Recent Posts

Sunday, January 19, 2025
ಸುದ್ದಿ

ಸಮಗ್ರ ವೀರಾಗ್ರಣಿ ಪ್ರಶಸ್ತಿ ತಮ್ಮದಾಗಿಸಿಕೊಂಡ ಆಳ್ವಾಸ್ ಪತ್ರಿಕೋದ್ಯಮ ವಿದ್ಯಾರ್ಥಿಗಳು – ಕಹಳೆ ನ್ಯೂಸ್

ಮಂಗಳೂರು: ಆಳ್ವಾಸ್ ಪತ್ರಿಕೋದ್ಯಮ ವಿದ್ಯಾರ್ಥಿಗಳ ತಂಡ ನಿಟ್ಟೆ ಸಮೂಹ ಸಂವಹನ ಸಂಸ್ಥೆಯ ವತಿಯಿಂದ ನಡೆದ ಆರನೇ ಆವೃತ್ತಿಯ ರಾಷ್ಟ್ರ ಮಟ್ಟದ ಬೀಕನ್ಸ್ ಮಾಧ್ಯಮೋತ್ಸವದಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿತು.

ಗೋವಾದ ಸೇಂಟ್ ಕ್ಸೇವಿಯರ್ ಕಾಲೇಜು ತಂಡ ರನ್ನರ್-ಅಪ್ ಆಗಿ ಹೊರಹೊಮ್ಮಿತು. ಬೀಕನ್ಸ್ ನಲ್ಲಿ ವಿದ್ಯಾರ್ಥಿಗಳಿಗಾಗಿ ಡಾಕ್ಯೂಮೆಂಟರಿ, ಪಿಎಸ್ ಆಡ್, ಕಿರುಚಿತ್ರ, ಪಾಟ್ ಪೌರಿ, ನ್ಯೂಸ್ ಬುಲೆಟಿನ್, ಮಾಕ್ ಪ್ರೆಸ್, ಕ್ರಿಯೇಟಿವ್‍ ರೈಟಿಂಗ್, ಡಿಬೇಟ್, ರೇಡಿಯೋಜಾಕಿ, ಪ್ರಾಡಕ್ಟ್ ಲಾಂಚ್, ಕ್ರೈಸಿಸ್ ಮ್ಯಾನೇಜ್ ಮೆಂಟ್, ಕ್ವಿಜ್, ಮೂವಿ ಸ್ಪೂಫ್, ಎಸ್ಕೇಪ್‍ರೂಮ್, ಬೀದಿ ನಾಟಕ ಸೇರಿದಂತೆ ಅನೇಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಆಳ್ವಾಸ್ ನ ಶ್ರೀರಾಜ್, ಜಾಫರ್, ಅಕ್ಷಯ, ನಿವೇದಿತಾ, ಅನುಷಾ, ಚೈತ್ರಾ, ವರುಣ್, ತೇಜು ಹಾಗೂ ಓಂಕಾರರನ್ನು ಒಳಗೊಂಡ ವಿದ್ಯಾರ್ಥಿ ತಂಡ ಬೀದಿ ನಾಟಕದಲ್ಲಿ ಪ್ರಥಮ, ಪಿಎಸ್ ಆಡ್ ನಲ್ಲಿ ರಕ್ಷಿತ, ಸುಶಾಂತ್, ವರುಣ್, ಅಭಿನಂದನ್ ತಂಡ ಪ್ರಥಮ, ಹಾಗೂ ಎಸ್ಕೇಪ್‍ರೂಮ್ ಸ್ಪರ್ಧೆಯಲ್ಲಿ ತೆಂಝಿಲ್ ಪ್ರಥಮ ಸ್ಥಾನ ಪಡೆದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಕ್ ಪ್ರೆಸ್ ನಲ್ಲಿ ಶ್ರೇಯಾ ಶೆಟ್ಟಿ ದ್ವಿತೀಯ, ಪ್ರಾಡಕ್ಟ್ ಲಾಂಚ್ ನಲ್ಲಿ ಶ್ರೇಯಾ ಶೆಟ್ಟಿ ಹಾಗೂ ಓಂಕಾರ್ ದ್ವಿತೀಯ, ಕ್ರೈಸಿಸ್ ಮ್ಯಾನೇಜ್ ಮೆಂಟ್ ನಲ್ಲಿ ಗಗನ್ ದೀಪ್ ಹಾಗೂ ಪುನೀತ್ ತಂಡ ದ್ವಿತೀಯ ಪ್ರಶಸ್ತಿಯನ್ನು ಬಾಚಿಕೊಂಡರು.

ವಿದ್ಯಾರ್ಥಿಗಳಲ್ಲಿ ಮಾಧ್ಯಮದ ಕುರಿತು ಅರಿವು ಮೂಡಿಸುವ ಹಾಗೂ ಅದರ ಸಾಧನೆಗಳನ್ನು ಸ್ಮರಿಸುವ ಉದ್ದೇಶದಿಂದ ನಿಟ್ಟೆ ಸಂಸ್ಥೆ ಪ್ರತಿವರ್ಷ ಬೀಕನ್ಸ್ ಮಾಧ್ಯಮೋತ್ಸವವನ್ನು ನಡೆಸಿಕೊಂಡು ಬಂದಿದೆ. ನಿಟ್ಟೆ ವಿಜ್ಞಾನ ಮತ್ತು ತಂತ್ರಜ್ಞಾನ ಕಾಲೇಜಿನ ಡಾ. ಸ್ಮಿತಾ ಹೆಗ್ಡೆ ವಿಜೇತರಿಗೆ ಪ್ರಶಸ್ತಿಯನ್ನು ವಿತರಿಸಿದರು.