Recent Posts

Sunday, January 19, 2025
ಸುದ್ದಿ

ವಿಭಿನ್ನತೆಯ ಮೂಲಕ ಗಮನ ಸೆಳೆಯುತ್ತಿರುವ ಆದಿ ಪುರಾಣ ಸಿನಿಮಾ – ಕಹಳೆ ನ್ಯೂಸ್

ಬೆಂಗಳೂರು: ಅಡಲ್ಟ್ ಕಾಮಿಡಿ ಫಿಲಂಗಳು ಸ್ಯಾಂಡಲ್‍ವುಡ್‍ನಲ್ಲಿ ಕಮ್ಮಿಯೇನು ಇಲ್ಲ. ಆದ್ರೆ ಅದು ಸಕ್ಸೆಸ್ ರೇಟ್ ಬರೆಯುತ್ತಾ ಎಂಬುವುದು ಪ್ರಶ್ನೆ. ಟೈಟಲ್‍ನಲ್ಲೇ ಆಕಷಿಸೋ ಅಡಲ್ಟ್ ಕಾಮಿಡಿ ಸಿನೆಮಾಗಳಲ್ಲಿ ಒಂದಾದ ಆದಿ ಪುರಾಣ ಪಡ್ಡೆ ಹುಡುಗರಿಗೆ ಹೇಳಿ ಮಾಡಿಸೋ ಸಿನೆಮಾ ಆಗಿದ್ದು ಈ ಕುರಿತಾದ ವರದಿ ಇಲ್ಲಿದೆ..

ಶಶಾಂಕ್, ಮೋಕ್ಷ, ಅಹಲ್ಯಾ ಸುರೇಶ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಆದಿ ಪುರಾಣ’ ಚಿತ್ರ ಬಿಡುಗಡೆ ಆಗಿದೆ. ಹದಿಹರೆಯದ ಹುಡುಗನ ಮದುವೆ ಕಥೆ ಹೊಂದಿರುವ ‘ಆದಿ ಪುರಾಣ’ ಪಡ್ಡೆ ಹುಡುಗರಿಗೆ ಹೇಳಿ ಮಾಡಿಸಿದ ಸಿನಿಮಾದಂತಿದೆ. ಅಡಲ್ಟ್ ಕಾಮಿಡಿ ಸಿನಿಮಾಗಳನ್ನು ಮಾಡುವುದರಲ್ಲಿ ಕಾಶೀನಾಥ್ ಅವರನ್ನು ಮೀರಿಸಿದವರು ಕನ್ನಡದಲ್ಲಿ ಇನ್ನೊಬ್ಬರಿಲ್ಲ. ಕಾಶೀನಾಥ್ ತನ್ನ ಗುರು ಸಮಾನರು ಎಂದು ಹೇಳಿಕೊಂಡಿರುವ ಮೋಹನ್ ಕಾಮಾಕ್ಷಿ ಸಹ ತಮ್ಮ ನಿರ್ದೇಶನದ ‘ಆದಿ ಪುರಾಣ’ದಲ್ಲಿ ಅಡಲ್ಟ್ ಕಾಮಿಡಿ ವಸ್ತುವನ್ನೇ ಆಯ್ದುಕೊಂಡಿದ್ದಾರೆ. ಆದರೆ ವಸ್ತುವಿನ ಆಯ್ಕೆಯಲ್ಲಿರುವ ಗುರುಭಕ್ತಿ ಚಿತ್ರಕಥೆಯಲ್ಲಾಗಲಿ, ನಿರ್ದೇಶನ ಕೌಶಲ್ಯ ಅಷ್ಟೇನೂ ಕಾಣಿಸಿಕೊಳ್ಳುವುದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಿತ್ರದ ನಾಯಕನಾಗಿರುವ ಆದಿಯ ಮದುವೆಯ ಮುಂಚಿನ ಕಥೆ ಹಾಗೂ ಮದುವೆಯ ನಂತರದ ಕಥೆಯೇ ಇಡೀ ಸಿನಿಮಾದ ನಿರೂಪಣೆಯಾಗಿದೆ. ಆದಿ ಎಂಬ ಒಬ್ಬ ಹುಡುಗನ್ನು ಇಟ್ಟುಕೊಂಡು ಯುವ ಮನಸ್ಸುಗಳು ತಳಮಳವನ್ನು ಇಲ್ಲಿ ಹೇಳಿದ್ದಾರೆ. ಒಂದು ರೀತಿಯಲ್ಲಿ ಆದಿ ಇಂದಿನ ಯುವಕರ ಪ್ರತಿನಿಧಿಯಂತೆ ಇದ್ದಾನೆ.ಕಾಶೀನಾಥ್ ಸಿನಿಮಾಗಳ ಸಾಫ್ಟ್ ಪ್ರತಿಯಂತೆ ಇರುವ ‘ಆದಿ ಪುರಾಣ’ ಚಿತ್ರದಲ್ಲಿ ಅಡಲ್ಟ್ ಕಾಮಿಡಿ ಹೆಚ್ಚಾಗಿದೆ. ಯುವ ಮನಸ್ಸುಗಳ ತಲ್ಲಣಗಳನ್ನು ಹೊಂದಿರುವ ‘ಆದಿ ಪುರಾಣ’ ಚಿತ್ರ ಕಾಲೇಜು ಹುಡುಗರಿಗೆ ಇಷ್ಟವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರಿನಲ್ಲಿಯೇ ಓದಿ ಕೆಲಸ ಮಾಡುತ್ತಿರುವ ಆದಿಗೆ ಸ್ನೇಹಿತರ ಒಂದು ಗ್ಯಾಂಗ್ ಇರುತ್ತೆ. ದಿನ ರಾತ್ರಿ ಕೂತು ಕಂಠ ಪೂರ್ತಿ ಕುಡಿಯುವ ಸ್ನೇಹಿತರ ಜೊತೆ ಇದ್ದರೂ ಆದಿ ಎಂದೂ ಕುಡಿಯುವುದಿಲ್ಲ. ಹಾಗೆಂದ ಮಾತ್ರಕ್ಕೆ ಈತ 100% ಒಳ್ಳೆಯವನಲ್ಲ. ಒಮ್ಮೆ ಪೋಲಿ ಸಿನಿಮಾ ನೋಡುವಾಗ ಆದಿ ಅಪ್ಪನ ಬಳಿ ಸಿಕ್ಕಿ ಬಿದ್ದು ಮ್ಯಾರೇಜ್ ಮಾಡೋ ಪ್ಲಾನ್ ಮಾಡ್ತಾರೆ. ಅದು ಸಕ್ಸೆಸ್ ಕೂಡ ಆಗುತ್ತೆ.
ಸೆಕೆಂಡ್ ಆಫ್ ವೇಳೆಗೆ ಆದಿ ಬ್ಯಾಚುಲರ್ ಆಗಿ ಕಾಣಿಸಿಕೊಳ್ಳುತ್ತಾನೆ.

ಆದರೆ, ಮದುವೆ ಆದರೂ ಆದಿಗೆ ಫಸ್ಟ್ ನೈಟ್ ಭಾಗ್ಯ ಮಾತ್ರ ಸಿಗೋದಿಲ್ಲ. ಒಂದಲ್ಲ ಒಂದು ಕಾರಣಕ್ಕೆ ಅವನ ಮೊದಲ ರಾತ್ರಿ ನಿಂತು ಹೋಗುತ್ತಿರುತ್ತದೆ. ಇನ್ನೊಂದು ಕಡೆ ಆಫೀಸ್ ಟೀಂ ಲೀಡರ್ ದಿಶಾ ಆತನಿಗೆ ಹತ್ತಿರ ಆಗುತ್ತಾಳೆ. ಇಂತಹ ಪರಿಸ್ಥಿತಿಯಲ್ಲಿ ಇರುವ ಆದಿ ಹೆಂಡತಿಯ ನಂಬಿಕೆ ಉಳಿಸುತ್ತಾನಾ ಅಥವಾ ಆಸೆಯ ಹಿಂದೆ ಓಡುತ್ತಾನಾ ಎನ್ನುವುದು ಚಿತ್ರದ ಕೂತುಹಲಕಾರಿ ಅಂಶ. ಆದಿ ಎನ್ನುವ ಪಾತ್ರಕ್ಕೆ ಶಶಾಂಕ್ ಸೂಟ್ ಆಗಿದ್ದಾರೆ. ಆದರೆ, ಅವರು ಇನ್ನಷ್ಟು ಚೆನ್ನಾಗಿ ಆ ಪಾತ್ರವನ್ನು ಪ್ರೇಕ್ಷಕರ ಮುಂದೆ ಇಡಬೇಕಿತ್ತು ಎನ್ನುತ್ತಾರೆ ಪ್ರೇಕ್ಷಕರು. ಹೆಂಡತಿಯಾಗಿ ಕಾಣಸಿಕೊಂಡಿರುವ ಅಹಲ್ಯಾ ಹಾಗೂ ಟೀಂ ಲೀಡರ್ ಮೋಕ್ಷ ಕುಲಾಲ್ ನಟನೆ ನೋಡಲು ಅಡ್ಡಿಯಿಲ್ಲ.

ಸಿನಿಮಾದಲ್ಲಿ ನಟ, ನಟಿಯರ ರೀತಿ ಬೇರೆ ಪಾತ್ರಗಳು ಗಮನ ಸೆಳೆಯುತ್ತದೆ. ಬಾರ್‍ನಲ್ಲಿಯೇ ಇರುವ ರಂಗಾಯಣ ರಘು ಕೊನೆಯ ದೃಶ್ಯದಲ್ಲಿ ತೋರಿಸಿದ ಭಾವುಕತೆ ಅಬ್ಬಬ್ಬಾ ಎನಿಸುತ್ತದೆ. ನಾಯಕನ ತಂದೆ, ತಾಯಿ ಹಾಗೂ ಗೆಳೆಯರ ಪಾತ್ರಗಳು ಇಷ್ಟ ಆಗುತ್ತದೆ. ಗಣಪತಿ ಭಟ್ ಪಾತ್ರ ನಗಿಸುತ್ತದೆ. ಸಿನಿಮಾದ ಕೆಲವು ವಿಚಾರಗಳು ಹುಡುಗ, ಹುಡುಗಿಯರಿಗೆ ಡೈರೆಕ್ಟಾಗಿ ಕನೆಕ್ಟ್ ಆಗುತ್ತೆ. ಮನರಂಜನೆ ದೃಷ್ಟಿಯಿಂದ ಈ ಸಿನಿಮಾವನ್ನು ಆರಾಮವಾಗಿ ನೋಡಬಹುದು.