Monday, November 25, 2024
ಸುದ್ದಿ

ವಿದ್ಯುತ್ ಕಡಿತಗೊಂಡ ಹಿನ್ನಲೆ ಮೊಬೈಲ್ ಟಾರ್ಚ್ ಲೈಟ್ ಬಳಸಿಕೊಂಡು ರೋಗಿಗೆ ಚಿಕಿತ್ಸೆ ನೀಡಿದ ವೈದ್ಯರು..! – ಕಹಳೆ ನ್ಯೂಸ್

ಆಂಧ್ರ ಪ್ರದೇಶ: ಕಳೆದ ಕೆಲ ದಿನಗಳಿಂದ ತುರ್ತು ಲೋಡ್ ಶೆಡ್ಡಿಂಗ್ ಕಾರಣದಿಂದಾಗಿ ವಿದ್ಯುತ್ ಕಡಿತಗೊಳ್ಳುತ್ತಿದ್ದ ಪರಿಣಾಮವಾಗಿ ಆಸ್ಪತ್ರೆಯೊಂದರಲ್ಲಿ ಮೊಬೈಲ್ ಟಾರ್ಚ್ ಲೈಟ್ ಬಳಸಿಕೊಂಡು ರೋಗಿಯನ್ನು ಪರೀಕ್ಷೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಮಾನ್ಯಂ ಜಿಲ್ಲೆಯಲ್ಲಿ ನಡೆದಿದೆ.

ಬ್ರೇಕ್ ವೈಫಲ್ಯಗೊಂಡು ಆಟೋ ರಿಕ್ಷಾವೊಂದು ಪಲ್ಟಿಯಾದ ಪರಿಣಾಮ 8 ಮಂದಿ ಗಾಯಗೊಂಡಿದ್ದರು. 8 ಮಂದಿಯಲ್ಲಿ ಇಬ್ಬರು ಗಂಭೀರ ಗಾಯಗೊಂಡ ಕಾರಣ ಅವರನ್ನು ಆಂಧ್ರ ಪ್ರದೇಶದ ಕುರುಪಂ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ವಿದ್ಯುತ್ ಕಡಿತಗೊಂಡ ಕಾರಣ ಗಾಯಾಳುಗಳನ್ನು ಪರೀಕ್ಷೆ ಮಾಡಿಸಲು, ಅವರ ಗಾಯಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ಆಸ್ಪತ್ರೆಯ ಸಿಬ್ಬಂದಿಗಳು ಮೊಬೈಲ್ ಟಾರ್ಚ್ ಉಪಯೋಗಿಸಿದ್ದಾರೆ. ಒಂದು ಕೈಯಲ್ಲಿ ಮೊಬೈಲ್ ಪ್ಲ್ಯಾಶ್ ಲೈಟ್ ಬಳಸಿ, ಇನ್ನೊಂದು ಕೈಯಲ್ಲಿ ಗಾಯಕ್ಕೆ ಚಿಕಿತ್ಸೆಯನ್ನು ಆಸ್ಪತ್ರೆಯ ಸಿಬ್ಬಂದಿಗಳು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು