Wednesday, November 27, 2024
ಸುದ್ದಿ

ಚಂದ್ರನ ಅಂಗಳದಲ್ಲಿ ನಿಗೂಢವಾಗಿ ರೆಕಾರ್ಡ್ ಆದ ಸದ್ದು ಯಾರದ್ದು ಗೊತ್ತಾ..? ಇಲ್ಲಿದೆ ನೋಡಿ..!! – ಕಹಳೆ ನ್ಯೂಸ್

ಚಂದ್ರನಲ್ಲಿ ಆಯ್ತಾ ಏಲಿಯನ್ ದರ್ಶನ..? ಏನದು ಇಸ್ರೋ ನೀಡಿದ ಮಿಸ್ಟರಿ ಈವೆಂಟ್ ಮಾಹಿತಿ ಏನು..? ಆಗಸ್ಟ್ 26ರಂದು ರೆಕಾರ್ಡ್ ಆದ ನಿಗೂಢ ಸದ್ದು ಯಾರದ್ದು ಎನ್ನುವ ಚರ್ಚೆ ಶುರುವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಚಂದ್ರಯಾನ 3 ಉದ್ದೇಶ ನಿಧಾನಕ್ಕೆ ಸಫಲವಾಗುತ್ತಿದೆ. ಚಂದ್ರನ ಮೇಲೆ ಈಗಾಗಲೇ ಆಮ್ಲಜನಕ ಪತ್ತೆಯಾಗಿದೆ ಅಂತ ಇಸ್ರೋ ತಿಳಿಸಿತ್ತು.

ಇದೀಗ ನಿಗೂಢ ಸದ್ದೊಂದು ಕೇಳಿಸಿದ್ದಾಗಿ ಇಸ್ರೋ ಮಾಹಿತಿ ನೀಡಿದೆ. ಹೌದು, ಆಗಸ್ಟ್ 26ರಂದು ಚಂದ್ರನ ಅಂಗಳದಲ್ಲಿ ನಿಗೂಢ ಸದ್ದು ಕೇಳಿ ಬಂದಿದ್ದಾಗಿ ಇಸ್ರೋ ತಿಳಿಸಿದೆ.

ವಿಕ್ರಂ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ ಸದ್ದು ದಾಖಲಾಗಿದೆ. ಜೊತೆಗೆ ನಿಗೂಢ ಸದ್ದೂ ಕೂಡ ರೆಕಾರ್ಡ್ ಆಗಿದೆ.
ಆಗಸ್ಟ್ 25, 2023 ರಂದು ರೋವರ್ ನ್ಯಾವಿಗೇಷನ್ ಸಮಯದಲ್ಲಿ ದಾಖಲಾದ ಕಂಪನಗಳನ್ನು ಚಿತ್ರದಲ್ಲಿ ಚಿತ್ರಿಸಲಾಗಿದೆ. ಹೆಚ್ಚುವರಿಯಾಗಿ, ಆಗಸ್ಟ್ 26, 2023 ರಂದೂ ಕೂಡ ರೆಕಾರ್ಡ್ ಮಾಡಲಾಗಿದೆ.

ಈಗಾಗಲೇ ಚಂದ್ರನ ಅಂಗಳದಲ್ಲಿ ಆಮ್ಲಜನಕ ಇರೋದು ಪತ್ತೆಯಾಗಿದೆ. ಅಲ್ಲದೇ ಕಬ್ಬಿಣ, ಅಲ್ಯೂಮಿನಿಯಂ, ಮ್ಯಾಂಗನೀಸ್ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿದ್ದವು.

ಇದೀಗ ನಿಗೂಢ ಸದ್ದೊಂದು ಪತ್ತೆಯಾಗಿದ್ದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ಏಲಿಯನ್ಸ್ ಇರೋ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ಸದ್ದು ಇದರದ್ದೇ ಇರಬಹುದಾ ಎಂಬ ನಿಟ್ಟಿನಲ್ಲಿಯೂ ಚರ್ಚೆ ನಡೆಯುತ್ತಿದೆ.