Thursday, January 23, 2025
ಸುದ್ದಿ

ಮಗಳಿಗೆ ಕಿರುಕುಳ ನೀಡುತ್ತಿದ್ದ ಯುವಕರನ್ನು ಕೊಂದು ಮೂಟೆ ಕಟ್ಟಿದ ತಂದೆ..! – ಕಹಳೆ ನ್ಯೂಸ್

ಮಧ್ಯಪ್ರದೇಶ : ಮಗಳಿಗೆ ಕಿರುಕುಳ ನೀಡುತ್ತಿದ್ದ ಇಬ್ಬರು ಯುವಕರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದ ಘಟನೆ ಅಗರ್ ಮಾಲ್ವಾ ಜಿಲ್ಲೆಯಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲಾ ಕೇಂದ್ರದಿಂದ ಸುಮಾರು 30 ಕಿಲೋ ಮೀಟರ್ ದೂರದಲ್ಲಿರುವ ಕಾನಾಡ್ ಪೆÇಲೀಸ್ ಠಾಣಾ ವ್ಯಾಪ್ತಿಯ ಬಟವಾಡ ಗ್ರಾಮದ ಕೃಷಿ ಜಮೀನಿನಲ್ಲಿ ಗೋಣಿಚೀಲಗಳಲ್ಲಿ ತುಂಬಿದ ರೀತಿ ಇಬ್ಬರು ಯುವಕರ ಶವಗಳು ಪತ್ತೆಯಾಗಿದ್ದವು.
ಬಟವಾಡ ಗ್ರಾಮದ ನಿವಾಸಿ ಮೆಹರ್ಬನ್ ಸಿಂಗ್ ಎಂಬುವರ ಒಡೆತನದ ಜಮೀನಿನಲ್ಲಿ ಸುಮಾರು 20-22 ವರ್ಷ ವಯಸ್ಸಿನ ಇಬ್ಬರು ಯುವಕರ ಶವಗಳನ್ನು ಅಡಗಿಸಿಟ್ಟಿರುವುದಾಗಿ ಪೆÇಲೀಸರಿಗೆ ಮಾಹಿತಿ ಲಭಿಸಿತ್ತು. ಬಳಿಕ ತನಿಖೆ ನಡೆಸಿದಾಗ ಮೃತದೇಹಗಳು ಪತ್ತೆಯಾಗಿದ್ದು, ಮೃತರನ್ನು ಗೋವಿಂದ್ ಗುರ್ಜರ್ ಎಂದು ಗುರುತಿಸಲಾಗಿದೆ. ಮತ್ತೋರ್ವನ ಗುರುತು ಇನ್ನೂ ಪತ್ತೆಯಾಗಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು