ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ಅಂತಾರಾಜ್ಯ ಮಟ್ಟದ ಬಹುಭಾಷಾ ಕವಿಗೋಷ್ಠಿ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಸಮಿತಿಯ ನೂತನ ಪದಾಧಿಕಾರಿಗಳ ಘೋಷಣೆ ಸಮಾರಂಭ – ಕಹಳೆ ನ್ಯೂಸ್
ಕಲ್ಲಡ್ಕ : ಶ್ರೀರಾಮ ವಿದ್ಯಾಕೇಂದ್ರದ ಅಜಿತ ಸಭಾಂಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಸಮಿತಿಯ ನೂತನ ಪದಾಧಿಕಾರಿಗಳ ಘೋಷಣೆ ಸಮಾರಂಭ ಹಾಗೂ ಅಂತಾರಾಜ್ಯ ಮಟ್ಟದ ಬಹಭಾಷಾ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು.
ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಭಾರತದಲ್ಲಿ ಹುಟ್ಟಿ ಬೆಳೆದ ಭಾಷೆಗಳೆಲ್ಲ ರಾಷ್ಟ್ರೀಯ ಭಾಷೆಗಳು. ಭಾಷೆ ನಮ್ಮ ಸಂಸ್ಕೃತಿಯ ಪ್ರತೀಕ. ಭಾಷೆಯ ವಿಚಾರದಲ್ಲಿ ಸಂಘರ್ಷ ಬೇಡ. ಭಾವೈಕ್ಯ ಇರಲಿ. ಹಿರಿಯ ಸಾಹಿತಿಗಳು ಕಿರಿಯ ಸಾಹಿತಿಗಳಿಗೆ ಪ್ರೇರಣೆಯಾಗಲಿ ಎಂದು ಹೇಳಿದರು.
ಬಳಿಕ ಮಾತನಾಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪಿ.ಬಿ. ಹರೀಶ ರೈ ಪತ್ರಕರ್ತರಲ್ಲಿ ರಾಷ್ಟ್ರೀಯವಾದಿ ಪತ್ರಕರ್ತರು, ವಿಚಾರವಾದಿ ಪತ್ರಕರ್ತರು ಎಂಬ ವಿಭಜನೆ ಸಲ್ಲದು. ರಾಷ್ಟ್ರೀಯತೆಯ ಭಾವ ಎಲ್ಲರಲ್ಲೂ ಇರಬೇಕಾಗಿದೆ ಎಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಡಾ.ಸುರೇಶ ನೆಗಳಗುಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮಂಗಳೂರು ವಿಭಾಗ ಸಂಯೋಜಕ ಸುಂದರ ಶೆಟ್ಟಿ ನೂತನ ಪದಾಧಿಕಾರಿಗಳ ಘೋಷಣೆ ಮಾಡಿದರು. ಗೌರವ ಸಲಹೆಗಾರ ಜಯಾನಂದ ಪೆರಾಜೆ ಉಪಸ್ಥಿತರಿದ್ದರು.
ಶ್ರೀರಾಮ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಬಾಲಕೃಷ್ಣ ಸ್ವಾಗತಿಸಿ, ಪ್ರಶಾಂತ ಕಡ್ಯ ವಂದಿಸಿದರು. ಅಶೋಕ ಕುಮಾರ ಕಲ್ಯಾಟೆ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿನಿಯರು ಅತಿಥಿಗಳಿಗೆ, ಕವಿಗಳಿಗೆ ರಕ್ಷಾ ಬಂಧನ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಹಿರಿಯ ಪತ್ರಕರ್ತ ರೇಮಂಡ್ ಡಿಕೂನ ತಾಕೋಡೆ ಅಧ್ಯಕ್ಷತೆಯಲ್ಲಿ ವಿದ್ಯಾರ್ಥಿ ಕವಿಗೋಷ್ಠಿ ನಡೆಯಿತು. ಅಂತಾರಾಜ್ಯ ಮಟ್ಟದ ಬಹು ಭಾಷಾ ಕವಿಗೋಷ್ಠಿಯು ಜಯಾನಂದ ಪೆರಾಜೆ ಅಧ್ಯಕ್ಷತೆಯಲ್ಲಿ ಸಂಪನ್ನಗೊoಡಿತು.