ಮೂಡುಬಿದಿರೆ ಪುರಸಭೆ ನಿಧಿಯಡಿ ನಿರ್ಮಾಣಗೊಂಡ ಗಾಂಧಿನಗರ ಅಂಗವಾಡಿಯ ನೂತನ ಕೊಠಡಿ ಉದ್ಘಾಟಿಸಿದ ಶಾಸಕ ಉಮಾನಾಥ್ ಕೋಟ್ಯಾನ್ – ಕಹಳೆನ್ಯೂಸ್
ಮೂಡುಬಿದಿರೆ: “ರಾಜ್ಯ ಸರ್ಕಾರ ಅನುದಾನ ಬಿಡುಗಡೆಯಾದ ಕೂಡಲೇ ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳ ನಡೆಯಲಿದೆ. ಗಾಂಧಿನಗರದಲ್ಲಿ ಹೊಸ ಪಾರ್ಕ್ ನಿರ್ಮಾಣವಾಗುತ್ತಿದೆ. ಬಂಟ್ವಾಳದಿಂದ ಪೇಪರ್‍ಮಿಲ್ಲ್ ಮಾರ್ಗವಾಗಿ ಬರುವವರಿಗೆ ನೇರವಾಗಿ ಮಂಗಳೂರಿಗೆ ಹೋಗಲು ಮಾಸ್ತಿಕಟ್ಟೆ, ಗಾಂಧಿನಗರ ಮಾರ್ಗವಾಗಿ ರಿಂಗ್‍ರೋಡ್ ಕಾಮಗಾರಿ ನಡೆಯುತ್ತಿದೆ. ಇದರಿಂದ ಮೂಡುಬಿದಿರೆ ನಗರದಲ್ಲಿ ವಾಹನದಟ್ಟಣೆ ಕಡಿಮೆಯಾಗಲಿದೆ” ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
2020-21ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿ ಹಾಗೂ 2022-23ನೇ ಸಾಲಿನ ಪುರಸಭೆ ನಿಧಿಯಡಿ ನಿರ್ಮಾಣಗೊಂಡ ಗಾಂಧಿನಗರ ಅಂಗವಾಡಿ ಕೇಂದ್ರದ ನೂತನ ಕೊಠಡಿಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಗುತ್ತಿಗೆದಾರ ಎಂ.ಕಣ್ಣನ್ ಅವರನ್ನು ಸನ್ಮಾನಿಸಲಾಯಿತು. ಅಂಗನವಾಡಿ ಕೇಂದ್ರದ ಹಳೇ ವಿದ್ಯಾರ್ಥಿನಿ, ಝೀ ಕನ್ನಡ ವಾಹಿನಿಯ ಡಾನ್ಸ್ ಕರ್ನಾಟಕ ಡಾನ್ಸ್ ಸ್ಪರ್ಧಿ ಚೈತನ್ಯ ಅವರನ್ನು ಅಭಿನಂದಿಸಲಾಯಿತು.
ವಾರ್ಡ್ ಸದಸ್ಯೆ ದಿವ್ಯಾ ಜಗದೀಶ್, ಪುರಸಭೆ ಸದಸ್ಯರಾದ ನವೀನ್ ಶೆಟ್ಟಿ, ನಾಗರಾಜ ಪೂಜಾರಿ, ಶ್ವೇತಾ ಪ್ರವೀಣ್, ಸುಜಾತ ಶಶಿಕಿರಣ, ಧನಲಕ್ಷ್ಮೀ ಮಾರೂರು, ಜಯಶ್ರೀ ಕೇಶವ್, ಸೌಮ್ಯ ಶೆಟ್ಟಿ, ಮುಖ್ಯಾಧಿಕಾರಿ ಶಿವಾ ನಾಯ್ಕ್, ಇಂಜಿನಿಯರ್ ನಳಿನ್ ಕುಮಾರ್, ಗಾಂಧಿನಗರ ಉದ್ಯಮಿ ಕೆ.ಶ್ರೀಪತಿ ಭಟ್, ಹಿತರಕ್ಷಣಾ ಸಮಿತಿಯ ಅಧ್ಯಕ್ಷ ರವೀಂದ್ರ ಎನ್., ಕಾರ್ಯದರ್ಶಿ ಪ್ರಭಾಕರ ಆಚಾರ್ಯ, ಸಂಚಾಲಕ ಹರೀಶ್ ಎಂ.ಕೆ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಾ, ಗಾಂಧಿನಗರ ಸರ್ಕಾರಿ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಕಸ್ತೂರಿ, ಅಂಗವಾಡಿ ಕಾರ್ಯಕರ್ತೆ ಜಯಂತಿ, ಸಹಾಯಕಿ ಸುಜಾತ, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಸೌಮ್ಯ ಲತಾ ನಾಯಕ್, ಸ್ತ್ರೀ ಶಕ್ತಿ ಅಧ್ಯಕ್ಷೆ ರವಿಕಲ ಮತ್ತಿತರರು ಉಪಸ್ಥಿತರಿದ್ದರು.
ಗಾಂಧಿನಗರ ಶಾಲೆಗೆ ನೂತನ ಸುಸಜಿತ ಕಟ್ಟಡ, ಶೌಚಾಲಯ, ಶಾಲಾ ವಠಾರವನ್ನು ಅಭಿವೃದ್ಧಿ ಪಡಿಸಲು ಉಮಾನಾಥ ಎ ಕೋಟ್ಯಾನ್ ಅವರಿಗೆ ಶಿಕ್ಷಕರು, ಎಸ್‍ಡಿಎಂಸಿಯವರು ಮನವಿ ಸಲ್ಲಿಸಿದರು.