಲೋಮಿನ ಪ್ರೌಢ ಶಾಲೆ, ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಪುತ್ತೂರು ತಾಲೂಕು ಮಟ್ಟದ ಶಟಲ್ ಬ್ಯಾಡ್‌ಮಿಂಟನ್ ಪಂದ್ಯಾಟವು ದಿನಾಂಕ 24ರಂದು ಆಫಿಸರ್ಸ್ ಕ್ಲಬ್ , ದರ್ಬೆ, ಪುತ್ತೂರು ಇಲ್ಲಿ ನಡೆಯಿತು. ಈ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ 14ರ ವಯೋಮಾನದ ಬಾಲಕರ ತಂಡ ಪ್ರಥಮ ಸ್ಥಾನ ಗಳಿಸಿ, ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಜಿಲ್ಲಾ ಮಟ್ಟದ ಸ್ಪರ್ಧೆಗಳು ಮಂಗಳೂರಿನ ಫಾದರ್ ಮುಲ್ಲರ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ದಿನಾಂಕ 11ರಂದು ನಡೆಯಲಿದೆ. ಇಲ್ಲಿ ಭಾಗವಹಿಸಿರುವ ಈ ತಂಡಕ್ಕೆ ಶಾಲಾ ಆಡಳಿತ ಮಂಡಳಿ ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಅಧ್ಯಾಪಕರ ತಂಡ ಶುಭವನ್ನು ಹಾರೈಸಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ವಿದ್ಯಾರ್ಥಿಗಳ ವಿವರ:
ಆದ್ಯತ್.ಆರ್: 6 ನೇ ತರಗತಿ(ಶ್ರೀ ಎ.ರಂಜಿತ್ ಮತ್ತು ಶ್ರೀಮತಿ ವತ್ಸಲಾ ದಂಪತಿ ಪುತ್ರ), ಇಶಾನ್..ಕೆ, 7 ನೇ ತರಗತಿ(ಶ್ರೀ ನಾರಾಯಣ ಮೂರ್ತಿ.ಕೆ ಮತ್ತು ಶ್ರೀಮತಿ ಪ್ರೇಮಲತ ದಂಪತಿ ಪುತ್ರ), ಜಶ್.ಎಚ್.ಬಿ, 6 ನೇ ತರಗತಿ(ಶ್ರೀ ಹೇಮಚಂದ್ರ.ಬಿ ಮತ್ತು ಶ್ರೀಮತಿ ಶುಭಶ್ರೀ.ಹೆಚ್ ದಂಪತಿ ಪುತ್ರ), ಹಿತನ್ ಕುಮಾರ್, 7 ನೇ ತರಗತಿ(ಶ್ರೀ ಉದಯ ಕುಮಾರ್ ಮತ್ತು ಶ್ರೀಮತಿ ಲಲಿತಾ ದಂಪತಿ ಪುತ್ರ), ಲತನ್.ಟಿ.ಎಸ್, 7 ನೇ ತರಗತಿ(ಶ್ರೀ ತಿಮ್ಮಪ್ಪ.ಕೆ ಮತ್ತು ಶ್ರೀಮತಿ ಸುಹಾಸಿನಿ ದಂಪತಿ ಪುತ್ರ).