Tuesday, November 26, 2024
ಸುದ್ದಿ

ಅಡಿಕೆ ಕಲವು ಪ್ರಕರಣ ; ಇಬ್ಬರು ಆರೋಪಿಗಳ ಬಂಧನ – ಕಹಳೆ ನ್ಯೂಸ್

ಪುತ್ತೂರು : ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಸಮೀಪದ ನೆಕ್ಕರೆ ಕಾರ್ಮಿನ್ ಮಿರಾಂದ ಅವರ ಮನೆಯಿಂದ ಮೂರು ದಿನದ ಹಿಂದೆ ಲಕ್ಷ ರೂ. ಮೌಲ್ಯದ ಅಡಿಕೆ ಕಳವಾಗಿದ್ದ ಪ್ರಕರಣಕ್ಕೆ ಸಂಬoಧಿಸಿ ಆರೋಪಿಗಳಿಬ್ಬರನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮರೀಲು ನಿವಾಸಿ ಉಬೈದ್ ಮತ್ತು ಜಿಡೆಕಲ್ಲು ನಿವಾಸಿ ಮಹಮ್ಮದ್ ಇಝಾರ್ ಬಂಧಿತ ಆರೋಪಿಗಳು.


ಕಾರ್ಮಿನ್ ಮಿರಾಂದ ಅವರ ಮನೆಯ ಅಂಗಳದಲ್ಲಿ ಅವರ ತಾಯಿಗೆ ಸಂಬAಧಿಸಿದ ಅಡಿಕೆ ಒಣಗಿಸಿ, ಅಡಿಕೆಯನ್ನು ಸುಲಿದು ತೂಕ ಮಾಡಿ ಇಟ್ಟಿದ್ದರು. ಸುಲಿದ 276 ಕೆ.ಜಿ. ಅಡಿಕೆಯನ್ನು 6 ಗೋಣಿಗಳಲ್ಲಿ ತುಂಬಿಸಿ ಮನೆಯ ಎದುರಿನ ಹಾಲ್‌ನಲ್ಲಿ ಇಡಲಾಗಿತ್ತು. ಆದರೇ ಸುಲಿದ ಅಡಿಕೆ ಮತ್ತು ಕೆಲಸಗಾರರಿಗೆ ನೀಡಲೆಂದು ಮನೆಯ ಬೆಡ್ ರೂಮಿನ ಕಪಾಟಿನಲ್ಲಿಟ್ಟಿದ್ದ 10 ಸಾವಿರ ರೂ. ಹಣ ಕಳವಾಗಿತ್ತು.
ಈ ಕುರಿತು ಕಾರ್ಮಿನ್ ಮಿರಾಂದ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿಗಳನ್ನು ಕಾವೇರಿಕಟ್ಟೆಯ ಬಳಿಯಿಂದ ಆ.28 ರಂದು ರಾತ್ರಿ ವಶಕ್ಕೆ ಪಡೆದು ಅವರು ಕೃತ್ಯಕ್ಕೆ ಉಪಯೋಗಿಸಿದ ಬೈಕ್ ಮತ್ತು ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕಳವು ಮಾಡಿ
ಕಾವೇರಿಕಟ್ಟೆ ಬಳಿಯ ಬಾಡಿಗೆ ಮನೆಯ ಕೊಠಡಿಯಲ್ಲಿ ದಾಸ್ತಾನು ಮಾಡಿದ್ದರೆನ್ನಲಾದ ಅಡಿಕೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು