Recent Posts

Monday, January 27, 2025
ಸುದ್ದಿ

ಸೋಶಿಯಲ್ ಮೀಡಿಯಾದ ಸೆನ್ಸೇಷನಲ್ ಸ್ಟಾರ್ ಉರ್ಫಿ ಜಾವೇದ್ ನ ಹೊಸ ಅವತಾರ : ಮೀನಿನ ಅಕ್ವೇರಿಯಮ್ ಧರಿಸಿ ಮಿಂಚಿದ ಉರ್ಫಿ – ಕಹಳೆ ನ್ಯೂಸ್

ಸೋಶಿಯಲ್ ಮೀಡಿಯಾದ ಸೆನ್ಸೇಷನಲ್ ಸ್ಟಾರ್ ಆಗಿ ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇವರು ನಟಿ ಬಿಗ್ ಬಾಸ್ ತಾರೆ, ಉರ್ಫಿ ಜಾವೇದ್ ಇದೀಗ ಮೀನಿನ ರಾಣಿಯಾಗಿ ಎಂಟ್ರಿ ಕೊಟ್ಟಿದ್ದು, ತನ್ನ ಹೊಸ ಅವತಾರದ ವಿಡಿಯೋ ಶೇರ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಗತ್ತಿನಲ್ಲೇ ಅದ್ಯಾವ ಕಾಸ್ಟ್ಯೂಮ್ ಇದೆಯೋ ಇಲ್ವೋ? ಆದರೆ ಉರ್ಫಿ ಜಾವೇದ್ ಬಳಿ ಬಗೆ ಬಗೆಯ ಉಡುಪುಗಳಿವೆ. ಇದೀಗ ಮೀನಿನ ಅಕ್ವೇರಿಯಮ್ ಅನ್ನ ಒಳ ಉಡುಪಾಗಿ ನಟಿ ಧರಿಸಿ ಬಂದಿದ್ದಾರೆ. ಮೀನಿನ ರಾಣಿಯಾಗಿ ಉರ್ಫಿ ಕಾಣಿಸಿಕೊಂಡಿದ್ದಾರೆ. ಹಾಟ್ ಬೆಡಗಿಯ ನಯಾ ಲುಕ್ ನೋಡಿ ಪಡ್ಡೆಹುಡುಗರು ಸುಸ್ತಾಗಿದ್ದಾರೆ

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ಯ ಉರ್ಫಿ ಜಾವೇದ್ ಅವರ ಈ ಪೋಸ್ಟ್ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ಕೆಲವರು ಫ್ಯಾನ್ಸ್ ಮಾತ್ರ ಉರ್ಫಿ ಕ್ರಿಯೇಟಿವಿಟಿಗೆ ಹ್ಯಾಟ್ಸಾಫ್ ಅಂತಾ ಹೇಳಿದ್ದಾರೆ.

ಉರ್ಫಿ ಜಾವೇದ್ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ದೀಯಾಗಿ ಕಾಣಿಸಿಕೊಂಡಿದ್ದು ಬಿಟ್ಟರೆ, ಅವರಿಗೆ ಹೇಳಿಕೊಳ್ಳುವಂತಹ ಅವಕಾಶ ಸಿಕ್ಕಿಲ್ಲ. ಬಾಲಿವುಡ್‌ನ ಉತ್ತಮ ಸಿನಿಮಾ ಅವಕಾಶಕ್ಕಾಗಿ ಎದುರು ನೋಡ್ತಿರೋ ಉರ್ಫಿ ಸದಾ ತರ ತರ ಹೊಸ ಬಗೆಯ ಲುಕ್‌ನೊಂದಿಗೆ ಬೋಲ್ಡ್ ಆಗಿ ಎಂಟ್ರಿ ಕೊಡುತ್ತಾರೆ.