Saturday, January 25, 2025
ಸುದ್ದಿ

ಕಾಲೇಜು ವಿದ್ಯಾರ್ಥಿ ನಾಪತ್ತೆ; ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು – ಕಹಳೆ ನ್ಯೂಸ್

ಬೆಳ್ತಂಗಡಿ ಗುರು ದೇವ ಕಾಲೇಜು ಬಳಿಯ ನಿವಾಸಿ ತೋಪೆ ಗೌಡರ ಮಗ ಪುನೀತ್ ಎಸ್.ಟಿ. ಕಾಣೆಯಾದ ಘಟನೆ ಸೋಮವಾರ ನಡೆದಿದೆ.



3ನೇ ವರ್ಷದ ಬಿ.ಎಸ್.ಸಿ ವಿದ್ಯಾಭ್ಯಾಸ ಮಾಡಿಕೊಂಡಿದ್ದ ಈತ ತನ್ನ ತಂಗಿ ಕಾಲೇಜಿಗೆ ತೆರಳಿದ ಬಳಿಕ ಒಬ್ಬನೇ ಮನೆಯಲ್ಲಿದ್ದು ತಾಯಿ ಸಕಲೇಶಪುರದಿಂದ ಬಂದು ನೋಡುವಾಗ ಹಾಲ್‌ನ ಬೆಡ್ ಮೇಲೆ ಒಂದು ಪತ್ರ ಬರೆದಿಟ್ಟು ಹೋಗಿದ್ದಾನೆ.
ಆತನನ್ನು ಪಕ್ಕದ ಮನೆಯ ಗಿರಿಜಾ ಅವರು ಮಧ್ಯಾಹ್ನ ನೋಡಿದ್ದು ಬಳಿಕ ಕಾಣೆಯಾಗಿದ್ದಾನೆ ಎನ್ನಲಾಗಿದೆ. ಈತನ ಕುರಿತು ಸಂಬAಧಿಕರ ಮನೆ ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗದ ಕಾರಣ ತಾಯಿ ಗೀತಾ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು