Thursday, January 23, 2025
ಸುದ್ದಿ

ರಿಕ್ಷಾ ಮತ್ತು ಕಾರಿನ ನಡೆವೆ ಭೀಕರ ಅಪಘಾತ ; ರಿಕ್ಷಾದಲ್ಲಿದ್ದ ನಾಲ್ವವರಿಗೆ ಗಾಯ – ಕಹಳೆ ನ್ಯೂಸ್

ಬಂಟ್ವಾಳ: ರಿಕ್ಷಾ ಮತ್ತು ಕಾರಿನ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿ ರಿಕ್ಷಾದಲ್ಲಿದ್ದ ಬಾಲಕಿ ಸಹಿತ ನಾಲ್ವರು ಗಾಯಗೊಂಡ ಘಟನೆ ವಗ್ಗ ಎಂಬಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಎಂಟು ವರ್ಷದ ಬಾಲಕಿ ಶ್ರೀನಿತ , ಪದ್ಮಲತಾ, ಅಪ್ಪಿಪೂಜಾರಿ ಮತ್ತು ಚಾಲಕ ಸಂಜೀವ ಪೂಜಾರಿ ಗಾಯಗೊಂಡವರು. ಕಾರು ಚಾಲಕ ಮಹಮ್ಮದ್ ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಕಾಡಬೆಟ್ಟು ಕ್ರಾಸ್ ನಿಂದ ಹೆದ್ದಾರಿಗೆ ರಿಕ್ಷಾ ಪ್ರವೇಶ ಮಾಡುವ ಸಂದರ್ಭದಲ್ಲಿ ಡಿಕ್ಕಿಹೊಡೆದಿದೆ.
ಮಂಗಳೂರಿನಿAದ ಬೆಳ್ತಂಗಡಿ ಮಾರ್ಗವಾಗಿ ಬೆಂಗಳೂರುಕಡೆಗೆ ಹೋಗುತ್ತಿದ್ದ ಕಾರಿಗೆ ಕಾಡಬೆಟ್ಟು ಕ್ರಾಸ್ ನಲ್ಲಿ ಏಕಾಏಕಿ ರಿಕ್ಷಾ ಹೆದ್ದಾರಿಗೆ ನುಗ್ಗಿಸಿದ ಪರಿಣಾಮವಾಗಿ ಅಪಘಾತ ನಡೆದಿದೆ ಎಂದು ಹೇಳಲಾಗಿದ್ದು,ಕಾರು ಚಾಲಕ ಮಹಮ್ಮದ್ ರಿಕ್ಷಾ ಚಾಲಕನ ಮೇಲೆ ದೂರು ನೀಡಿದ್ದು,ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.