Wednesday, November 27, 2024
ಸುದ್ದಿ

ಮಂಗಳೂರು ನಗರದ ಸ್ಕೇಟಿಂಗ್ ರಿಂಕ್ ದುರಸ್ತಿ, ಆಧುನೀಕರಣಕ್ಕೆ ಶಾಸಕ ಕಾಮತ್ ಚಾಲನೆ – ಕಹಳೆ ನ್ಯೂಸ್

ಮಂಗಳೂರು: ನಗರದ ಮಂಗಳಾ ಕ್ರೀಡಾಂಗಣದ ಬಳಿಯಿರುವ ಸ್ಕೇಟಿಂಗ್ ಅಂಗಣವನ್ನು ದುರಸ್ತಿಗೊಳಿಸಿ ಆಧುನೀಕರಣಗೊಳಿಸುವ ಕಾಮಗಾರಿಗೆ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ನಿನ್ನೆ ಚಾಲನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಮಣ್ಣಗುಡ್ಡ ಸಮೀಪದ ಕ್ರೀಡಾಂಗಣದ ಬಳಿ ಆಯೋಜಿಸಿದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಮಹಾನಗರ ಪಾಲಿಕೆಯ ಅನುದಾನದಿಂದ ಸ್ಕೇಟಿಂಗ್ ಅಂಗಣವನ್ನು ದುರಸ್ತಿಗೊಳಿಸಲಾಗುತ್ತಿದೆ. ಮಳೆಗಾಲದಲ್ಲೂ ಅಂಗಣದೊಳಗೆ ಸ್ಕೇಟಿಂಗ್ ಅಭ್ಯಾಸಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ಅಂಗಣದೊಳಗೆ ನೀರು ನಿಲ್ಲದಂತೆ ಮಾಡಲಾಗುವುದು ಎಂದು ಹೇಳಿದರು.
ಮಂಗಳೂರಿನಲ್ಲಿ ಹಲವಾರು ಸ್ಕೇಟಿಂಗ್ ಕ್ರೀಡಾಪಟುಗಳಿದ್ದು, ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಅಗತ್ಯವಿರುವ ಅಭ್ಯಾಸ ಸೌಕರ್ಯಗಳನ್ನು ಇಲ್ಲಿ ಒದಗಿಸಲಾಗುವುದು ಎಂದು ಕಾಮತ್ ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸ್ಕೇಟಿಂಗ್ ರಿಂಕ್ ನ ದುರಸ್ತಿಗಾಗಿ ಕಳೆದ ವರ್ಷ ಕ್ರೀಡಾ ಮತ್ತು ಯುವಜನ ಇಲಾಖೆಯವರಿಗೆ ಮನವಿ ಸಲ್ಲಿಸಲಾಗಿತ್ತು. ಆ ದುರಸ್ತಿಗೆ ಇವತ್ತು ಹಣ ಜೋಡಿಸಿಕೊಂಡು ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದ್ದೇವೆ. ಮಳೆಗಾಲದಲ್ಲಿ ನೀರು ನಿಲ್ಲದಂತೆ ನೋಡಿಕೊಂಡು ಸ್ಕೇಟಿಂಗ್ ಅಭ್ಯಾಸ ಮಾಡುವವರಿಗೆ ನಿರಂತರ ಅಭ್ಯಾಸಕ್ಕೆ ತೊಂದರೆಯಾಗದoತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ.ಕುಳಿತುಕೊಳ್ಳಲು, ಗ್ಯಾಲರಿ ವ್ಯವಸ್ಥೆ ಕೂಡ ಮಾಡುತ್ತಾ ಇದ್ದೇವೆ. ಮಹಾನಗರ ಪಾಲಿಕೆಯಿಂದ ಅನುದಾನ ದೊರಕಿಸಿಕೊಂಡು ಸ್ಕೇಟಿಂಗ್ ಕ್ರೀಡಾ ಪಟುಗಳಿಗೆ ದೊಡ್ಡ ಮಟ್ಟದ ಪ್ರೋತ್ಸಾಹ ನೀಡಲು ಈ ಸೌಲಭ್ಯಗಳನ್ನು ಒದಗಿಸುತ್ತಿಸುದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೊರೇಟರ್ ಸಂಧ್ಯಾ ಮೋಹನ್ ಆಚಾರ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಕಿಲಾ ಕಾವಾ, ಗುರು ಚರಣ್, ಪ್ರಶಾಂತ್ ಮಠದಕಣಿ, ರಾಮಚಂದ್ರ ಭಂಡಾರಿ, ಪವನ್ ಶೆಣೈ, ಪೃಥ್ವಿರಾಜ್, ಹರೀಶ್ ಬೋಳೂರು, ಸ್ವರ್ಣ ಕೃಷ್ಣ, ಮೋಹನ್ ಆಚಾರ್ಯ, ವಸಂತ್ ಜೆ ಪೂಜಾರಿ, ಮಹೇಶ್ ಮುಂತಾದವರು ಉಪಸ್ಥಿತರಿದ್ದರು.