Sunday, November 24, 2024
ಸುದ್ದಿ

ಚಂದ್ರಯಾನ 3ರ ಕೌಂಟ್ ಡೌನ್ ಧ್ವನಿಯಾಗಿದ್ದ ವಿಜ್ಞಾನಿ ವಲರ್ಮತಿ ನಿಧನಕ್ಕೆ ಇಸ್ರೋ ವಿಜ್ಞಾನಿಗಳಿಂದ ಸಂತಾಪ – ಕಹಳೆ ನ್ಯೂಸ್

ಚಂದ್ರಯಾನ 3 ವೇಳೆ ರಾಕೆಟ್ ಉಡಾವಣೆಯ ಕ್ಷಣಗಣನೆ ಸಂದರ್ಭದಲ್ಲಿ ಧ್ವನಿ ನೀಡಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿ ವಲರ್ಮತಿ ಅವರು ಹೃದಯಘಾತದಿಂದ ನಿಧನರಾಗಿದ್ದಾರೆ.

ವಲರ್ಮತಿ ಅವರು ಚಂದ್ರಯಾನ-3 ಸೇರಿದಂತೆ ಇಸ್ರೋ ಕೈಗೊಂಡ ಅನೇಕ ಪ್ರಯೋಗಗಳ ಉಸ್ತುವಾರಿ ವಹಿಸಿದ್ದು, ಆದರೆ ಜುಲೈ 14 ರಂದು ಅತ್ಯಂತ ಯಶಸ್ವಿಯಾದ ಚಂದ್ರಯಾನ-3 ಉಡಾವಣೆಯು ಅವರ ಕೊನೆಯ ಧ್ವನಿಯಾಗಿದ್ದಾರೆ. ಪ್ರಪಂಚದಾದ್ಯಂತ ಈ ಧ್ವನಿ ವೀಕ್ಷಕರು ಕೇಳುವಂತಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ತಮಿಳುನಾಡಿನ ಅರಿಯಲೂರಿನಲ್ಲಿ 1959 ರಲ್ಲಿ ಜನಿಸಿದ ವಲರ್ಮತಿ ಅವರು 1984 ರಿಂದ ಇಸ್ರೋ ವಿಜ್ಞಾನಿಯಾಗಿ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದರು. ಇಸ್ರೋದ ಮಾಜಿ ನಿರ್ದೇಶಕ ಡಾ.ಪಿ.ವಿ.ವೆಂಕಟಕೃಷ್ಣನ್ ಅವರು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ ಮತ್ತು ಚಂದ್ರಯಾನ – 3 ಅವರ ಅಂತಿಮ ಕೌಂಟ್‍ಡೌನ್ ಘೋಷಣೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
“ಶ್ರೀಹರಿಕೋಟಾದಿಂದ ಇಸ್ರೋದ ಭವಿಷ್ಯದ ಮಿಷನ್‍ಗಳ ಕ್ಷಣಗಣನೆಗೆ ವಲರಮತಿ ಮೇಡಂ ಅವರ ಧ್ವನಿ ಇರುವುದಿಲ್ಲ. ಚಂದ್ರಯಾನ 3 ಅವರ ಅಂತಿಮ ಕ್ಷಣಗಣನೆ ಘೋಷಣೆಯಾಗಿತ್ತು. ಅನಿರೀಕ್ಷಿತ ನಿಧನ. ತುಂಬಾ ದುಃಖವಾಗುತ್ತಿದೆ. ಪ್ರಣಾಮ್ಸ್!” ಎಂದು ಡಾ. ವೆಂಕಟಕೃಷ್ಣನ್ ಘಿ ನಲ್ಲಿ ಬರೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಜುಲೈ 14 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಅನ್ನು ಉಡಾವಣೆ ಮಾಡಲಾಯಿತು. ಆಗಸ್ಟ್ 23 ರಂದು, ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಒಳಗೊಂಡಿರುವ ಚಂದ್ರಯಾನ-3 ಲ್ಯಾಂಡರ್ ಮಾಡ್ಯೂಲ್ ಚಂದ್ರನ ದಕ್ಷಿಣ ಧ್ರುವದ ಮೇಲ್ಮೈಯನ್ನು ಸ್ಪರ್ಶಿಸಿತು. ಈ ಮೂಲಕ ಈ ಸಾಧನೆಯನ್ನು ಸಾಧಿಸಿದ ನಾಲ್ಕನೇ ದೇಶವಾಗಿ ಗುರುತಿಸಿಕೊಂಡಿದೆ.