Recent Posts

Friday, November 29, 2024
ಸುದ್ದಿ

ನಾಗಪುರದ ಮೆಟ್ರೋದೊಳಗೆ ಫ್ಯಾಷನ್ ಶೋ : ಪ್ರಯಾಣಿಕರ ಮಿಶ್ರ ಪ್ರತಿಕ್ರಿಯೆ – ಕಹಳೆ ನ್ಯೂಸ್

ನಾಗಪುರ ಮೆಟ್ರೋದೊಳಗೆ ಫ್ಯಾಷನ್ ಶೋ ಆಯೋಜಿಸಲಾಗಿತ್ತು. ಮಕ್ಕಳು, ಯುವಕ-ಯುವತಿಯರು ಬಣ್ಣ ಬಣ್ಣದ ಬಟ್ಟೆ ತೊಟ್ಟುಕೊಂಡು ಮೆಟ್ರೋ ಒಳಗೆ ಹೆಜ್ಜೆ ಹಾಕಿರುವ ವೀಡಿಯೋ ವೈರಲ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಬೆಸ್ಟ್ ಫ್ಯಾಷನ್ ಡಿಸೈನರ್ ಇಂಡಿಯಾ ಆಯೋಜಿಸಿದ್ದ ಈ ವಿಭಿನ್ನ ಫ್ಯಾಷನ್ ಶೋ ಕೆಲವು ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಿದ್ದು ಸುಳ್ಳಲ್ಲ. ವೈರಲ್ ಆದ ಈ ಫ್ಯಾಷನ್ ಶೋ ವನ್ನು ಸುಮಾರು 1.7 ಮಿಲಿಯನ್ ಗಿಂತಲೂ ಹೆಚ್ಚು ಜನರು ವೀಕಿಸಿದ್ದರೆ, 1.5 ಲಕ್ಷ ಮಂದಿ ಲೈಕ್ ಮಾಡಿದ್ದಾರೆ. ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಗ್ರಾಹಕರನ್ನು ಸೆಳೆಯುವ ಹೊಸ ತಂತ್ರ ಎಂದು ಒಬ್ಬರು ಹೇಳಿದರೆ ಇನ್ನೊಬ್ಬರು ಪ್ರಯಾಣಿಕರಿಗೆ ತೊಂದರೆಯಾಗದAತೆ ಮಾಡಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಪ್ರಯಾಣಿಕರಿಗೆ ತೊಂದರೆ ಕೊಡುವ ಇಂತಹ ಕೆಲಸಕ್ಕೆ ಸರಕಾರ ಶಿಕ್ಷೆ ಕೊಡಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಈ ಭಿನ್ನ ಫ್ಯಾಷನ್ ಶೋ ಚರ್ಚೆ ಹುಟ್ಟು ಹಾಕಿದ್ದಂತು ಸುಳ್ಳಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು