ವಿಶ್ವಹಿಂದೂಪರಿಷದ್ ಭಜರಂಗದಳ ಬಂಟ್ವಾಳ ಪ್ರಖಂಡದ ಸಿಂತಾನಿಕಟ್ಟೆ ಶಾಖೆ ಪೂಪಾಡಿಕಟ್ಟೆ ಘಟಕದ ವತಿಯಿಂದ ಬಾಲ ಸಂಸ್ಕಾರ ಮತ್ತು ಧರ್ಮ ಶಿಕ್ಷಣ ಸಮಿತಿ ರಚನೆ – ಕಹಳೆ ನ್ಯೂಸ್
ಬಂಟ್ವಾಳ : ಹಿಂದೂ ಸಮಾಜದ ಒಗ್ಗಟ್ಟಿಗಾಗಿ ಹಿಂದೂ ಮಕ್ಕಳಿಗೆ ಧರ್ಮ ಶಿಕ್ಷಣ ನೀಡುವ ಸಲುವಾಗಿ ಹಾಗೂ ಮಕ್ಕಳು ದೇಶ ಭಕ್ತಿ ಮತ್ತು ಧರ್ಮ ಭಕ್ತಿಯನ್ನು ಮೈ ಗೂಡಿಸಿಕೊಳ್ಳುವ ದೃಷ್ಟಿಯಿಂದ ವಿಶ್ವಹಿಂದೂಪರಿಷದ್ ಭಜರಂಗದಳ ಬಂಟ್ವಾಳ ಪ್ರಖಂಡದ ಸಿಂತಾನಿಕಟ್ಟೆ ಶಾಖೆ ಪೂಪಾಡಿಕಟ್ಟೆ ಘಟಕದ ವತಿಯಿಂದ ಬಾಲ ಸಂಸ್ಕಾರ ಮತ್ತು ಧರ್ಮ ಶಿಕ್ಷಣ ಸಮಿತಿಯನ್ನು ರಚನೆ ಮಾಡಲಾಯಿತು.
ಕಾರ್ಯಕ್ರಮವನ್ನು ಭಜರಂಗದಳ ಪುತ್ತೂರು ಜಿಲ್ಲಾ ಸಂಯೋಜಕರಾದ ಭರತ್ ಕುಮ್ದೇಲ್ ಹಾಗೂ ಬಂಟ್ವಾಳ ಪ್ರಖಂಡದ ಅಧ್ಯಕ್ಷರಾದ ಪ್ರಸಾದ್ ಕುಮಾರ್ ರೈ ದೀಪ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಭರತ್ ಕುಮ್ಡೇಲ್ “ಇಂದಿನ ಮಕ್ಕಳಲ್ಲಿ ಧರ್ಮ ಶಿಕ್ಷಣ ಹಾಗೂ ದೇಶಭಕ್ತಿಯ ಸಂದೇಶ ನೀಡುವ ಕೆಲಸಗಳು ಪ್ರತಿ ಗ್ರಾಮ ಗ್ರಾಮಗಳಲ್ಲಿ ನಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂತೋಷ್ ಸರಪಾಡಿ, ಶಿವಪ್ರಸಾದ್ ತುಂಬೆ, ವಿಶ್ವಹಿಂದೂಪರಿಷದ್ ಧರ್ಮ ಪ್ರಸಾರ ಪ್ರಮುಖ್ ಮನೋಹರ ಕಲ್ಲಡ್ಕ, ಧರ್ಮ ಶಿಕ್ಷಕಿ ದಿವ್ಯ ನಾವೂರು, ಸಿಂತಾನಿಕಟ್ಟೆ ಶಾಖೆ ಪೂಪಾಡಿಕಟ್ಟೆ ಘಟಕದ ಸದಸ್ಯರು, ಕಾರ್ಯಕರ್ತರು, ಹಾಗೂ ಊರಿನ ಮಾತೆಯರು ಉಪಸ್ಥಿತರಿದ್ದರು.