Friday, January 24, 2025
ಸುದ್ದಿ

ಫ್ಯಾಷನ್ ಲೋಕದ ತಾರೆ ಯುವ ನಟಿ ಮಾಡೆಲ್’ಗೆ ಹೃದಯಘಾತ – ಕಹಳೆ ನ್ಯೂಸ್

ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರೂ ಹೃದಯಾಘಾತ ಹೃದಯಸ್ತಂಭನದಿoದ ಸಾಯುವವರ ಸಂಖ್ಯೆ ಹೆಚ್ಚಾಗಿ ಕಂಡುಬoದಿದ್ದು ಯುವ ಜನತೆಯನ್ನು ಭಯಕ್ಕೆ ದೂಡಿದೆ. ಅದರಲ್ಲೂ ದೇಹ ಸೌಂದರ್ಯವನ್ನು ಬಯಸಿ ಫಿಟ್ನೆ  ನೆಸ್ ಅನ್ನು ಸಾಧಿಸಿಕೊಂಡು ಮತ್ತು ಫ್ಯಾಷನ್ ನಲ್ಲಿ ತಮ್ಮದೇ ಆದ ಹೆಸರು ಮಾಡಿದ್ದ ಹುಡುಗಿ ಲಾರಿಸ್ಸಾ. ಹಲವು ಉತ್ಪನ್ನಗಳಿಗೆ ಅವರು ರೂಪದರ್ಶಿಯಾಗಿದ್ದು ಜನಪ್ರಿಯತೆ ಪಡೆದುಕೊಂಡಿದ್ದಾಳೆ.

 

ಜಾಹೀರಾತು
ಜಾಹೀರಾತು
ಜಾಹೀರಾತು


ಮೊನ್ನೆ ಅವರು ಫ್ಯಾಶನ್ ಕಾರ್ಯಕ್ರಮಕ್ಕೆಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಆಕೆಗೆ ಕಾರ್ಡಿಯಾಕ್ ಅರೆಸ್ಟ್ ಆಗಿದೆ. ಆಕೆ ಕೂಡಲೇ ಕೋಮಾಗೆ ಜಾರಿದ್ದಾಳೆ. ಅಲ್ಲಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಶುರು ಮಾಡಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾಳೆ.ಕಾಯ್ದುಕೊಳ್ಳುವ ಸೆಲೆಬ್ರಿಟಿಗಳನ್ನು ಇಂತಹ ಪ್ರಕರಣಗಳು ನಿದ್ದೆಗೆಡಿಸಿ ಹಾಕಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬ್ರೆಜಿಲ್ ದೇಶದ ಯುವ ಮಾಡೆಲ್ ಲಾರಿಸ್ಸಾ ಬೋರ್ಗೆಸ್ ಸಾವಿನ ಕುರಿತು ಅವರ ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ. ಕುಟುಂಬವು ಸೋಷಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸಿದೆ. ಮಗಳು ಇಷ್ಟು ಬೇಗ ನಮ್ಮನ್ನು ತೊರೆದಿದ್ದು ಅತೀವ ದುಃಖ ತಂದಿದೆ ಎಂದು ಅವರು ಸಂಕಟ ಹಂಚಿಕೊoಡಿದ್ದಾರೆ.