Saturday, November 23, 2024
ಸುದ್ದಿ

ಸನಾತನ ಧರ್ಮವನ್ನು ಮಲೇರಿಯಾಕ್ಕೇ ಹೋಲಿಸಿದ ತಮಿಳುನಾಡು ಸಚಿವ ಉದಯನಿಧಿ : ಕ್ರಮಕ್ಕೆ ಆಗ್ರಹಿಸಿ ಬಂಟ್ವಾಳ ನಗರ ಠಾಣೆಯಲ್ಲಿ ಹಿಂದು ಜಾಗರಣ ವೇದಿಕೆಯಿಂದ ದೂರು-ಕಹಳೆ ನ್ಯೂಸ್

ಬಂಟ್ವಾಳ : ಸನಾತನ ಧರ್ಮವನ್ನು ಡೆಂಘೀ ಮತ್ತು ಮಲೇರಿಯಾ ಕ್ಕೇ ಹೋಲಿಸಿ, ಅದನ್ನು ನಾಶ ಮಾಡುವಂತೆ ಬಹಿರಂಗ ಬೆದರಿಕೆ ಹಾಕಿದ ತಮಿಳುನಾಡು ಮುಖ್ಯಮಂತ್ರಿಯ ಮಗ ಮತ್ತು ಸಚಿವನಾದ ಉದಯ ನಿದಿ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದು ಜಾಗರಣ ವೇದಿಕೆಯ ತಾಲೂಕು ಸಂಯೋಜಕರಾದ ಹರೀಶ್ ತಲೆಂಬೀಲ ಅವರ ನೇತೃತ್ವದಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯ ಜಾಗರಣಾ ಪ್ರಮುಖ್ ವಕೀಲರಾದ ರಾಜೇಶ್ ಬೊಳ್ಳುಕಲ್ಲು, ಮಂಗಳೂರು ಮಹಾನಗರ ಮತ್ತು ಗ್ರಾಮಾಂತರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಕೆಂಪುಗುಡ್ಡೆ, ಬಾಲಕೃಷ್ಣ ಕಲಾಯಿ, ಶರಣ್ ಕಾಮಾಜೆ, ಸಂತೋಷ್ ಜೈನ್, ಬಾಲಕೃಷ್ಣ ಕಾಮಾಜೆ, ಸಂತೋಷ್ ಕಾಮಾಜೇ, ಪವನ್ ನಾವೂರ, ಸುಮಂತ್ ಕಾಮಾಜೆ ಉಪಸ್ಥಿತರಿದ್ದರು,

ಜಾಹೀರಾತು
ಜಾಹೀರಾತು
ಜಾಹೀರಾತು