Friday, November 29, 2024
ಸುದ್ದಿ

ಅನೂರ್ಜಿತ ವಿವಾಹದಿಂದ ಜನಿಸಿದ ಮಕ್ಕಳು ಪೋಷಕರ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರು ಎಂದು ತೀರ್ಪು ಹೊರಡಿಸಿದ ಸುಪ್ರೀಂಕೋರ್ಟ್ – ಕಹಳೆ ನ್ಯೂಸ್

ಅನೂರ್ಜಿತ ವಿವಾಹದಿಂದ ಜನಿಸಿದ ಮಕ್ಕಳು ಕೂಡ ಪೋಷಕರ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರು ಎಂದು ಸುಪ್ರೀಂಕೋರ್ಟ್ ಹೇಳಿದೆ. ಹಿಂದೂ ಕಾನೂನಿನಲ್ಲಿ ಅನೂರ್ಜಿತ ಸಂಬAಧದಿAದ ಜನಿಸಿದ ಮಕ್ಕಳು ಹೆತ್ತವರ ಆಸ್ತಿಯನ್ನು ಪಡೆಯಲು ಅರ್ಹರೇ ಎಂಬ ವಿಷಯಕ್ಕೆ ಸಂಬoಧಿಸಿದoತೆ 2011ರ ಅರ್ಜಿಯ ಮೇಲಿನ ವಿಚಾರಣೆಯನ್ನು ಸುಪ್ರೀಂಕೋರ್ಟ್ ಕೈಗೆತ್ತಿಕೊಂಡಿತ್ತು. ರದ್ದುಗೊಳಿಸಲಾದ ಅಥವಾ ರದ್ದುಗೊಳಿಸಬಹುದಾದ ವಿವಾಹ ಸಂಬAಧದಲ್ಲಿ ಜನಿಸಿದ ಮಕ್ಕಳಿಗೆ ಮಾತ್ರ ತಮ್ಮ ಪಾಲಕರ ಆಸ್ತಿ ಮೇಲೆ ಹಕ್ಕಿದೆ ಎಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.


ಕಾನೂನು ಸಮ್ಮತ ವಿವಾಹ ಸಂಬAಧದಲ್ಲಿ ಜನಿಸಿದ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯಲು ಹಕ್ಕಿದೆಯೇ ಅಥವಾ ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 16(3)ರಲ್ಲಿ ತಮ್ಮ ಪೋಷಕರ ಸ್ವಯಾರ್ಜಿತ ಆಸ್ತಿ ಮೇಲಷ್ಟೇ ಹಕ್ಕಿದೆಯೇ ಎಂಬುದು ಪ್ರಮುಖ ಪ್ರಶ್ನೆಯಾಗಿತ್ತು.
ಮಾನ್ಯವಾದ ಅಥವಾ ಅಮಾನ್ಯವಾದ ಯಾವುದೇ ವಿವಾಹದ ನಂತರ ಜನಿಸಿದ ಮಗು ಮಾತ್ರ ತನ್ನ ಹೆತ್ತವರ ಆಸ್ತಿ ಮೇಲೆ ಹಕ್ಕು ಇರುತ್ತದೆ, ಬೇರೆ ಯಾರಿಗೂ ಇಲ್ಲ ಎಂಬುದು ನಿಬಂಧನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಅಂತಹ ಮಕ್ಕಳಿಗೆ ಆಸ್ತಿಯಲ್ಲಿ ಯಾವುದೇ ಪಾಲಿಲ್ಲ ಎನ್ನುವ ಉನ್ನತ ನ್ಯಾಯಾಲಯದ ಹಿಂದಿನ ಉಲ್ಲೇಖಗಳನ್ನು ನ್ಯಾಯಪೀಠ ಒಪ್ಪಲಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ನಮ್ಮನ್ನೂ ಸೇರಿದಂತೆ ಸಮಾಜದಲ್ಲಿ ನ್ಯಾಯಾ ವ್ಯವಸ್ಥೆಯ ಸಾಮಾಜಿಕ ನಿಯಮಗಳು ದಿನಕಳೆದಂತೆ ಬದಲಾಗುತ್ತಿರುವುದರಿಂದ ಹಿಂದೆ ಕಾನೂನು ಬಾಹಿರ ಎನಿಸಿಕೊಂಡಿರುವುದು ಇಂದು ನ್ಯಾಯಸಮ್ಮತವಾಗಬಹುದು. ಅನೂರ್ಜಿತ ವಿವಾಹ ಸಂಬAಧದಲ್ಲಿ ಮಹಿಳೆ ಮತ್ತು ಪುರುಷ ಗಂಡ ಮತ್ತು ಹೆಂಡತಿಯ ಸ್ಥಾನಮಾನವನ್ನು ಹೊಂದಿರುವುದಿಲ್ಲ. ಶಾಸನದ ಪ್ರಕಾರ ಅನೂರ್ಜಿತ ವಿವಾಹದಲ್ಲಿ ಗಂಡ ಹಾಗೂ ಹೆಂಡತಿಗೆ ಸ್ಥಾನಮಾನವಿದೆ ಎಂದು ಹೇಳಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು