ಕಟಪಾಡಿ ರೋಟರಿ ಸಂಸ್ಥೆ ಮತ್ತು ಇಂಟರಾಕ್ಟ್ ಕ್ಲಬ್ ಇವರ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿನಿಯರಿಗೆ ಹದಿಹರೆಯದ ಸಮಸ್ಯೆಗಳ ಸ್ವಚ್ಛತೆ ಕುರಿತು ಕಾರ್ಯಾಗಾರ – ಕಹಳೆ ನ್ಯೂಸ್
ಉಡುಪಿ : ಕಟಪಾಡಿ ರೋಟರಿ ಸಂಸ್ಥೆ ಮತ್ತು ಇಂಟರಾಕ್ಟ್ ಕ್ಲಬ್ ಇವರ ಜಂಟಿ ಆಶ್ರಯದಲ್ಲಿ ಆಪ್ತಸಮಲೋಚಕಿ ಮತ್ತು ಆಡಳಿತ ಅಧಿಕಾರಿ ಶ್ರೀಮತಿ ಸೌಜನ್ಯ ಶೆಟ್ಟಿ ಡಾ. ಎ. ವಿ.ಬಾಳಿಗ ಆಸ್ಪತ್ರೆ ದೊಡ್ಡನಗುಡ್ಡೆ ಉಡುಪಿ ಇವರಿಂದ ಎಸ್ ವಿ ಎಸ್ ಕಟಪಾಡಿ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರಿಗೆ ಹದಿಹರೆಯದ ಸಮಸ್ಯೆಗಳು, ಫೋಕ್ಸು ಕಾಯ್ದೆ ಮತ್ತು ಆರೋಗ್ಯ ಹಾಗೂ ಸ್ವಚ್ಛತೆ ಕುರಿತು ಕಾರ್ಯಾಗಾರ ಎಸ್ ವಿ ಎಸ್ ಅಡಿಟೋರಿಯಂ ಅಲ್ಲಿ ನಡೆಯಿತು.
ಸುಮಾರು ೨೫೦ ವಿದ್ಯಾರ್ಥಿನಿಯರು ಭಾಗವಹಿಸಿದ್ದರು ಕಾರ್ಯಕ್ರಮದ ಉದ್ಘಾಟನೆಯನ್ನು ರೋಟರಿ ಕ್ಲಬ್ ಅಧ್ಯಕ್ಷರು ರಿತೇಶ್ ಬಿ ಕೋಟ್ಯಾನ್ ಹಾಗೂ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ತಂತ್ರಿಯವರು ನೆರವೇರಿಸಿದರು. ವೇದಿಕೆಯಲ್ಲಿ ರೊಟೇರಿಯನ್ ಶ್ರೀಕರ್ ಅಂಚನ್ , ವಿಲ್ಫ್ರೆಡ್ ಲೂಯಿಸ್, ಇಂಟರಾಕ್ಟ್ ಸಂಯೋಜಕ ಶಿಕ್ಷಕ ಕಿರಣ್ ಶೆಟ್ಟಿ , ಇಂಟರಾಕ್ಟ್ ಅಧ್ಯಕ್ಷ ಪ್ರತಿಶ್, ಕಾರ್ಯದರ್ಶಿ ಅನನ್ಯ ಉಪಸ್ಥಿತರಿದ್ದರು. ರೋಟರಿ ಕಾರ್ಯದರ್ಶಿ ಶಕುಂತಲಾ ಕಾರ್ಯಕ್ರಮವನ್ನ ನಿರ್ವಹಿಸಿ ಧನ್ಯವಾದ ನೀಡಿದರು. ಕಾರ್ಯಕ್ರಮದಲ್ಲಿ ಉಭಯ ಶಾಲೆಗಳ ಶಿಕ್ಷಕಿಯರು ಭಾಗವಹಿಸಿದ್ದರು.