ವಿಟ್ಲದಲ್ಲಿ ಪ್ರಪ್ರಥಮ ಬಾರಿಗೆ ಬೃಹತ್ ಸಸ್ಯಮೇಳ ಮತ್ತು ಆಹಾರ ಮೇಳ, ಮ್ಯೂಸಿಕಲ್ ನೈಟ್ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ವಿಟ್ಲ ಜೆ ಎಲ್ ಅಡಿಟೋರಿಯಂ ನಲ್ಲಿ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರು ತಾಲೂಕಿನ ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಅಧ್ಯಕ್ಷರಾದ ರಾಮದಾಸ್ ಶೆಟ್ಟಿ ಇವರು ಮಾಡಿದರು ಲಯನ್ಸ್ ಜಿಲ್ಲೆ 317-ಡಿ ನಿಕಟ ಪೂರ್ವ ಪ್ರಾಂತೀಯ ಅಧ್ಯಕ್ಷರು ವಿ.ಎನ್ ಸುದರ್ಶನ್ ಪಡಿಯಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
ಅತಿಥಿಗಳಾಗಿ ಆಹಾರ ಮೇಳದ ವ್ಯವಸ್ಥಾಪಕ ಜಯರಾಮ್ ಬುಳೇರಿಕಟ್ಟೆ, ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಸದಾನಂದ ಗೌಡ ಸೇರಾಜೆ, ಲಯನ್ಸ್ ಕ್ಲಬ್ ವಿಟ್ಲ ಸಿಟಿ ನಿರ್ದೇಶಕ ಮೋಹನ್ ಕಟ್ಟೆ, ಆಹಾರ ಮೇಳದ ವ್ಯವಸ್ಥಾಪಕ ಪ್ರಶಾಂತ್ ರೈ, ಲಯನ್ಸ್ ವಿಟ್ಲ ಸಿಟಿ ಅಧ್ಯಕ್ಷ ಜಯರಾಮ್ ಬಲ್ಲಾಳ್ ವಿಟ್ಲ ಅರಮನೆ, ಪುತ್ತೂರು ಶಾರದಾಂಭಾ ವಿವಿಧೋದ್ದೇಶ ಸಹಕಾರಿ ಸಂಘ ಅಧ್ಯಕ್ಷ ವಿಜಯ್ ಕುಮಾರ್ ಕೈಪಂಗಳ, ವಿಟ್ಲ ಜೆ.ಎಲ್ ಆಡಿಟೋರಿಯಂ ಮಾಲಕ ಗುರುರಾಜ್ ಎನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಾಲಿಂಗ ನಾಯ್ಕ ಅಮೈ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನುಅಶ್ವಿನಿ ಪೆರುವಾಯಿ ನಿರೂಪಿಸಿ, ಜಯರಾಮ್ ಬಲ್ಲಾಳ್ ಧನ್ಯವಾದವಿತ್ತರು.