Thursday, January 23, 2025
ಸುದ್ದಿ

52ನೇ ಕಣ್ಣೂರು ವಾರ್ಡ್ ರಸ್ತೆ ವಿಸ್ತರಣೆಗೆ ಶಾಸಕ ಡಿ. ವೇದವ್ಯಾಸ ಕಾಮತ್ ಶಿಲಾನ್ಯಾಸ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 52ನೇ ಕಣ್ಣೂರು ವಾರ್ಡಿನ ಬಲ್ಲೂರು ಅಡ್ಡರಸ್ತೆಯ ಕಿರಿದಾದ ರಸ್ತೆಯ ವಿಸ್ತರಣೆ ಹಾಗೂ ಮುಂದುವರಿಕೆ ಕಾಮಗಾರಿಗೆ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಸೋಮವಾರ ಶಿಲಾನ್ಯಾಸ ನೆರವೇರಿಸಿದರು.



ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಬಹಳ ಸಮಯದಿಂದ ಇಲ್ಲಿನ ಕಿರಿದಾದ ರಸ್ತೆಯ ಅಗಲೀಕರಣವಾಗಬೇಕು ಹಾಗೂ ಮುಂದಿನ ಸುಮಾರು 10-15 ಮನೆಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ವಿಸ್ತರಣೆಯಾಗಬೇಕು ಎಂಬ ಬೇಡಿಕೆ ಇತ್ತು. ಈ ನಿಟ್ಟಿನಲ್ಲಿ ಪಿಡಬ್ಲ್ಯುಡಿ ಇಲಾಖೆಯಿಂದ ಅನುದಾನ ಹೊಂದಿಸಿಕೊoಡು 15 ಲಕ್ಷ ರೂ ವೆಚ್ಚದಲ್ಲಿ ಈ ರಸ್ತೆಯ ವಿಸ್ತರಣೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಶಾಸಕರು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರಸ್ತೆ ಸೌಲಭ್ಯ ಸರಿಯಾಗಿಲ್ಲದ ಕಾರಣ ಈ ಭಾಗದ ನಿವಾಸಿಗಳಿಗೆ ತುರ್ತು ಸಂದರ್ಭದಲ್ಲಿ ಮನೆತನಕ ವಾಹನಗಳ ಸೌಕರ್ಯ ದೊರೆಯುತ್ತಿರಲಿಲ್ಲ. ಕುಟುಂಬದಲ್ಲಿ ಅನಾರೋಗ್ಯಪೀಡಿತರು ಇದ್ದ ಸಮದರ್ಭದಲ್ಲಿ ಯಾವುದೇ ವಾಹನ ಮನೆ ತನಕ ಬಾರದ ಕಾರಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವುದು ಕೂಡ ದುಸ್ತರವಾಗಿತ್ತು. ಇಂತಹ ಎಲ್ಲ ಸಮಸ್ಯೆಗಳನ್ನು ಸ್ಥಳೀಯ ಕಾರ್ಪೋರೇಟರ್ ಚಮದ್ರಾವತಿ ಅವರು ನನ್ನ ಗಮನಕ್ಕೆ ತಂದು ಈ ರಸ್ತೆಯ ವಿಸ್ತರಣೆಗಾಗಿ ಬಹಳ ಶ್ರಮಿಸಿದ್ದಾರೆ ಎಂದು ಶಾಸಕ ಕಾಮತ್ ಹೇಳಿದರು.
ಇಂದೀಗ ಸ್ಥಳೀಯ ಹಿರಿಯರಿಂದಲೇ ಈ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಗಿದ್ದು, ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಂಡು ರಸ್ತೆಯು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಶಾಸಕರು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೆಟರ್ ಚಂದ್ರಾವತಿ ವಿಶ್ವನಾಥ್, ಬೂತ್ ಅಧ್ಯಕ್ಷರಾದ ವಿವೇಕ್ ಸುವರ್ಣ , ಶಕ್ತಿ ಕೇಂದ್ರದ ಪ್ರಮುಖ್ ನವೀನ್ ಕುಲಾಲ್, ಒ ಬಿ ಸಿ ಮೋರ್ಚಾ ಪ್ರಮುಖರಾದ ಯಶವಂತ್ ಅಮೀನ್, ಪಕ್ಷದ ಹಿರಿಯರು, ಮಹಿಳೆಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.