Saturday, January 25, 2025
ಸುದ್ದಿ

ತುಳು ಚಿತ್ರನಿರ್ಮಾಪಕ ದೇವದಾಸ್ ಪಾಂಡೇಶ್ವರ ನಿಧನ – ಕಹಳೆ ನ್ಯೂಸ್

ಮಂಗಳೂರು : ‘ರಂಗ್’ ತುಳು ಚಲಚಿತ್ರದ ನಿರ್ಮಾಪಕರಾದ ದೇವದಾಸ್ ಪಾಂಡೇಶ್ವರ ರವರು ಅಲ್ಪ ಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು.ತುಳು ಚಿತ್ರರಂಗದಲ್ಲಿ ದೊಡ್ಡ ಬಜೆಟ್ ಸಿನಿಮಾ ನಿರ್ಮಾಣ ಮಾಡಿದ್ದ ದೇವದಾಸ್ ರವರು ಪಾಂಡೇಶ್ವರದಲ್ಲಿ ಶ್ರೀ ಕಟೀಲೇಶ್ವರಿ ಫೈನಾನ್ಸ್ ಉದ್ಯಮ ಹೊಂದಿದ್ದರು.



ಕದ್ರಿ ದೇವಸ್ಥಾನದ ಆಡಳಿತ ಸಮೀತಿಯಲ್ಲಿ ಸದಸ್ಯರಾಗಿದ್ದು ಸಮಾಜ ಸೇವಕರಾಗಿ ಹಲವಾರು ಸಂಘ ಸಂಸ್ಥೆಯಲ್ಲಿ ಸಕ್ರೀಯವಾಗಿ ಸೇವೆ ಸಲ್ಲಿಸುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು