Sunday, January 26, 2025
ಸುದ್ದಿ

ಕೆಲಸ ಮುಗಿಸಿ ಪೂರ್ಣಗೊಳಿಸಿದ ಪ್ರಗ್ಯಾನ್ ರೋವರ್ ನ ಸುರಕ್ಷಿತ ನಿಲುಗಡೆಗೊಳಿಸಿದ ಇಸ್ರೋ – ಕಹಳೆ ನ್ಯೂಸ್

ಬಾಹ್ಯಾಕಾಶದಲ್ಲಿ ಭಾರತ ಮಹತ್ವದ ಮೈಲಿಗಲ್ಲು ನೆಟ್ಟಿದ್ದು, ಇಸ್ರೋ ಉಡಾವಣೆ ಮಾಡಿದ ಚಂದ್ರಯಾನ-3 ಯಶಸ್ವಿಯಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಪ್ರಗ್ಯಾನ್ ರೋವರ್ ಓಡಾಟ ನಡೆಸಿ ಮಹತ್ವದ ಸುದ್ದಿಗಳನ್ನು ಭೂಮಿಗೆ ಕಳುಹಿಸಿದೆ. ರೋವರ್ ತನ್ನ ಕಾರ್ಯಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಅದನ್ನು ಸುರಕ್ಷಿತವಾಗಿ ನಿಲುಗಡೆ ಮಾಡಲಾಗಿದೆ ಎಂದು ಇಸ್ರೋ ಹೇಳಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರೋವರ್ ಮತ್ತು ಎ.ಪಿ.ಎಕ್ಸ್.ಎಸ್. ಮತ್ತು ಎಲ್.ಐ.ಬಿ.ಎಸ್. ಪೇಲೋಡ್ ಗಳು ಕೂಡ ಟರ್ನ್ ಆಫ್ ಆಗಿದ್ದು, ಅಲ್ಲಿನ ಡೇಟಾ ಲ್ಯಾಂಟರ್ ಮೂಲಕ ಭೂಮಿಗೆ ರವಾನೆ ಆಗಲಿದೆ ಎಂದು ಇಸ್ರೋ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ಯ ಬ್ಯಾಟರಿ ಫುಲ್ ಚಾರ್ಜ್ ಆಗಿದ್ದು, ಸೆ. 22ರಂದು ಆಗಲಿರುವ ಸೂರ್ಯೋದಯದ ಬೆಳಕನ್ನು ಗ್ರಹಿಸುವ ನಿಟ್ಟಿನಲ್ಲಿ ಸೋಲಾರ್ ಪ್ಯಾನಲ್ ಅಣಿಗೊಳಿಸಲಾಗಿದೆ. ಈ ಸಂಬಂಧ ರಿಸೀವರ್ ಕೂಡ ಆನ್ ಆಗಿದೆ. ಆ ಬಳಿಕ ರೋವರ್ ನ ಇನ್ನೊಂದು ಸೆಟ್ ಅಸೈನ್ ಮೆಂಟ್ ಜಾಗೃತಗೊಳ್ಳುವ ಭರವಸೆ ಇದೆ. ಒಂದು ವೇಳೆ ಸಾಧ್ಯವಾಗದಿದ್ದರೆ ಚಂದ್ರನಲ್ಲಿನ ಭಾರತದ ರಾಯಭಾರಿಯಾಗಿ ಅದು ಅಲ್ಲೇ ಇರಲಿದೆ ಎಂದು ಇಸ್ರೋ ಹೇಳಿದೆ.

ಚಂದ್ರನ ಅಂಗಳದಲ್ಲಿ ರೋವರ್ ಹಲವು ಖನಿಜಗಳನ್ನು ಪತ್ತೆ ಮಾಡಿತ್ತು. ಮುಖ್ಯವಾಗಿ ಸಲ್ಫರ್(ಗಂಧಕ), ಆಕ್ಸಿಜನ್ ಸೇರಿ ಹಲವು ಖನಿಜಗಳ ಇರುವಿಕೆಯನ್ನು ದೃಢಪಡಿಸಿತ್ತು. ಇದುವರೆಗೆ ಸೌರಶಕ್ತಿಯಿಂದ ಪ್ರಗ್ಯಾನ್ ರೋವರ್ ಚಲಿಸುತ್ತಿದ್ದು, ಚಂದ್ರನಲ್ಲಿ ಕತ್ತಲಾದ ಬಳಿಕ ಉμÁ್ಣಂಶ -270 ವರೆಗೂ ಇಳಿಯುವ ಸಾಧ್ಯತೆ ಇರುವುದರಿಂದ ಪ್ರಗ್ಯಾನ್ ರೋವರ್ ಮತ್ತೆ ತನ್ನ ಕಾರ್ಯ ನಿರ್ವಹಿಸಲಿದೆಯಾ ಕಾದು ನೋಡಬೇಕಿದೆ.