Thursday, November 28, 2024
ಸುದ್ದಿ

ಬಿಯರ್ ನಲ್ಲಿ ಸೆಡಿಮೆಂಟ್ ಅಂಶ ಪತ್ತೆ : ಸುಮಾರು 33 ಲಕ್ಷ ಮೌಲ್ಯದ ಬಿಯರ್ ನಾಶಪಡಿಸಿದ ಅಬಕಾರಿ ಅಧಿಕಾರಿಗಳು – ಕಹಳೆ ನ್ಯೂಸ್

ದೊಡ್ಡಬಳ್ಳಾಪುರ: ಬಿಯರ್ ನಲ್ಲಿ ಸೆಡಿಮಂಟ್ ಅಂಶ ಶೇಖರಣೆಯಾಗಿರುವ ಹಿನ್ನೆಲೆ ಸುಮಾರು 33ಲಕ್ಷ ರೂ. ಮೌಲ್ಯದ ಬಿಯರ್ ಬ್ರಾಂಡ್ ಬಾಟಲಿಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ನಾಶಪಡಿಸಿದ್ದಾರೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿರುವ ಯುನೈಟೆಡ್ ಬ್ರಿವರೀಸ್ ಲಿಮಿಟೆಡ್‍ನಲ್ಲಿ ಜುಲೈ 15 ರಂದು 7ಇ ಮತ್ತು 7ಸಿ ಬ್ಯಾಚ್‍ನಲ್ಲಿ ತಯಾರಾದ ಪ್ರತಿಷ್ಠಿತ ಬ್ರಾಂಡ್‍ನ ಸ್ಟ್ರಾಂಗ್ ಮತ್ತು ಅಲ್ಟ್ರಾ ಲ್ಯಾಗರ್ ಬಿಯರ್‍ನಲ್ಲಿ ಸೆಡಿಮೆಂಟ್ ಅಂಶ ಪತ್ತೆಯಾಗಿತ್ತು. ಮಾನವ ಆರೋಗಕ್ಕೆ ಸೆಡಿಮೆಂಟ್ ಅಂಶ ಹಾನಿ ಮಾಡುವ ಹಿನ್ನೆಲೆ ಬಿಯರ್ ನಾಶ ಮಾಡುವಂತೆ ಅಬಕಾರಿ ಇಲಾಖೆಯ ಅಧಿಕಾರಿಗಳು ಆದೇಶ ನೀಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಬಕಾರಿ ಇಲಾಖೆಯ ಉಪ ಆಯುಕ್ತರ ಆದೇಶದ ಹಿನ್ನೆಲೆಯಲ್ಲಿ 1,272 ಪೆಟ್ಟಿಗೆಗಳನ್ನು ಮತ್ತು ದೊಡ್ಡಬಳ್ಳಾಪುರ ವಲಯದ 06 ಸನ್ನದುಗಳಿಗೆ ಕೆ.ಎಸ್.ಬಿ.ಸಿ.ಎಲ್. ಮದ್ಯ ಮಳಿಗೆ ಬಾಶೆಟ್ಟಿಹಳ್ಳಿಯಿಂದ ಸರಬರಾಜಾದ 149 ಬಾಟಲಿಗಳನ್ನು ಸನ್ನದುಗಳಿಂದ ವಾಪಸ್ ಪಡೆದು ಒಟ್ಟು 33 ಲಕ್ಷ ಮೌಲ್ಯದ ದಾಸ್ತಾನನ್ನು ನಾಶಪಡಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಬಕಾರಿ ಉಪ ಆಯುಕ್ತ ನೇತೃತ್ವದಲ್ಲಿ ಅಬಕಾರಿ ಅಧೀಕ್ಷಕರು ಲಕ್ಷ್ಮೀನಾರಾಯಣ್, ನೆಲಮಂಗಲ ಉಪವಲಯ ಅಬಕಾರಿ ನಿರೀಕ್ಷಕ ಪರಮೇಶ್ವರಪ್ಪ, ದೊಡ್ಡಬಳ್ಳಾಪುರ ವಲಯ ಅಬಕಾರಿ ನಿರೀಕ್ಷಕಿ ಎಸ್.ಎಂ.ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.