ಇಂದಿನಿoದ ಸೆಪ್ಟೆಂಬರ್ 7ರವರೆಗೆ ರಾಜ್ಯದ ಜಿಲ್ಲೆಗಳಲ್ಲಿ ಗುಡುಗ ಸಹಿತ ಭಾರೀ ಮಳೆ ; ಯೆಲ್ಲೋ ಅಲರ್ಟ್ ಘೋಷಣೆ – ಕಹಳೆ ನ್ಯೂಸ್
ರಾಜ್ಯದಲ್ಲಿ ಬರಗಾಲ ಬಿಗಡಾಯಿಸಿದೆ ಮುಂಗಾರು ಕೈಕೊಟ್ಟ ಕಾರಣ ಬಿತ್ತನೆ ಮಾಡಿದ ರೈತರು ಮಳೆ, ಬೆಳೆ ಇಲ್ಲದೆ ದಿಕ್ಕು ಕಾಣದಾಗಿದ್ದಾರೆ. ಆದರೆ ಈ ನಡುವೆಯೇ ಹವಾಮಾನ ಇಲಾಖೆ ರೈತರಿಗೊಂದು ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ.
ಮಳೆ ಇಲ್ಲದೆ ಕಂಗಾಲಾಗಿರೋ ನಾಡಿನ ರೈತರಿಗೆ ಸಂತಸದ ಸುದ್ದಿ ಎನ್ನುವಂತೆ ನಾಳೆಯಿಂದ ಕೆಲ ಜಿಲ್ಲೆಗಳಲ್ಲಿ ಭಾರೀ ಗುಡುಗು ಸಿಡಿಲು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಇಲಾಖೆಯು ಇಂದಿನಿAದ ಸೆಪ್ಟೆಂಬರ್ 7ರವರೆಗೆ ರಾಜ್ಯದಲೆಲ್ಲಾ ಭಾರಿ ಗುಡುಗು ಸಿಡಿಲು ಸಹಿತ ಮಳೆಯಾಗಲಿದ್ದು, ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ಬೆಂಗಳೂರು ನಗರ ಹಾಗೂ ಗ್ರಾಮಾಂತರ, ತುಮಕೂರು, ರಾಮನಗರ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಜಿಲ್ಲೆಗಳಲ್ಲಿ ಎಂದು ತಿಳಿಸಿದೆ. ಇಷ್ಟೇ ಅಲ್ಲದೆ ಕೆಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ.
ರಾಜ್ಯದಲ್ಲಿ ನೈರುತ್ಯ ಮುಂಗಾರು ಸಕ್ರೀಯಗೊಂಡ ನಂತರ , ಮುಂದಿನ ಆರು ದಿನಗಳಲ್ಲಿ ಭಾರೀ ಮಳೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ ಲಘು ಮಳೆಯಾಗಲಿದೆ. ಉತ್ತರ ಒಳನಾಡು, ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಜೋರು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.