Recent Posts

Tuesday, November 26, 2024
ಸುದ್ದಿ

ಮಕ್ಕಳಾಗಿಲ್ಲ ಎಂದು ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಸಾವು : ಆಸ್ಪತ್ರೆ ವಿರುದ್ಧ ಕುಟುಂಬಸ್ಧರ ಆಕ್ರೋಶ – ಕಹಳೆ ನ್ಯೂಸ್

ವೈದ್ಯರ ನಿರ್ಲಕ್ಷ್ಯಕ್ಕೆ ಅತಿಥಿ ಉಪನ್ಯಾಸಕಿ ಸಾವನ್ನಪ್ಪಿರೋ ಘಟನೆ ತುಮಕೂರಿನ ಮಹಾಲಕ್ಷ್ಮಿನಗರದಲ್ಲಿನ ಚಿನ್ಮಯ ನರ್ಸಿಂಗ್ ಹೋಮ್‌ನಲ್ಲಿ ನಡೆದಿದೆ. ಮಹಿಳೆ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತಳ ಕುಟುಂಬಸ್ಥರು ಹಾಗೂ ಪತಿ ಆರೋಪಿಸಿದ್ದಾರೆ.


ಅತಿಥಿ ಉಪನ್ಯಾಸಕಿ ಮಾನಸ(30) ಮೃತ ದುರ್ದೈವಿ. ಮಾನಸ ಅವರು ತುಮಕೂರಿನ ವಿವಿಯಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. 5 ವರ್ಷಗಳ ಹಿಂದೆ ಅರುಣ್ ಎಂಬುವರನ್ನು ವರಿಸಿದ್ದರು. ನಂತರದ ದಾಂಪತ್ಯ ಜೀವನದಲ್ಲಿ ಮಕ್ಕಳು ಆಗಿರಲಿಲ್ಲ. ಹೀಗಾಗಿ ಕಳೆದ ಒಂದೂವರೆ ತಿಂಗಳಿನಿoದ ಚಿನ್ಮಯ ಆಸ್ಪತ್ರೆ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಗರ್ಭಕೋಶದಲ್ಲಿ 3ಗ್ರಾಮ್ ಗಡ್ಡೆಯಿದೆ. ಅದನ್ನು ಆಪರೇಷನ್ ಮಾಡಿ ತೆಗೆಯಬೇಕೆಂದು ವೈದ್ಯರು ಹೇಳಿದ್ದರು. ಹೀಗಾಗಿ ಮೊನ್ನೆ ಸಂಜೆ ಆಪರೇಷನ್‌ಗೆಂದು ಆಸ್ಪತ್ರೆಗೆ ಮಾನಸ ದಾಖಲಾಗಿದ್ದರು. ನಿನ್ನೆ ರಾತ್ರಿ ಆಪರೇಷನ್ ಮಾಡುವಾಗ ಸಾವನ್ನಪ್ಪಿದ್ದಾರೆ. ಇದಕ್ಕೆ ವೈದ್ಯರೇ ಕಾರಣ ಎಂದು ಕುಟುಂಬಸ್ಥರು, ಸಂಬoಧಿಕರು ಆರೋಪಿಸಿ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೇ ಮಾನಸಳನ್ನು ಕಳೆದುಕೊಂಡ ಪೋಷಕರು, ಆಕೆಯ ಗಂಡನ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನು ಈ ಬಗ್ಗೆ ಹೊಸ ಬಡಾವಣೆ ಪೊಲೀಸ್ ಠಾಣೆಗೆ ಕುಟುಂಬಸ್ಥರು ದೂರು ದಾಖಲು ಮಾಡಿದ್ದಾರೆ.