ಪುತ್ತೂರು ಶಾಸಕರ ನೂತನ ಐಶಾರಾಮಿ ಕಛೇರಿ ನಿರ್ಮಾಣಕ್ಕೆ ನಗರಸಭೆಯ 31ಲಕ್ಷ ಬಳಕೆ..! : ಹಣವನ್ನ ನಗರಸಭೆಗೆ ಹಿಂದಿರುಗಿಸಿ : ಕೈ ಪಡೆಯ ನಡೆಯನ್ನ ಖಂಡಿಸಿದ ಮಾಜಿ ಶಾಸಕ ಸಂಜೀವ ಮಠಂದೂರು– ಕಹಳೆ ನ್ಯೂಸ್
ಪುತ್ತೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನ ಪೂರೈಸಿದೆ. ಈ ನಡುವೆ ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡಿದೆ. ಜನ ಪರದಾಡುವ ಪರಿಸ್ಧಿತಿ ಬಂದಿದೆ. ಕಾಂಗ್ರೇಸ್ ಸರ್ಕಾರ ಆಡಳಿತಕ್ಕೆ ಬರುತ್ತೋ ಆವಾಗ ಬರ ಬರುವುದು ಸಹಜ. ಈ ಬಾರಿಯ ಬರ ಭೀಕರವಾಗಿದೆ ಎಂದು ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಇವರು, ಬಿಜೆಪಿ ಸರ್ಕಾರ ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳನ್ನ ನಿಲ್ಲಿಸುವ ಕೆಲಸ ಆಗ್ತಾ ಇದೆ. ಕಾಂಗ್ರೇಸ್‌ನಿAದ ಪುತ್ತೂರಿನಲ್ಲಿ ಯಾವುದೇ ಹೊಸ ಕಾಮಗಾರಿ ಕೆಲಸಗಳು ನಡೆಯುತ್ತಿಲ್ಲ.
ನಿನ್ನೆ ಪುತ್ತೂರು ಶಾಸಕರ ನೂತನ ಕಛೇರಿ ಉದ್ಘಾಟನೆಗೊಂಡಿದೆ. ಅದು ಸಂತೋಷದ ವಿಚಾರ, ಆದ್ರೆ ಇದಕ್ಕಾಗಿ ಪುತ್ತೂರು ನಗರಸಭೆಯ ತೆರಿಗೆ ಹಣದಿಂದ ೩೧ಲಕ್ಷ ಬಳಕೆ ಮಾಡಿದ್ದಾರೆ. ಸಗರಸಭೆಯ ಚುನಾಯಿತ ಸದಸ್ಯರಿಗೆ ಬೇರೆ ಯಾವುದೇ ಅನುದಾನ ಇಲ್ಲದೆ ಇರುವಾಗ ನಗರ ಸಭೆಯ ಮೂಲ ಸೌಲಭ್ಯಕ್ಕೆ ಬದಗಿಸಬೇಕಾದ ಅನುದಾನವನ್ನ ಜಿಲ್ಲಾಧಿಕಾರಿಯವರು ಶಾಸಕರ ಸೂಚನೆ ಮೇರೆಗೆ, ಐಷಾರಾಮಿ ಕಛೇರಿಗೆ ನೀಡಿದ್ದು ಖಂಡನೀಯ. ನಗರ ಸಭೆ ಸಂಬoಧಪಟ್ಟ ಕಟ್ಟಡದಲ್ಲಿ ಕಾರ್ಯಾಲಯ ಉದ್ಘಾಟನೆಗೆ ನಗರಸಭೆಯ ಸದಸ್ಯರಿಗೆ ಆಮಂತ್ರಣ ನೀಡದೆ, ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಇದು ಕೂಡ ಖಂಡನೀಯವಾಗಿದೆ. ಇದು ಶಾಸಕರ ಕಛೇರಿಯಾಗದೆ ಕಾಂಗ್ರೇಸ್ ಕಛೇರಿಯಾಗಿ ಮಾಡಿರುವುದು ಕಂಡು ಬಂದಿದೆ.
ದ,ಕ ಜಿಲ್ಲಾಧಿಕಾರಿಯವರು ತಕ್ಷಣ ಶಾಸಕರ ನೂತನ ಕಟ್ಟಡ ನಿರ್ಮಾಣಕ್ಕೆ ಬಳಸಿಕೊಂಡಿರುವ ನಗರಸಭೆಯ ಸ್ವಂತ ನಿಧಿ ೩೧ಲಕ್ಷವನ್ನ, ನಗರಸಭೆಗೆ ಹಿಂದಿರುಗಿಸಿ, ಅಭಿವೃದ್ಧಿಗೆ ಸಹಕಾರವನ್ನ ನೀಡಬೇಕು.. ಇಲ್ಲವಾದ್ರೆ ನಗರ ಸಭೆಯ ಸದಸ್ಯರು ನಗರ ಸಭಾ ಕಾರ್ಯಾಲಯದ ಮುಂದೆ ಪ್ರತಿಭಟನೆ ಮಾಡುವುದು ಅನಿರ್ವಾಯ ಎಂದಿದ್ದಾರೆ.