Thursday, November 28, 2024
ಸುದ್ದಿ

ಕ್ರಿಕೆಟ್ ಪ್ರೇಮಿಗಳಿಗೆ ನಿರೀಕ್ಷೆ : ಇಂಡಿಯಾ ಹಾಗೂ ಪಾಕ್ ಕಾತುರದ ಆಟಕ್ಕೆ ತಣ್ಣಿರು ಸುರಿಸಿದ ಮಳೆರಾಯ –ಕಹಳೆ ನ್ಯೂಸ್

ನಿನ್ನೆ ಕ್ರಿಕೆಟ್ ಪ್ರೇಮಿಗಳು ಕಾತುರ ಕುತೂಹಲದಿಂದ ಕಾದು ಕುಳಿತಿದ್ದ ಆಟಕ್ಕೆ ಮಳೆರಾಯ ತಣ್ಣಿರು ಸುರಿಸಿ, ನಿರಾಸೆಯ ಕಡಲನ್ನೆ ಸೃಷ್ಟಿಸಿ ಬಿಟ್ಟಿದ್ದ..

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ್ರು. ಆದ್ರೆ, ರೋಹಿತ್ ಲೆಕ್ಕಚಾರಗಳೆಲ್ಲ ಉಲ್ಟಾ ಆಯ್ತು. ಮೊದಲ ಪವರ್ ಪ್ಲೇನಲ್ಲೇ ಟೀಮ್ ಇಂಡಿಯಾ 4 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

5ನೇ ವಿಕೆಟ್‌ಗೆ ಜೊತೆಯಾದ ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ತಂಡಕ್ಕೆ ಆಸರೆಯಾದ್ರು. 138 ರನ್‌ಗಳ ಜೊತೆಯಾಟವಾಡಿದ ಈ ಜೋಡಿ, ಪಾಕ್ ಬೌಲರ್‌ಗಳನ್ನ ಕಾಡಿದರು. ಒತ್ತಡದಲ್ಲೂ ಆತ್ಮವಿಶ್ವಾಸದಿಂದ ಬ್ಯಾಟಿಂಗ್ ನಡೆಸಿದ ಈ ಜೋಡಿ, ಪಾಕ್ ದಾಳಿಯನ್ನ ಧೂಳೀಪಟ ಮಾಡಿತ್ತು. ಅಷ್ಟೇ ಅಲ್ಲ, ಉಭಯ ಬ್ಯಾಟ್ಸ್ ಮ್ಯಾನ್ ತಲಾ ಅರ್ಧಶತಕ ಸಿಡಿಸಿ ಮಿಂಚಿದರು.

ಅರ್ಧಶತಕ ಸಿಡಿಸುತ್ತಿದ್ದಂತೆ ಬಿಗ್ ಹಿಟ್ಟಿಂಗ್‌ಗೆ ಮೊರೆಹೋದ ಇಶಾನ್ ಕಿಶನ್ 82 ರನ್ ಗಳಿಸಿ ಔಟಾದರೆ, ಹಾರ್ದಿಕ್ ಪಾಂಡ್ಯ ಹೋರಾಟ 87 ರನ್‌ಗಳಿಗೆ ಅಂತ್ಯಗೊoಡಿತು. ಜಡೇಜಾ 14 ರನ್, ಶಾರ್ದೂಲ್ 3 ರನ್ ಮತ್ತು ಬೂಮ್ರಾ16 ರನ್ ಗಳಿಸಿದ್ರು. ಅಂತಿಮವಾಗಿ ಟೀಮ್ ಇಂಡಿಯಾ 48.5 ಓವರ್‌ಗಳಲ್ಲಿ 266 ರನ್‌ಗಳಿಗೆ ಆಲೌಟ್ ಆಯ್ತು. ಪಾಕ್ ಪರ ಶಾಹೀನ್ ಅಫ್ರಿದಿ 4 ಮತ್ತು ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ ತಲಾ 3 ವಿಕೆಟ್ ಪಡೆದ್ರು.

ಟೀಮ್ ಇಂಡಿಯಾದ ಬ್ಯಾಟಿಂಗ್ ಮುಗಿದಿದ್ದೆ ತಡ, ಮಳೆರಾಯ ಬ್ಯಾಟಿಂಗ್ ಶುರುಮಾಡಿಬಿಟ್ಟಿದ್ದ.. ಕೊನೆಯವರೆಗೂ ಕಾದು ಕಾದು ಅಂಪೈರ್ಸ್ ಹಾಗೂ ಪ್ಲೇಯರ್ಸ್ ಸುಸ್ತಾದ್ರು. ಎಷ್ಟೇ ಕಾದರೂ ಮಳೆ ನಿಲ್ಲದ ಕಾರಣ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್, ಪಂದ್ಯ ರದ್ದುಗೊಳಿಸಿದ್ರು. ಉಭಯ ತಂಡಗಳು ತಲಾ ಒಂದು ಅಂಕ ಸಂಪಾದಿಸಿದ್ವು. ಇದರೊಂದಿಗೆ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದ ಪಾಕಿಸ್ತಾನ ಸೂಪರ್-4 ಎಂಟ್ರಿ ನೀಡ್ತು.