Thursday, November 28, 2024
ಸುದ್ದಿ

ಚಂದ್ರನ ಅಂಗಳದಲ್ಲಿ ಪ್ರಜ್ಞಾನ್ ರೋವರ್ ಸಂಚಾರ ಅಂತ್ಯ : ಇಲ್ಲಿಂದಲೇ ಹೊಸ ಮೈಲಿಗಲ್ಲು ಆರಂಭ..!? – ಕಹಳೆ ನ್ಯೂಸ್

ಚಂದ್ರನ ದಕ್ಷಿಣ ಧ್ರುವದಲ್ಲಿ ತಮ್ಮದೇ ಚರಿತ್ರೆ ಸೃಷ್ಟಿಸಲು ಮುಂದಾಗಿದ್ದ ವಿಕ್ರಮ್-ಪ್ರಗ್ಯಾನ್ ತನ್ನ ತಾಕತ್ತನ್ನು ಪ್ರದರ್ಶಿಸಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ಖನಿಜಗಳು ಇರುವಿಕೆಯನ್ನೂ ಪತ್ತೆ ಹಚ್ಚಿತ್ತು. ಈ ಮೂಲಕ ಇಡೀ ಜಗತ್ತನ್ನೇ ಮತ್ತೆ ತನ್ನತ್ತ ನೋಡುವಂತೆ ಮಾಡಿತ್ತು. ಈ ನಡುವೆ ಪ್ರಜ್ಞಾನ್ ರೋವರ್ ಚಂದಿರನ ಮೇಲೆ 100 ಮೀಟರ್ ಸಂಚಾರ ನಡೆಸಿದೆ. ಈ ಬಗ್ಗೆ ಖುದ್ದು ಇಸ್ರೋ ಸಂಸ್ಥೆ ಮಾಹಿತಿ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದು ಇಸ್ರೋ ರಿಲೀಸ್ ಮಾಡಿರೋ ಫೋಟೋಗಳು.. ಚಂದ್ರನ ಮೇಲೆ ಪ್ರಗ್ಯಾನ್ ಓಡಾಟದ ಫೋಟೋಗಳನ್ನ ಇಸ್ರೋ ಎಕ್ಸ್ನಲ್ಲಿ ಹಂಚಿಕೊoಡಿದೆ. ಈ ಫೋಟೋವನ್ನ ಸೂಕ್ಷ್ಮವಾಗಿ ಗಮನಿಸಿದ್ರೆ, ಶಿವಶಿಕ್ತಿ ಪಾಯಿಂಟ್‌ನಿoದ ಸುಮಾರು 100 ಮೀಟರ್‌ನಷ್ಟು ದೂರದವರೆಗೆ ಚಲಿಸಿರೋದನ್ನ ಕಾಣಬಹುದು. ಮಾರ್ಗ ಮಧ್ಯೆ ದೊಡ್ಡ ಕುಳಿಯೊಂದು ಎದುರಾದ ಕಾರಣ ಪ್ರಗ್ಯಾನ್ ತನ್ನ ಪಥವನ್ನ ಬದಲಿಸಿತ್ತು. ಹೀಗೆ ಮಾರ್ಗವನ್ನ ಬದಲಿಸಿದ್ದ ರೋವರ್ ಮುಂದೆ ಸಾಗಿ ಅಧ್ಯಯನ ನಡಿಸಿತ್ತು. ಇದೆಲ್ಲವೂ ಇಸ್ರೋ ರಿಲೀಸ್ ಮಾಡಿರೋ ಫೋಟೋದಲ್ಲಿ ಸ್ಪಷ್ಟವಾಗಿ ಗೋಚರಿಸ್ತಿದೆ. ಇನ್ನು, ವಿಕ್ರಮ್ ಲ್ಯಾಂಡರ್ ಶಿವಶಕ್ತಿ ಪಾಯಿಂಟ್ ಬಳಿಯೇ ಇದ್ದು, ಪ್ರಗ್ಯಾನ್ ಪತ್ತೆ ಹಚ್ತಿರೋ ಮಾಹಿತಿಯನ್ನ ಪಡೆದುಕೊಳ್ತಿದೆ.
ಇಲ್ಲಿಗೆ ಪ್ರಗ್ಯಾನ್ ಪರಾಕ್ರಮ ಅಂತ್ಯವಾಯ್ತು ಅಂತಲ್ಲ.. ಅಸಲಿಗೆ ಇಲ್ಲಿಂದಲೇ ಶುರುವಾಗೋದು. ಸದ್ಯಕ್ಕೆ ಕಾರ್ಯಾಚರಣೆ ಸ್ಥಗಿತಗೊಳಿಸಿ ವಿಶ್ರಾಂತಿಗೆ ಜಾರಿರೋ ರೋವರ್ 14 ದಿನದ ಬಳಿಕ ಮತ್ತೆ ಸಕ್ರಿಯಗೊಳ್ಳಲಿದೆ. ಸೂರ್ಯನ ಬೆಳಕಿನ ಕಿರಣವನ್ನ ಪಡೆದುಕೊಂಡು ಮತ್ತೆ ಉತ್ಸಾಹ ತುಂಬಿಕೊಳ್ಳಲಿರೋ ಪ್ರಗ್ಯಾನ್ ಮತ್ತೊಂದು ಸುತ್ತಿನ ಅಸೈನ್‌ಮೆಂಟ್‌ಗೆ ಸಿದ್ಧವಾಗುವ ಭರವಸೆ ಇದೆ.

ಒಂದು ವೇಳೆ 14 ದಿನಗಳ ಬಳಿಕ ಪ್ರಗ್ಯಾನ್ ಮರಳಿ ಕಾರ್ಯ ನಿರ್ವಹಿಸಲು ಸಾಧ್ಯವಾಗದಿದ್ದರೆ, ಭಾರತದ ಚಂದ್ರನ ರಾಯಭಾರಿಯಾಗಿ ಶಾಶ್ವತವಾಗಿ ಉಳಿಯಲಿದೆ ಅಂತಾ ಇಸ್ರೋ ತಿಳಿಸಿದೆ. ಆದ್ರೆ ಮತ್ತೊಂದು ಸುತ್ತಿನ ಕಾರ್ಯಾಚರಣೆಗೆ ಸಿದ್ಧವಾಗಲಿದೆ ಅನ್ನೋ ವಿಶ್ವಾಸ ವಿಜ್ಞಾನಿಗಳದ್ದು. ಹೀಗಾಗಿ ಸೆಪ್ಟೆಂಬರ್ 22ರ ಚಂದ್ರನ ಮೇಲೆ ಬೀಳೋ ಸೂರ್ಯನ ಕಿರಣದ ಮೇಲೆ ಇಸ್ರೋ ಕಣ್ಣಿಟ್ಟು ಕಾಯುತ್ತಿದೆ. ಈ ನಡುವೆ ರೋವರ್ ಇದುವರೆಗೂ ಸಂಗ್ರಹಿಸಿರೋ ಮಾಹಿತಿ ಆಧಾರದಲ್ಲಿ ವಿಜ್ಞಾನಿಗಳು ಸಂಶೋಧನೆಗಳನ್ನ, ಅಧ್ಯಯನಗಳನ್ನ ಮುಂದುವರಿಸಲಿದ್ದಾರೆ. 14 ದಿನಗಳ ಬಳಿಕ ಚಂದ್ರ ದಕ್ಷಿಣ ಧ್ರುವದಲ್ಲಿ ಮತ್ತೆ ರೋವರ್ ಆಕ್ಟಿವ್ ಆದ್ರೆ, ಮತ್ತೊಂದು ಮೈಲಿಗಲ್ಲು ಸಾಧಿಸಿದಂತೆ. ಆಗ ಭಾರತ ಮತ್ತಷ್ಟು ಸಮಯ ಚಂದ್ರನ ಮೇಲಿನ ಪಯಣ ಕಂಟಿನ್ಯೂ ಆಗೋ ಸಾಧ್ಯತೆಯೂ ಇರಲಿದೆ.