Friday, January 24, 2025
ಸುದ್ದಿ

ಗೊಳ್ತಮಜಲ್ ಗ್ರಾಮದ ಕಲ್ಲಡ್ಕ ಕೊಳಕೀರು ಗ್ರಾಮವಿಕಾಸ ಸಮಿತಿ ವತಿಯಿಂದ “ಗ್ರಾಮೋತ್ಸವ 2023 “ಅಂಗವಾಗಿ “ಕೆಸರುಡೊಂಜಿ ದಿನ “ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ : ಗೊಳ್ತಾಮಜಲ್ ಗ್ರಾಮದ ಕಲ್ಲಡ್ಕ ಕೊಳಕೀರು ಗ್ರಾಮವಿಕಾಸ ಸಮಿತಿ ವತಿಯಿಂದ “ಗ್ರಾಮೋತ್ಸವ 2023 “ಅಂಗವಾಗಿ “ಕೆಸರುಡೊಂಜಿ ದಿನ “ಕಾರ್ಯಕ್ರಮ ಕೊಳಕೀರು ಬೈಲಿನ ‘ಅಡಿಕೊಳಕೆ’ ಗದ್ದೆಯಲ್ಲಿ ನಡೆಯಿತು. ಊರಿನ ದನಿಗಳಾದ ರಮೇಶ್ ಪ್ರಭು ಕೊಳ್ಕೆರೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾದ ನೇತಾಜಿ ಯುವಕ ಮಂಡಲ ಕಲ್ಲಡ್ಕ ಇದರ ಗೌರವಾಧ್ಯಕ್ಷರಾದ ನಾಗೇಶ್ ಕಲ್ಲಡ್ಕ ನಾವು ಹುಟ್ಟಿದ ಮಣ್ಣನ್ನು ಮರೆಯಬಾರದು ಎಂಬ ದೃಷ್ಟಿಯಿಂದ ಊರಿನವರು ಸೇರಿ ಕೆಸರಲ್ಲಿ ಆಟವಾಡಿ ಹಿಂದಿನ ಪರಿಸ್ಥಿತಿಯನ್ನು ಈಗಿನ ಜನಾಂಗಕ್ಕೆ ನೆನಪಿಸುವುದು ಉತ್ತಮ ಕಾರ್ಯವಾಗಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಖ್ಯಾತ ದೈವ ನರ್ತಕ ರುಕ್ಮಯ ನಲಿಕೆ ವರ್ಷದ 365 ದಿನಗಳಲ್ಲಿ ನಡೆಯಬೇಕಾದ ಕಾರ್ಯಗಳು ಇಂದು ಒಂದು ದಿನಕ್ಕೆ ಮಾತ್ರ ಸೀಮಿತವಾದದ್ದು ವಿಪರ್ಯಾಸವಾಗಿದೆ, ಎಂದು ಹೇಳುತ್ತಾ ಕಾರ್ಯಕ್ರಮ ನಡೆಯುವ ಪ್ರದೇಶವಾದ ಕೊಳಕೀರು ಹಾಗೂ ಕ್ರೀಡಾಕೂಟದ ಗದ್ದೆಗೆ ಅಡಿಕೊಳಕೆ ಗದ್ದೆ ಎಂಬ ಹೆಸರು ಬರಲು ಕಾರಣವಾದ ಅಂಶಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಹಿಂದಿನ ಕಾಲದಿಂದಲೂ ಗದ್ದೆ ಬೇಸಾಯ ಮಾಡಿಕೊಂಡು ಜೀವನ ಸಾಗಿಸುತ್ತಾ ಬಂದ ಸುಮಾರು 25 ಮಂದಿ ಹಿರಿಯರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಕೊಳಕೀರು ಭಂಡಾರ ಮನೆ ವಿಶ್ವನಾಥ್ ಅಲ್ವಾ, ಸುಮನ ದಿನೇಶ್ ಪ್ರಭು, ನರಸಿಂಹ ಮಡಿವಾಳ, ವಿಶ್ವನಾಥ ಕೊಟ್ಟಾರಿ,ವಾಸಪ್ಪ ಗೌಡ,ಗ್ರಾಮ ಪಂಚಾಯತ್ ಸದಸ್ಯರುಗಳಾದ ಲಿಖಿತ ಆರ್ ಶೆಟ್ಟಿ, ಲೀಲಾವತಿ, ಗ್ರಾಮಭಿವೃದ್ಧಿ ಯೋಜನೆ ಕಲ್ಲಡ್ಕ ವಲಯ ಅಧ್ಯಕ್ಷ ತುಳಸಿ, ಡಾಕ್ಟರ್ ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಕ್ರೀಡಾಕೂಟದ ಗದ್ದೆಗೆ ಫಲ ತಂಬೂಲ ಪುಷ್ಪ ಸಮರ್ಪಿಸಿ, ಹಾಲು ಎರೆದು, ಕೆಸರಿನಲ್ಲಿ ಮಕ್ಕಳಿಗೆ ಮಹಿಳೆಯರಿಗೆ, ಪುರುಷರಿಗೆ, ವಿವಿಧ ರೀತಿಯ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳನ್ನು ಮಾಡಲಾಯಿತು.

ಕ್ರೀಡಾಕೂಟದ ಮಧ್ಯೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯಕ್, ಗ್ರಾಮಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣಶೆಟ್ಟಿ, ಶಂಬೂರು ಪ್ರೌಢಶಾಲಾ ಮುಖ್ಯ ಶಿಕ್ಷಕ ಕಮಲಾಕ್ಷ ಕೊಟ್ಟಾರಿ ಭೇಟಿ ನೀಡಿ ಶುಭ ಹಾರೈಸಿದರು. ನವ್ಯ ಪ್ರಶಾಂತ್ ಸ್ವಾಗತಿಸಿ, ಜಗದೀಶ್ ಮಾಸ್ಟರ್ ಕಲ್ಲಡ್ಕ ಪ್ರಸ್ತಾವಿಕ ಮಾಡಿ,ಕೀರ್ತನ ವಂದಿಸಿದರು.ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.