Wednesday, November 27, 2024
ಸುದ್ದಿ

ಗೃಹಬಳಕೆ ಸಿಲಿಂಡರ್ ಬೆಲೆ ಮೇಲೆ ಇಳಿಕೆ ಬೆನ್ನಲ್ಲೇ.. : ಎಲ್ ಪಿಜಿ ಸಿಲಿಂಡರ್ ದರದಲ್ಲೂ ಕಡಿತ – ಕಹಳೆ ನ್ಯೂಸ್

ಗೃಹ ಬಳಕೆಯ 14 ಕೆಜಿ ಎಲ್ ಪಿ ಜಿ ಸಿಲಿಂಡರ್ ಗೆ ಕೇಂದ್ರ ಸರಕಾರ ಇನ್ನೂರು ರೂಪಾಯಿ ಸಬ್ಸಿಡಿ ಘೋಷಣೆ ಮಾಡಿದ, ಬೆನ್ನಲ್ಲೇ ಇದೀಗ ವಾಣಿಜ್ಯ ಬಳಕೆಯ ಸಿಲಿಂಡರ್ ದರ ಕೂಡ ಕಡಿತಗೊಂಡಿದೆ.

ಪ್ರತಿ ತಿಂಗಳ ಮೊದಲನೇ ದಿನದಂದು ವಾಣಿಜ್ಯ ಮತ್ತು ಗ್ರಹಬಳಕೆಯ ಎಲ್ಪಿಜಿ ಸಿಲಿಂಡರ್‍ಗಳ ಬೆಲೆ ಪರಿಷ್ಕರಣೆ ಆಗುತ್ತದೆ. ಅದರಂತೆ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ಎಲ್‍ಪಿಜಿ ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು ಪರಿಷ್ಕರಿಸಿದ್ದು, ಬರೋಬ್ಬರಿ 158 ರೂಪಾಯಿ ಕಡಿತಗೊಳಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೇ ತಿಂಗಳಲ್ಲಿ ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ ನ ಬೆಲೆ 172 ರೂಪಾಯಿಗಳು ಕಡಿತಗೊಂಡಿದ್ದು ಮತ್ತೆ ಜೂನ್ ನಲ್ಲಿ 83 ಕಡಿತಗೊಂಡಿತ್ತು. ಆಗಸ್ಟ್ ತಿಂಗಳಿನಲ್ಲಿ ಮತ್ತೆ ನೂರು ರೂಪಾಯಿಯಷ್ಟು ಬೆಲೆ ಕಡಿತ ಉಂಟಾಗಿತ್ತು. ಕೇವಲ ಜುಲೈ ತಿಂಗಳಿನಲ್ಲಿ ಮಾತ್ರ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಕೇವಲ ಏಳು ರೂಪಾಯಿ ಎಷ್ಟು ಹೆಚ್ಚಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 158 ರೂಪಾಯಿಯಾಗಿದ್ದು ವ್ಯಾಪಾರಸ್ಥರ ಮುಖದಲ್ಲಿ ಖುಷಿ ಮೂಡಿದೆ. ಈಗ ಬೆಂಗಳೂರಿನಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 1768 ರೂಪಾಯಿ ಇದ್ದರೆ ದೆಹಲಿಯಲ್ಲಿ ಸಾವಿರದ 1680 ರೂಪಾಯಿ ಇದೆ.