ಹೊಡಿ.. ಬಿಡ್ಬೇಡ ಅವ್ನಾ…! : ಚಪ್ಪಲಿ ಕೀತ್ ಹೋಗೋವಂತೆ ಗ್ರಾ.ಪಂ ಮಾಜಿ ಅಧ್ಯಕ್ಷನಿಗೆ ಬಾರಿಸಿದ ಮಹಿಳೆಯರು – ಕಹಳೆ ನ್ಯೂಸ್
ಮಹಿಳೆಯರಿಗೆ ಕಿರುಕುಳ ನೀಡಿ ಕೆಟ್ಟದಾಗಿ ವರ್ತನೆ ಮಾಡುತ್ತಿದ್ದ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷನಿಗೆ ಮಹಿಳೆಯರೇ ಸೇರಿ ಚಪ್ಪಲಿಯಿಂದ ಹಿಗ್ಗಾಮುಗ್ಗ ಥಳಿಸಿ ಗೂಸ ನೀಡಿದ್ದಾರೆ.
ರಾಜಸ್ತಾನದ ಭಿಲ್ವಾರಾ ಜಿಲ್ಲೆಯ ಸಮೀಪದ ಕಸ್ಬಾ ಕಚೋಲಾ ಪಟ್ಟಣದಲ್ಲಿ ಘಟನೆ ನಡೆದಿದ್ದು, ಪಂಚಾಯತಿಯ ಮಾಜಿ ಅಧ್ಯಕ್ಷರಾಗಿದ್ದ ಪ್ರಹ್ಲಾದ್ ನಾಥ್ ಮಹಿಳೆಯರಿಂದ ಬಾಸುಂಡೆ ಬಾರೋವರೆಗೂ ಬಿಸಿಬಿಸಿ ಕಜ್ಜಾಯ ತಿಂದ ವ್ಯಕ್ತಿ..
ಈತ ಮಹಿಳೆಯರ ಜೊತೆ ಕೆಟ್ಟದಾಗಿ ವರ್ತನೆ ಮಾಡಿ, ಕಿರುಕುಳ ನೀಡುತ್ತಿದ್ದನು. ಇದರಿಂದ ಗ್ರಾಮದ ಮಹಿಳೆಯರು ಬೇಸತ್ತಿದ್ದರು. ಹೀಗಾಗಿ ನೊಂದ ಮಹಿಳೆಯರ ಗುಂಪು ಮಾಜಿ ಅಧ್ಯಕ್ಷ ಪ್ರಹ್ಲಾದ್ ನಾಥ್ ಮೇಲೆ ದಾಳಿ ಮಾಡಿದ್ದಾರೆ. ಮನಬಂದoತೆ ಥಳಿಸಿ ಮೈ ಮೇಲಿದ್ದ ಬಟ್ಟೆ ಹರಿದು ಹಾಕಿದ್ದಾರೆ. ಅಲ್ಲದೇ ಚಪ್ಪಲಿ ತಗೊಂಡು ಮುಖ ಮುಖ ಹೊಡೆದು ಹಾಕಿದ್ದಲ್ಲದೇ, ಕೋಲಿನಿಂದಲು ಬಾರಿಸಲಾಗಿದೆ ಎಂದು ಹೇಳಲಾಗಿದೆ.
ಈ ವೇಳೆ ಪ್ರಹ್ಲಾದ್ ನಾಥ್ ಮಹಿಳೆಯರಿಂದ ತಪ್ಪಿಸಿಕೊಂಡು ಓಡಿ ಹೋಗಿ ಪಕ್ಕದ ಅಂಗಡಿಯೊoದರಲ್ಲಿ ಆಶ್ರಯ ಪಡೆದಿದ್ದನು. ಅಲ್ಲಿಗೆ ತೆರಳಿದ ಮಹಿಳೆಯರು ಹೊಡೆಯುವುದನ್ನು ಮುಂದುವರೆಸಿದ್ದಾರೆ. ಈ ವೇಳೆ ನೂರಾರು ಜನ ನಿಂತು ನೀಡುತ್ತಿದ್ದರೂ ಯಾರೋಬ್ಬರು ಸಹಾಯಕ್ಕೆ ಬಂದಿಲ್ಲ. ನಂತರ ಸುದ್ದಿ ತಿಳಿದು, ಸ್ಥಳಕ್ಕಾಗಮಿಸಿದ ಪೊಲೀಸರು ಗೂಸ ತಿಂದ ಮಾಜಿ ಅಧ್ಯಕ್ಷನನ್ನು ಠಾಣೆಗೆ ಕರೆದೊಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.