Saturday, January 25, 2025
ಸುದ್ದಿ

ಮೂಡುಬಿದಿರೆಯಲ್ಲಿ ಸೆ.10 ರಂದು ಜಿಲ್ಲಾ ಕಂಬಳ ಸಮಿತಿಯ ಮಹಾಸಭೆ – ಕಹಳೆ ನ್ಯೂಸ್

ಮೂಡುಬಿದಿರೆ: ದ.ಕ. ಜಿಲ್ಲಾ ಕಂಬಳ ಸಮಿತಿಯ ಮಹಾಸಭೆಯು ಸೆ.10 ಆದಿತ್ಯವಾರದಂದು ಬೆಳಿಗ್ಗೆ 10 ಗಂಟೆಗೆೆ ಮೂಡುಬಿದಿರೆಯ ಒಂಟಿಕಟ್ಟೆಯಲ್ಲಿರುವ ಕೋಟಿ-ಚೆನ್ನಯ ಕಂಬಳ ವಠಾರದಲ್ಲಿರುವ ಸೃಷ್ಠಿ ಗಾರ್ಡನ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಎರ್ಮಾಳ್ ರೋಹಿತ್ ಹೆಗ್ಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕಂಬಳ ವ್ಯವಸ್ಥಾಪಕರು, ಕೋಣಗಳ ಯಜಮಾನರು, ತೀರ್ಪುಗಾರರು, ಓಟಗಾರರು, ಕಂಬಳ ಸಹಕಾರಿ ವರ್ಗದವರು ಭಾಗವಹಿಸುವಂತೆ ವಿನಂತಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನೂತನ ಕಂಬಳ ಜಿಲ್ಲಾ ಸಮಿತಿ ರಚನೆ ಹಾಗೂ 2023-24ನೇ ಋತುವಿನ ವಿವಿಧ ಕಂಬಳದ ದಿನಾಂಕಗಳನ್ನು ಅದೇ ದಿನ ನಿರ್ಧರಿಸಲಾಗುವುದು. ಆದ್ದರಿಂದ ಕಂಬಳ ವ್ಯವಸ್ಥಾಪಕರೆಲ್ಲರೂ ತಪ್ಪದೆ ಆ ದಿನ ಹಾಜರಿರುವಂತೆ ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಜೈನ್ ನಾರಾವಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು