Recent Posts

Tuesday, November 26, 2024
ಸುದ್ದಿ

ಮತ್ತೆ ಒಂದಾಗ್ತಾರಾ ಸ್ಯಾಂಡಲ್ ವುಡ್ ಬಿಗ್ ಸ್ಟಾರ್ಸ್ ..? ಡಿಬಾಸ್ ಬಗ್ಗೆ ಬಾದ್ ಶಾ ಹೇಳಿದ್ದೇನು..? – ಕಹಳೆ ನ್ಯೂಸ್

ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಜನಪ್ರಿಯ ತಾರೆಯರು. ತಮ್ಮದೇ ಆದ ಅಭಿಮಾನ ಬಳಗವನ್ನೂ ಅವರು ಹೊಂದಿದ್ದಾರೆ. ಆದರೆ ಇಬ್ಬರ ನಡುವೆ ಹಲವು ವರ್ಷಗಳ ಹಿಂದೆ ಮೂಡಿದ್ದ ವೈಮನಸ್ಸು ಇನ್ನೂ ಬಗೆಹರಿದಿಲ್ಲ. ಇತ್ತೀಚೆಗೆ ಹಿರಿಯ ನಟಿ, ಸಂಸದೆ ಸುಮಲತಾ ಹುಟ್ಟುಹಬ್ಬದ ವೇದಿಕೆ ಮೇಲೆ ಈ ಇಬ್ಬರು ಸ್ಟಾರ್ ಗಳು ಜೊತೆಯಾಗಿ ಕಾಣಿಕೊಂಡಾಗ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿತ್ತು. ಇದೀಗ ಸುದೀಪ್ ಕೂಡ ದರ್ಶನ್ ಬಗ್ಗೆ ಧನಾತ್ಮಕವಾಗಿ ಮಾತನಾಡಿದ್ದಾರೆ.

ಇಂದು ಸುದೀಪ್ ಜನ್ಮ ದಿನ. ಈ ಹಿನ್ನಲೆಯಲ್ಲಿ ಮಾತನಾಡಿದ ಅವರು ನನಗೆ ದರ್ಶನ್ ಮೇಲೆ ಕೋಪವಿಲ್ಲ ಎಂದು ಹೇಳುವ ಮೂಲಕ ಸ್ನೇಹ ಹಸ್ತ ಚಾಚುವ ಸೂಚನೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುಮಲತಾ ಬರ್ತ್ ಡೇ ಪಾರ್ಟಿಯಲ್ಲಿ ಇಬ್ಬರು ಭೇಟಿಯಾಗಿದ್ದರೂ ಪರಸ್ಪರ ಮಾತನಾಡಿರಲಿಲ್ಲ. ಸುಮಾರು 6 ವರ್ಷಗಳ ಬಳಿಕ ನಡೆದ ಭೇಟಿ ಇದಾಗಿತ್ತು. ದರ್ಶನ್ ಮತ್ತು ನಾನು ಒಂದೇ ಪಾರ್ಟಿಯಲ್ಲಿ ಭೇಟಿಯಾಗಿದ್ದು ಖುಷಿ ತಂದಿದೆ. ನಾವು ಕಿತ್ತಾಡಿಕೊಂಡಿಲ್ಲ. ನನಗೆ ದರ್ಶನ್ ಮೇಲೆ ಕೋಪವಿಲ್ಲ. ನನಗೂ ಕೆಲವು ಪ್ರಶ್ನೆಗಳಿವೆ. ಅದೇ ರೀತಿ ದರ್ಶನ್ ಗೂ ಕೆಲವು ಅನುಮಾನವಿದೆ. ಇಬ್ಬರೂ ಮುಖಾಮುಖಿಯಾದಾಗ ಮಾತ್ರ ಸಮಸ್ಯೆ ಬಗೆಹರಿಯಲು ಸಾಧ್ಯ. ಸುಮಲತಾ ಮೇಲಿನ ಗೌರವದಿಂದ ನಾನು ಆ ಪಾರ್ಟಿಗೆ ಹೋಗಿದ್ದೆ ಎಂದು ಸುದೀಪ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಏನು ಪೆÇೀಸ್ಟ್ ಮಾಡಿದ್ದಾರೆ ಎನ್ನುವುದನ್ನು ನಾನು ನೋಡಿಲ್ಲ. ನೇರವಾಗಿ ಏನಾದರೂ ಹೇಳಿದರೆ ಅದನ್ನು ಪರಿಗಣಿಸುತ್ತೇನೆ. ಶೇಕ್ ಹ್ಯಾಂಡ್ ಮಾಡೋದು ದೊಡ್ಡದಲ್ಲ. ಕೆಲವೊಂದಕ್ಕೆ ಸಮಯ ಕೊಡಿ. ಎಲ್ಲವೂ ಸರಿ ಹೋಗುತ್ತದೆ. ನಾವಿಬ್ಬರು ಮತ್ತೆ ಒಂದಾದರೆ ನನಗೆ ಖುಷಿನೇ ಎಂದು ಸುದೀಪ್ ಮನ ಬಿಚ್ಚಿ ಮಾತನಾಡಿದ್ದಾರೆ.

 

ದರ್ಶನ್ ಮತ್ತು ಮಾಧ್ಯಮಗಳ ನಡುವಿನ ವಿವಾದ ಬಗೆ ಹರಿದ ಬಗ್ಗೆ ಪ್ರತಿಕ್ರಿಯಿಸಿ, ಕೆಲವೊಂದು ಗೊತ್ತಿಲ್ಲದೇ ನಡೆದು ಹೋಗುತ್ತದೆ. ದರ್ಶನ್ ದೊಡ್ಡ ಸ್ಟಾರ್. ಎಲ್ಲವೂ ಸರಿ ಇರಬೇಕು. ಸಿನಿಮಾ ಸೋಲು ಗೆಲುವಿನ ಮೇಲೆ ಮಾತ್ರ ನಿಂತಿರಬೇಕು ಎಂದಿದ್ದಾರೆ.