Friday, November 29, 2024
ಸುದ್ದಿ

ಮುಂಬೈ ಫ್ಲಾಟ್‌ನಲ್ಲಿ ಗಗನಸಖಿ ಮೃತದೇಹ ಪತ್ತೆ – ಸ್ವೀಪರ್‌ನನ್ನು ಬಂಧಿಸಿದ ಪೊಲೀಸರು – ಕಹಳೆ ನ್ಯೂಸ್

ತರಬೇತಿ ಪಡೆಯುತ್ತಿದ್ದ ಗಗನಸಖಿ ಶವವಾಗಿ ಪತ್ತೆಯಾಗಿರುವ ಘಟನೆ ಮುಂಬೈನಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಛತ್ತೀಸ್ ಗಢ ಮೂಲದ ರೂಪಾ ಓಗ್ರೆ ಎಂಬಾಕೆಯನ್ನು ಕಳೆದ ಏಪ್ರಿಲ್ ತಿಂಗಳಿನಲ್ಲಿ ಏರ್ ಇಂಡಿಯಾದಿಂದ ಗಗನಸಖಿ ತರಬೇತಿಗಾಗಿ ಆಯ್ಕೆಯಾದ ನಂತರ ಮುಂಬೈಗೆ ಸ್ಥಳಾಂತರಗೊಂಡಿರುವುದಾಗಿ ವರದಿ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತರನ್ನು ರೂಪಲ್ ಓಗ್ರೆ ಎಂದು ಗುರುತಿಸಲಾಗಿದ್ದು.ಉಪನಗರ ಅಂಧೇರಿಯ ಮರೋಲ್ ಪ್ರದೇಶದ ಕ್ರಿಶನ್‌ಲಾಲ್ ಮರ್ವಾಹ್ ಮಾರ್ಗದಲ್ಲಿರುವ ಎನ್‌ಜಿ ಕಾಂಪ್ಲೆಕ್ಸ್ನಲ್ಲಿರುವ ಫ್ಲಾಟ್‌ನಲ್ಲಿ ಭಾನುವಾರ ತಡರಾತ್ರಿ ಆಕೆ ಶವವಾಗಿ ಪತ್ತೆಯಾಗಿದ್ದಾಳೆ ಎಂದು ಹೇಳಿದರು.

ರೂಪಾ ಅಂಧೇರಿಯಲ್ಲಿರುವ ಪ್ಲಶ್ ಹೌಸಿಂಗ್ ಸೊಸೈಟಿಯಲ್ಲಿ ತನ್ನ ಅಕ್ಕ ಹಾಗೂ ಆಕೆಯ ಬಾಯ್ ಫ್ರೆಂಡ್ ಜತೆ ವಾಸವಾಗಿದ್ದಳು. ಕೆಲವು ದಿನಗಳ ಹಿಂದಷ್ಟೇ ಅಕ್ಕ ಮತ್ತು ಆಕೆಯ ಬಾಯ್ ಫ್ರೆಂಡ್ ಊರಿಗೆ ತೆರಳಿದ್ದರು. ಗಗನಸಖಿ ಸಾವಿಗೆ ಸಂಬಂಧಿಸಿದಂತೆ ಕಸಗುಡಿಸುವ (ಸ್ವೀಪರ್) ಕೆಲಸ ಮಾಡುತ್ತಿದ್ದ 40 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಆತನನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಹೌಸಿಂಗ್ ಸೊಸೈಟಿಯಲ್ಲಿನ ಭದ್ರತಾ ಕ್ಯಾಮೆರಾಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.ಆರೋಪಿಗಳ ಪತ್ತೆಗೆ 12 ತಂಡಗಳನ್ನು ರಚಿಸಲಾಗಿದೆ. ಸ್ವೀಪರ್ ವಿಕ್ರಮ್ ಅತ್ವಾಲ್ ಪತ್ನಿಯನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಭಾನುವಾರ ಹೌಸಿಂಗ್ ಸೊಸೈಟಿಯ ಫ್ಲ್ಯಾಟ್ ನಲ್ಲಿದ್ದ ರೂಪಾ ಮೊಬೈಲ್ ಕರೆಯನ್ನು ಸ್ವೀಕರಿಸದಿದ್ದಾಗ, ಪೋಷಕರು ರೂಪಾಳ ಗೆಳೆಯರಿಗೆ ಕರೆ ಮಾಡಿ ಪರಿಶೀಲಿಸುವಂತೆ ವಿನಂತಿಸಿಕೊಂಡಿದ್ದರು. ಅದರಂತೆ ಆಕೆಯ ಗೆಳೆಯರು ಹೌಸಿಂಗ್ ಸೊಸೈಟಿಗೆ ಬಂದಾಗ ಆಕೆಯ ಕೋಣೆ ಒಳಗಿನಿಂದ ಲಾಕ್ ಆಗಿತ್ತು. ಬಳಿಕ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದರು. ಪೊಲೀಸರು ಹೌಸಿಂಗ್ ಸೊಸೈಟಿಗೆ ಆಗಮಿಸಿ ಬಾಗಿಲು ಒಡೆದು ಒಳ ಹೋದಾಗ, ರೂಪಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.

ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ಪೊಲೀಸರು ಕೊಲೆ ಪ್ರಕರಣದ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.