ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಬಂಟ್ವಾಳ ತಾಲೂಕಿನ ಕಡೇಶಿವಾಲಯ ಹಿರಿಯ ಪ್ರಾಥಮಿಕ ಶಾಲೆಯ 13 ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ – ಕಹಳೆ ನ್ಯೂಸ್
ಬಂಟ್ವಾಳ : ಕೆಮ್ಮಾನುಪಲ್ಕೆ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸರಕಾರಿ ಪ್ರಾಥಮಿಕ ಶಾಲೆ ಕಡೇಶಿವಾಲಯ ಸಮಗ್ರ ಪ್ರಶಸ್ತಿ ಪಡೆದುಕೊಂಡು 13 ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಧಾರ್ಮಿಕ ಪಠಣ ಮತ್ತು ಕಥೆ ಹೇಳುವುದು ಅಹನಾ ಹೆಗ್ಡೆ ಪ್ರಥಮ, ಭಕ್ತಿ ಗೀತೆ ನಿಧಿ ಎಸ್ ಪ್ರಥಮ, ಲಘು ಸಂಗೀತ ನಿಧಿ ಎಸ್ ದ್ವಿತೀಯ, ಅಭಿನಯ ಗೀತೆ ಆರಾಧ್ಯ ಜಿ ಪ್ರಥಮ, ಛದ್ಮವೇಶ ಆರಾಧ್ಯ ಜಿ ದ್ವಿತೀಯ, ಕ್ಲೇ ಮಾಡಲಿಂಗ್ ವೈಶಾಖ್ ಪ್ರಥಮ, ಆಶುಭಾಷಣ ಸಿಂಚನ ದ್ವಿತೀಯ, ಚಿತ್ರಕಲೆ ಆಶ್ರಯ್. ಬಿ.ಎಸ್ ದ್ವಿತೀಯ, ಧಾರ್ಮಿಕ ಪಠಣ ತನ್ವಿ ತೃತೀಯ, ಕಥೆ ಹೇಳುವುದು ಕೆ.ಜಾಹ್ನವಿ ಪ್ರಥಮ, ಅಭಿನಯ ಗೀತೆ ರಶ್ಮಿ ದ್ವಿತೀಯ, ಭಕ್ತಿಗೀತೆ ಧನ್ವಿತ್ ಪ್ರಥಮ, ಆಶುಭಾಷಣ ತನಿಷ್ಕ. ಪಿ.ಎಸ್ ದ್ವಿತೀಯ, ಚಿತ್ರಕಲೆ ಶ್ರವಣ್ ಪ್ರಥಮ, ಮಿಮಿಕ್ರಿ ತನಿಷ್ಕ ಪಿ ಎಸ್ ಪ್ರಥಮ, ಕನ್ನಡ ಕಂಠಪಾಠ ಡಿ.ಶಂಕರ ಪ್ರಥಮ, ಇಂಗ್ಲೀಷ್ ಕಂಠಪಾಠ ಕೃತಿ ಪ್ರಥಮ, ಹಿಂದಿ ಕಂಠಪಾಠ ಮಾನಸ ಪ್ರಥಮ, ಕವನ ವಾಚನ ಮಾನಸ ಪ್ರಥಮ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಶಾಲಾ ಪರವಾಗಿ ಅಭಿನಂದಿಸಲಾಯಿತು