Monday, November 25, 2024
ದಕ್ಷಿಣ ಕನ್ನಡಮೂಡಬಿದಿರೆ

ಮೂಡುಬಿದಿರೆ : ಶ್ರೀ ಕೃಷ್ಣ ಫ್ರೆಂಡ್ಸ್ ಕ್ಲಬ್ ನ 32ನೇ ವರ್ಷದ ಮುದ್ದುಕೃಷ್ಣ ವೇಷ ಸ್ಪರ್ಧೆ – ಕಹಳೆ ನ್ಯೂಸ್

ಮೂಡುಬಿದಿರೆ : ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮೊಸರು ಕುಡಿಕೆ ಉತ್ಸವಕ್ಕೆ ಪೂರಕವಾಗಿ ಮೂಡುಬಿದಿರೆಯ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ಸಮಾಜ ಮಂದಿರದಲ್ಲಿ 32ನೇ ವರ್ಷದ ಮುದ್ದುಕೃಷ್ಣ ವೇಷ ಸ್ಪರ್ಧೆ ನಡೆಯಿತು.

ದಂತವೈದ್ಯ ಡಾ. ವಿನಯಕುಮಾರ ಹೆಗ್ಡೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ ಧಾರ್ಮಿಕ ಹಿನ್ನೆಲೆಯ, ಕಲಾತ್ಮಕ ಚಟುವಟಿಕೆಯ ಪ್ರತೀಕವಾದ ಮುದ್ದು ಕೃಷ್ಣ ವೇಷ ಸ್ಪರ್ಧೆಯನ್ನು ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ಮೂರು ದಶಕಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿರುವುದು ಶ್ಲಾಘನೀಯ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ತೀವ್ರ ಉತ್ಸಾಹ ವ್ಯಕ್ತವಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದವರು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯಅತಿಥಿಯಾಗಿ ಪಾಲ್ಗೊಂಡ ಉದ್ಯಮಿ ಪ್ರಭಾತ್ ಚಂದ್ರ ಜೈನ್ ಮಾತನಾಡಿ, ಮನೋಸ್ಥೈರ್ಯ, ಚತುರತೆ ಇದ್ದರೆ ಯಾವುದೇ ಸಮಸ್ಯೆಯನ್ನು ಲೀಲಾಜಾಲವಾಗಿ ಪರಿಹರಿಸಬಹುದೆಂಬುದನ್ನು ಶ್ರೀ ಕೃಷ್ಣ ತನ್ನ ವ್ಯಕ್ತಿತ್ವದ ಮೂಲಕ ಸಾರಿರುವುದು ಮಾನವರಾದ ನಮಗೆಲ್ಲ ಆದರ್ಶ ಎಂದರು.

ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಘಟನೆಯ ಪ್ರ. ಕಾರ್ಯದರ್ಶಿ ಸುದರ್ಶನ ಎಂ. ಎಲ್ಲ ಕಾಲಕ್ಕೂ ಸಲ್ಲುವ ಶ್ರೀ ಕೃಷ್ಣನ ವ್ಯಕ್ತಿತ್ವ ವಿಶೇಷ ತಿಳಿಸಿ ಮನುಕುಲ ಯಾವ ರೀತಿ ಬದುಕಬೇಕು ಎಂಬುದನ್ನು ತಿಳಿಸಿಕೊಟ್ಟು ಜಗ್ದ್ ವಂದ್ಯನೆನೆಸಿಕೊಂಡಿದ್ದಾನೆ ಎಂದರು.

ತೀರ್ಪುಗಾರರಾದ ಶಿವಕುಮಾರ ಉಮ್ಮತ್ತೂರು, ರಮ್ಯಾ ಸುರೇಂದ್ರ ಕಾರ್ಕಳ ಮತ್ತು ರೇμÁ್ಮ ಹರ್ಷ ಇವರನ್ನು ಅತಿಥಿಗಳು ಗೌರವಿಸಿದರು. ಸಂಚಾಲಕ ಸಂತೋμï ಕುಮಾರ್ ಸ್ವಾಗತಿಸಿ, ಧನಂಜಯ ಮೂಡುಬಿದಿರೆ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷರಾದ ಜಗದೀಶ ಶೆಟ್ಟಿ, ಸಂಜೀವ ನಾಯ್ಕ್ , ಜತೆ ಕಾರ್ಯದರ್ಶಿಗಳಾದ ಸತೀಶ `ಭಂಡಾರಿ, ಆನಂದ ಸುವರ್ಣ ಹಾಗೂ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.