Friday, January 24, 2025
ಸುದ್ದಿ

ಆ.31ರಂದು ಆಗಸದಲ್ಲಿ ಮೂಡಲಿದೆ ಅತ್ಯಂತ ಮಹತ್ವದ ಸೂಪರ್ ಮೂನ್ -ಕಹಳೆ ನ್ಯೂಸ್

ಈ ವರ್ಷದ 4 ಸೂಪರ್ ಮೂನ್ಗಳಲ್ಲಿ ಆಗಸ್ಟ್ 31 ರ ಸೂಪರ್ಮೂನ್ ಅತ್ಯಂತ ಹೆಚ್ಚಿನ ಮಹತ್ವದ್ದು.ಈ ವರ್ಷದ ನಾಲ್ಕು ಸೂಪರ್ಮೂನ್ ಗಳು , ಜುಲೈ 3, ಆಗಸ್ಟ್ 1, ಆಗಸ್ಟ್31 ಹಾಗೂ ಸಪ್ಟಂಬರ್ 29.ಜುಲೈ 3ರಂದು ಚಂದ್ರ ಭೂಮಿಯಿಂದ 3,61800 ಕಿಮೀ , ಆಗಸ್ಟ್ 1 ರಂದು 3,57530 ಕಿಮೀ ,ಆಗಸ್ಟ್ 31 ರಂದು 3,57 344 ಕಿಮೀ ಹಾಗೂ ಸಪ್ಟಂಬರ್ 29 ರಂದು 3,61552 ಕಿಮೀ .ಇವುಗಳಲ್ಲಿ ಶ್ರಾವಣದ ಈ ಹುಣ್ಣಿಮೆಯ ಚಂದ್ರನ ಸೂಪರ್ ಮೂನ್ ಹೆಚ್ಚಿನ ಪ್ರಭೆಯದು . ಕಾರಣ ಈ ನಾಲ್ಕರಲ್ಲಿ ಇದು ಭೂಮಿಗಿ ಹೆಚ್ಚು ಸಮೀಪ. ಹಾಗಾಗಿ ಈ ಹುಣ್ಣಿಮೆ ಚಂದಿರ ಸುಮಾರು 14ಅಂಶ ದೊಡ್ಡದಾಗಿ ಕಾಣುತ್ತದೆ. ಅಂತೆಯೇ 25 ಅಂಶ ಮಾಮೂಲಿಹುಣ್ಣಿಮೆಗಿಂತ ಹೆಚ್ಚು ಪ್ರಭೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಭಾರತದ ಚಂದ್ರಯಾನ 3 ಸಂಪೂರ್ಣಯಶಸ್ಸಿನಲ್ಲಿ ಮುಂದುವರಿಯುತ್ತಿದೆ. ರೋವರ್ ಚಂದ್ರನಲ್ಲಿಗೆ ಕಳುಹಿಸಿ , ವಿಕ್ರಮ್ ಲ್ಯಾಂಡರ್ ಇಳಿಸಿ ,ಪ್ರಜ್ಞಾನನ ಪುಟ್ಟ ಪುಟ್ಟ ಹೆಜ್ಜೆಗಳ ತಿರುಗಾಟ ಪ್ರಯೋಗಗಳ ಯಶಸ್ಸುಕಾಣುತ್ತಿರುವ ಈ ಸಂತೋಷದ ಸಮಯದಲ್ಲಿ ಹುಣ್ಣಿಮೆ ಹೋಳಿಗೆ ಊಟದೊಂದಿಗೆ ಭಾರತೀಯರಿಗೆ ಸಂಭ್ರಮ ಪಡಲೋಸುಗ ಈ ಸೂಪರ್ಮೂನ್ ಬಂದಿದೆಯೋ ಎನ್ನುವಂತಿದೆ , ಈ ಆಗಸ್ಟ್ 31ರ ಸೂಪರ್ ಮೂನ್.ಇನ್ನೂ ಒಂದು ವಿಶೇಷ ತಿಂಗಳೊoದರಲ್ಲಿ ಎರಡು ಹುಣ್ಣಿಮೆಗಳು, ಅದರಲ್ಲೂ ಇವೆರಡೂ ಸೂಪರ್ಮೂನ್. ಇವೆಲ್ಲವೂ ಭಾರತೀಯರು ಖುಷಿಪಡಲು ಪೂರಕವಾಗಿದೆ.

ಚಂದ್ರನ ಅಧ್ಯಯನ ದೊಂದಿಗೆ ಸೂರ್ಯ ಅಧ್ಯಯನಕ್ಕಾಗಿ ಆದಿತ್ಯ ಎಲ್1 ಹಾರಿಸಿ ಸಾಹಸ ತೋರಲು ಅಣಿಯಾಗಿದೆ, ಇಸ್ರೋ., ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ.ಹಾಗಾಗಿ ಸೂಪರ್ಮೂನಿನ ಬೆಳ್ಳಂಬೆಳೆದಿಂಗಳಲ್ಲಿ ಮಿಂದು ನಮ್ಮ ಭಾರತೀಯ ವಿಜ್ಞಾನಿಗಳ ಯಶೋಗಾದೆಯಲ್ಲಿ ನಾವೆಲ್ಲಾ ಸಂಭ್ರಮ ಪಡೋಣ .