Saturday, January 25, 2025
ಸುದ್ದಿ

ನಾರಾಯಣ ಗುರುಗಳ 169ನೇ ಜನ್ಮದಿನದ ಪ್ರಯುಕ್ತ ಕುಂದಾಪುರದಲ್ಲಿ ‘ನಾರಾಯಣ ಗುರು ಸಂದೇಶ ವಾಹನ ಜಾಥಾ’ – ಕಹಳೆ ನ್ಯೂಸ್

ಕುಂದಾಪುರ: ಕುಂದಾಪುರದ ಬಿಲ್ಲವ ಸಮಾಜ ಸೇವಾ ಸಂಘ, ಶ್ರೀನಾರಾಯಣ ಗುರು ಯುವಕ ಮಂಡಲದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜನ್ಮದಿನದ ಪ್ರಯುಕ್ತ ಬೃಹತ್ ಗುರು ಸಂದೇಶ ವಾಹನ ಜಾಥಾ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಕೋಟೇಶ್ವರ ಹಳೆಅಳಿವೆ ಶ್ರೀ ಹಾಯ್ಗುಳಿ ಬೊಬ್ಬರ್ಯ ದೈವಸ್ಥಾನ ವಠಾರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಅವರು, ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ, ವ್ಯಕ್ತಿತ್ವನ್ನು ಮೈಗೂಡಿಸಿಕೊಂಡು ಸಮಾಜದ ಕೇಳಸದತರದವರೂ ಕೂಡ ಒಗ್ಗೂಡಿ ಸಂಘಟನೆಗಾಗಿ ಶ್ರಮಿಸಬೇಕು. ವಿದ್ಯೆ ಪಡೆಯುವ ಜೊತೆಗೆ, ರಾಜಕೀಯವಾಗಿ, ಆರ್ಥಿಕವಾಗಿ ಬಲಶಾಲಿಗಳಾಗುವತ್ತ ಚಿಂತನೆ ನಡೆಸಬೇಕು. ಸಂಘಟನಾ ಶಕ್ತಿ ಬಲವಾದಾಗ ಮಾತ್ರವೇ ಇದೆಲ್ಲಾ ಸಾಧ್ಯವಿದೆ. ಈ ನಿಟ್ಟಿನಲ್ಲಿ ಕುಂದಾಪುರ ಬಿಲ್ಲವ ಸಂಘ ಹಾಗೂ ನಾರಾಯಣ ಗುರು ಯುವಕ ಮಂಡಲ ವಿವಿಧ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ಹಾಯ್ಗುಳಿ ಬೊಬ್ಬರ್ಯ ದೈವಸ್ಥಾನದ ಗೌರವಾಧ್ಯಕ್ಷ ನಾರಾಯಣ ಬಿಲ್ಲವ ಅಧ್ಯಕ್ಷತೆ ವಹಿಸಿದ ಈ ಕಾರ್ಯಕ್ರಮದಲ್ಲಿ ದೈವಸ್ಥಾನದ ಅಧ್ಯಕ್ಷ ವೆಂಕಟೇಶ ಪೂಜಾರಿ ಹಳೆಅಳಿವೆ, ಶ್ರೀನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ಯೋಗೇಶ್ ಪೂಜಾರಿ ಕೋಡಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಪೂಜಾರಿ ಹಳೆಅಳಿವೆ, ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಪೂಜಾರಿ ವಿಠಲವಾಡಿ, ಸ್ಥಳೀಯ ನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ಸಂದೀಪ್ ಪೂಜಾರಿ ಉಪಸ್ಥಿತರಿದ್ದರು.
ಕುಂದಾಪುರ ಶ್ರೀ ನಾರಾಯಣ ಗುರು ಮಂದಿರದಲ್ಲಿ ವಾಹನ ಜಾಥಾಕ್ಕೆ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಚಾಲನೆ ನೀಡಿದ್ದು ಕುಂದಾಪುರ ನಗರದಲ್ಲಿ ಸಂಚರಿಸಿ ಕೋಟೇಶ್ವರ ಮಾರ್ಗವಾಗಿ ಜಾಥಾ ತೆರಳಿತು. ಈ ವೇಳೆ ಅಖಿಲ ಭಾರತ ಬಿಲ್ಲವ ಯೂನಿಯನ್ ಸಂಘಟನಾ ಕಾರ್ಯದರ್ಶಿ ಸುಧೀರ್ ಸುವರ್ಣ, ಸ್ಥಳೀಯ ಮುಖಂಡರಾದ ಕಾಳಪ್ಪ ಪೂಜಾರಿ, ಶಂಕರ್ ಪೂಜಾರಿ, ಮಂಜು ಬಿಲ್ಲವ, ಗುಣರತ್ನಾ, ಪ್ರಕಾಶ್ ಪೂಜಾರಿ ಬೀಜಾಡಿ, ಶೇಖರ್ ಪೂಜಾರಿ, ಸತೀಶ್ ಪೂಜಾರಿ ವಕ್ವಾಡಿ, ಧೀರಜ್ ಹೆಜಮಾಡಿ ಇದ್ದರು.