ಕಟಪಾಡಿ ಗ್ರಾಮ ಪಂಚಾಯಿತಿನಲ್ಲಿ ಗ್ರಹ ಲಕ್ಷ್ಮಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮವನ್ನು ಪಂಚಾಯಿತಿ ಅಧ್ಯಕ್ಷರಾದ ಪ್ರಭಾ ಬಿ. ಶೆಟ್ಟಿ ಯವರ ಅಧ್ಯಕ್ಷತೆ ಯಲ್ಲಿ ಜರುಗಿತು. ಮೈಸೂರಿನಲ್ಲಿ ಜರುಗಿದ ರಾಜ್ಯ ಮಟ್ಟದ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪಂಚಾಯಿತಿ ಅಧ್ಯಕ್ಷ ರಾದ ಪ್ರಭಾ ಬಿ. ಶೆಟ್ಟಿ, ಉಪಾಧ್ಯಕ್ಷ ರಾದ ಸುಗುಣ ಪೂಜಾರಿ, ನೋಡಲ್ ಅಧಿಕಾರಿ ವಿವೇಕಾನಂದ ಗಾಂವ್ ಕಾರ್ ದೀಪ ಬೆಳಗುವ ಮೂಲಕ ನೆರವೇರಿಸಿದರು. ಸುಮಾರು 400 ಕ್ಕೂ ಹೆಚ್ಚು ಫಲಾನುಭವಿಗಳು, ಪಂಚಾಯಿತಿ ಸರ್ವ ಸದಸ್ಯರು, ಲೆಕ್ಕ ಸಹಾಯಕರಾದ ವಿಜಯ್, ಸಿಬ್ಬಂದಿ ವರ್ಗ ಹಾಗೂ ನಾಗರೀಕರು ಭಾಗವಹಿಸಿದ್ದರು.
ಕಾರ್ಯಕ್ರಮ ವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಮತಾ ಶೆಟ್ಟಿ ಯವರು ನೆರವೇರಿಸಿ ಕೊಟ್ಟರು ಸಂವಿಧಾನದ ಪ್ರತಿಜ್ಞ ವಿಧಿ ಸ್ವೀಕರಿಸಲಾಯಿತು.