Thursday, January 23, 2025
ಬೆಂಗಳೂರುಸುದ್ದಿ

ಹೈಕೋರ್ಟ್ ಎಚ್ಚರಿಕೆ ಬೆನ್ನಲ್ಲೇ, ನ್ಯಾಯಾಲಯ ಅದೇಶ ಉಲ್ಲಂಘಿಸಿದ ತಿಮರೋಡಿಗೆ ಮತ್ತೊಂದು ಶಾಕ್..!! ; ನ್ಯಾಯಾಂಗ ನಿಂದನೆ ಅರ್ಜಿ ದಾಖಲು – ಆಸ್ತಿ ಮುಟ್ಟುಗೋಲು ನೋಟೀಸ್ ಜಾರಿ, ಹೇಳಿಕೆ ಸಲ್ಲಿಸಲು ಸೂಚಿಸಿದ ಬೆಂಗಳೂರು ಸಿಟಿ ಸಿವಿಲ್ ಕೋರ್ಟು..!! – ಕಹಳೆ ನ್ಯೂಸ್

ಸೌಜನ್ಯ ಹತ್ಯೆ ಪ್ರಕರಣದ ತೀರ್ಪು ಪ್ರಕಟವಾದ ಬೆನ್ನಲ್ಲೇ ನ್ಯಾಯಾಲಯದ ಆದೇಶ ಉಲ್ಲಂಘಿಸಿ, ನ್ಯಾಯಾಲಯ, ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಹೆಗ್ಗಡೆ ಕುಟುಂಬದ ವಿರುದ್ಧ ಅವಹೇಳನಾಕಾರಿಯಾಗಿ ಮಹೇಶ ಶೆಟ್ಟಿ ತಿಮರೋಡಿ ಭಾಷಣಗಳನ್ನು ‌ಹಾಗೂ ಹೇಳಿಕೆಗಳನ್ನು ನೀಡುತ್ತಲೇ ಇರುವುದನ್ನು ಮೊನ್ನೆತಾನೆ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದ ಬೆನ್ನಲ್ಲೇ ಇದೀಗ ತಿಮರೋಡಿಗೆ ಮತ್ತೊಂದು ಶಾಕ್ ಕಾದಿದೆ.

ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಮತ್ತು ಮಹೇಶ್ ಶೆಟ್ಟಿ ತಿಮರೋಡಿಗೆ ಸೇರಿದ ಉಜಿರೆ ಮತ್ತು ಕನ್ಯಾಡಿ ಗ್ರಾಮದ 8 ಎಕರೆ ಆಸ್ತಿ ಮುಟ್ಟುಗೋಲಿಗೆ ಅರ್ಜಿ ದಾಖಸಿ, ಈ ಬಗ್ಗೆ ತಿಮರೋಡಿ ನೋಟೀಸ್ ಜಾರಿ ಮತ್ತು ಈ ಬಗ್ಗೆ ಹೇಳಿಕೆ ಸಲ್ಲಿಸಲು ನ್ಯಾಯಾಲಯ ಸೂಚನೆ ನೀಡಿದೆ. ಹೆಗ್ಗಡೆ ಕುಟುಂಬದ ಪರ ಖ್ಯಾತ ಹೈಕೋರ್ಟ್ ನ್ಯಾಯಾವಾದಿ ರಾಜಶೇಖರ ಹಿಲ್ಯಾರು ವಾದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು