Friday, September 20, 2024
ಸುದ್ದಿ

ಕಾಫಿನಾಡಲ್ಲಿ ನಡೆಯಿತು ವಂಡರ್ ಪುಲ್ ಜಿಪ್ಸಿ ರೈಡ್ – ಕಹಳೆ ನ್ಯೂಸ್

ಚಿಕ್ಕಮಗಳೂರು: ನೀವು ವಿಭಿನ್ನ ಕಾರುಗಳಲ್ಲಿ ಸಾವಿರಾರು ಕಿ.ಮೀ ಡ್ರೈವ್ ಮಾಡಿರಬಹುದು, ದುಬಾರಿ ಕಾರುಗಳಲ್ಲಿ ರಾಜ್ಯ, ಹೊರ ರಾಜ್ಯ ಸೇರಿದಂತೆ ವಿದೇಶಗಳಲ್ಲಿಯೂ ಪ್ರಯಾಣ ಮಾಡಿರಬಹುದು, ಆದ್ರೆ ಜಿಪ್ಸಿಯಲ್ಲಿ ರೈಡ್ ಮಾಡುವುದು ಇದೆಲ್ಲದ್ದಕ್ಕೂ ಭಿನ್ನ, ಅದ್ರಲ್ಲೂ ವಾಟರ್ ಸ್ಟ್ರೀಮ್‍ಗಳಲ್ಲಿ , ಆಫ್ ರೋಡ್‍ಗಳಲ್ಲಿ ಹಾಗೂ ತೋಟದ ಮಧ್ಯೆವಿರುವ ಸಣ್ಣ ಮಡ್ ರಸ್ತೆಗಳಲ್ಲಿ ಡ್ರೈವ್ ಮಾಡೋದು ಅಂದ್ರೆ ಅದ್ರ ಮಜಾನೆ ಬೇರೆ. ಅಂತಹ ವಿಭಿನ್ನ ರೀತಿಯ ಜಿಪ್ಸಿ ರೈಡ್ ಚಿಕ್ಕಮಗಳೂರಿನ ಕೊಪ್ಪದಲ್ಲಿ ನಡೆಯಿತು. ಹೇಗಿತ್ತು ಜಿಪ್ಸಿ ರೈಡ್ ಅಂತೀರಾ ಈ ಸ್ಟೋರಿ ನೋಡಿ..
ವಾಟರ್ ಸ್ಟ್ರಿಮ್‍ನಲ್ಲಿ ಜಿಪ್ಸಿ ಡ್ರೈವ್ ಮಾಡ್ತಿರೋ ಜಿಪ್ಸಿ ರೈಡರ್ಸ್, ತೋಟದ ಮಧ್ಯವಿರುವ ಟ್ರಾಕ್‍ನಲ್ಲಿ ಸಿಕ್ಕಿಹಾಕಿಕೊಂಡಿರೋ ಜಿಪ್ಸಿಗಳು, ಸೌಂಡ್ ಮಾಡುತ್ತಾ ಹೋಡ್ತಿರೋ ಜಿಪ್ಸಿಗಳು, ಜಿಪ್ಸಿ ರೈಡ್ ಕಣ್ತಿಂಬಿಕೊಳ್ತಿರೋ ಸ್ಥಳೀಯರು. ಆಫ್ ರೋಡ್‍ಗಳಲ್ಲಿ ಎಂಜಾಯ್ ಮಾಡುತ್ತಾ ಡ್ರೈವ್ ಮಾಡ್ತಿರೋ ರೈಡರ್‍ಗಳು. ತಮಗೆ ತಾವೇ ಸರಿಸಾಟಿ ಎಂಬಂತೆ ಮೈ ಜುಮ್ಮೆನ್ನುವಂತೆ ಮುನ್ನುಗ್ಗುತ್ತಿರುವ ಜಿಪ್ಸಿಗಳು. ಹೌದು ಈ ದೃಶ್ಯ ಕಂಡು ಬಂದದ್ದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ದೇವಗಲ್ ಗ್ರಾಮದಲ್ಲಿ. ಕೊಪ್ಪ ಮೋಟರ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಜಿಪ್ಸಿ ಚಾಲಕರಿಗೆ ಅಂತಾ ಈಕೋ ಡ್ರೈವ್ 4*4 ಸಾಹಸಮಯ ರೈಡ್ ಏರ್ಪಡಿಸಲಾಗಿತ್ತು.

ಈ ರೈಡ್ನಲ್ಲಿ ಸುಮಾರು 50 ಕ್ಕೂ ಹೆಚ್ಚು ಜಿಪ್ಸಿಗಳು ಹಾಗೂ 100ಕ್ಕೂ ಹೆಚ್ಚು ಡ್ರೈವರ್, ಕೋ ಡ್ರೈವರ್ಗಳು ಹಾಗೂ ಡ್ರೈವರ್‍ಗಳ ಕುಟುಂಬಸ್ಥರು ಭಾಗಿಯಾಗಿದ್ರು. 16.3 ಕಿ.ಮೀ. ವ್ಯಾಪ್ತಿಯ ಆಪ್ ರೋಡ್ ಟ್ರ್ಯಾಕ್, ವಾಟರ್ ಸ್ಟ್ರೀಮಿಂಗ್ ಟ್ರ್ಯಾಕ್ ಹಾಗು ಮಡ್ ಟ್ರ್ಯಾಕ್‍ಗಳ ರಸ್ತೆಯಲ್ಲಿ ಸೌಂಡ್ ಮಾಡುತ್ತಾ ಓಡಿಸ್ತಿದ್ದ ಜಿಪ್ಸಿಗಳ ವೀಕ್ಷಕರ ಎದೆ ಮೇಲೆ ಹೋದಂತಿತ್ತು. ಮೈ ಜುಮ್ ಎನಿಸೋ ರೀತಿಯಲ್ಲಿ ಜಿಪ್ಸಿಗಳು ಸಾಗ್ತಿದ್ವು. ಇನ್ನು ಕೆಸರಿನಲ್ಲಿ ಜಿಪ್ಸಿ ಸಿಕ್ಕಿಹಾಕಿಕೊಂಡಾಗ ರೈಡರ್‍ಗಳ ಮೇಲತ್ತಿಸೋಕೆ ಹರಹಾಸಸ ಪಡ್ತಿದ್ರು. ವಾಟರ್ ಸ್ಟ್ರೀಮಿಂಗ್ ಜಿಪ್ಸಿ ರೈಡ್ ನೋಡೋಕೆ ಥ್ರಿಲಿಂಗ್ ಆಗಿತ್ತು. ಜಿಪ್ಸಿ ಡ್ರೈವ್ ನೋಡ್ದೋರು ನಾವು ಒಮ್ಮೆ ಡ್ರೈಮ್ ಮಾಡೋಕೆ ಅಂದುಕೊಂಡು ಸಖರ್ ಎಂಜಾಯ್ ಮಾಡ್ತಿದ್ರು. ಇನ್ನು ಈ ಸಾಹಸಮಯ ರೈಡ್ ಏರ್ಪಡಿಸಿ ನಾವು ಸಖತ್ ಎಂಜಾಯ್ ಮಾಡಿದ್ವಿ ಹಾಗೂ ಭಾಗವಹಿಸಿದವರಿಗೆ ಪರಿಸರದ ರಕ್ಷಣೆ ಬಗ್ಗೆ ಫಲಕಗಳನ್ನ ಹಾಕಿ ಪರಿಸರ ರಕ್ಷಣೆ ಬಗ್ಗೆ ಮಾಹಿತಿ ನೀಡಿದ್ವಿ ಅಂತಾರೆ ಆಯೋಜಕರು…

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಈ ರೈಡ್ನಲ್ಲಿ ಬೆಂಗಳೂರು, ಹಾಸನ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ 100 ಕ್ಕೂ ಹೆಚ್ಚು ಜನ ಭಾಗಿಯಾಗಿದ್ದು ಈ ಸಾಹಸಮಯ ರೈಡ್ನಲ್ಲಿ ಜಿಪ್ಸಿ ರೈಡ್ ಮಾಡಿದ್ರು. ಇನ್ನು ತೋಟದ ಮಧ್ಯೆ ಹಾವು ಬಳುಕಿನ ಮಡ್ ರಸ್ತೆಯಲ್ಲಿ ಜಿಪ್ಸಿಗಳು ರೈಡರ್ ಗಳು ರೈಡ್ ಮಾಡ್ತಿದ್ರೆ ಕೋ ಡ್ರೈವರ್ಗಳು ಸಖತ್ ಎಂಜಾಯ್ ಮಾಡಿದ್ರು. ಈ ರೈಡ್ನಲ್ಲಿ ಮಾರುತಿ ಸುಜುಕಿ, ಮಹೇಂದ್ರ ಕಂಪನಿಯ ಕಾರುಗಳು ಅಸಾಧ್ಯವೆನಿಸುವ ರಸ್ತೆಗಳಲ್ಲಿ ಮಿಂಚಿನ ವೇಗದಲ್ಲಿ ಸಾಗಿ ಒಂದಕ್ಕೊಂದು ಸೆಡ್ಡು ಹೊಡೆದು ಮುನ್ನುಗುತ್ತಿದ್ದು ರೈಡರ್ ಗಳು ಸಖತ್ ಎಂಜಾಯ್ ಮಾಡಿದ್ರು..

ಜಾಹೀರಾತು

ಒಟ್ನಲ್ಲಿ ಸದಾ ಹೈವೇ ಗುಂಗಲ್ಲಿ ಜಿಪ್ಸಿ ಓಡಿಸುತ್ತಿದ್ದ ರೈಡರ್ ಗಳಿಗೆ ಚಿಕ್ಕಮಗಳೂರಿನ ಕೊಪ್ಪದಲ್ಲಿ ವಾಟರ್ ಸ್ಟ್ರಿಮಿಂಗ್ ಹಾಗೂ ಆಫ್ ರೋಡ್ ಟ್ರ್ಯಾಕ್‍ಗಳಲ್ಲಿ ಡ್ರೈವ್ ಮಾಡಿದ್ದು ಸಖತ್ ಮಜಾ ನೀಡ್ತು, ಮುಂದಿನ ದಿನಗಳಲ್ಲಿ ಸಂಸ್ಥೆಯ ಆಶಯದಂತೆ ಮತ್ತಷ್ಟು ಜಿಪ್ಸಿ ರೈಡರ್‍ಗಳು ಇಂತಹ ಸಾಹಸಮಯ ರೈಡಿಂಗ್‍ನಲ್ಲಿ ಭಾಗಿಯಾಗಲಿ ಎಲ್ಲರ ಆಶಯ….

ಶಿವಕುಮಾರ್ ಹೆಚ್ ಹೆಸ್ ಚಿಕ್ಕಮಗಳೂರು