Friday, January 24, 2025
ಸುದ್ದಿ

ಹುಲಿ ದಾಳಿಗೆ 9 ವರ್ಷದ ಬಾಲಕ ಬಲಿ – ಕಹಳೆ ನ್ಯೂಸ್

ಮೈಸೂರು : ಹುಲಿ ದಾಳಿಗೆ 9 ವರ್ಷದ ಬಾಲಕ ಬಲಿಯಾದ ಘಟನೆ ಎಚ್.ಡಿ.ಕೋಟೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.
ಕೃಷ್ಣ ನಾಯಕ್ ಮತ್ತು ಮಹಾದೇವಿಬಾಯಿ ದಂಪತಿ ಪುತ್ರ ಚರಣ್ ನಾಯಕ್. ಸಿದ್ದಾಪುರ ಸರ್ಕಾರಿ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದ ಬಾಲಕ ಹುಲಿಯ ಬಾಯಿಗೆ ಬಲಿಯಾಗಿದ್ದಾನೆ.


ಸೋಮವಾರ ಮಧ್ಯಾಹ್ನದ ನಂತರ ಶಾಲೆಗೆ ರಜೆ ನೀಡಿದ ಹಿನ್ನಲೆ ಚರಣ್ ಜಮೀನಿನಲ್ಲಿದ್ದ ತಂದೆ-ತಾಯಿ ಬಳಿಗೆ ಹೋಗಿದ್ದ, ಬಿಸಿಲು ಇದ್ದದ್ದರಿಂದ ಮಗನನ್ನು ಮರದ ನೆರಳಲ್ಲಿ ಕೂರುವಂತೆ ಹೇಳಿದ್ದರು.
ಈ ವೇಳೆ ಹುಲಿ ಬಾಲಕ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ. ಮಗ ಇಲ್ಲದನ್ನುಗಮನಿಸಿದ ಪೋಷಕರು ಹುಡುಕಾಡಿದಾಗ ರಕ್ತದ ಮಡುವಿನಲ್ಲಿ ಮಗನ ದೇಹ ಇರುವುದು ಕಂಡುಬAದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು