Wednesday, November 27, 2024
ಸುದ್ದಿ

ವ್ರತ ಮಾಡಿದರೂ ಈಡೇರದ ಮದುವೆ ಆಸೆ : ದೇವಸ್ಥಾನದಿಂದ ಶಿವಲಿಂಗವನ್ನೇ ಕದ್ದ ಯುವಕ..! – ಕಹಳೆ ನ್ಯೂಸ್

ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯಲ್ಲಿ ಯುವಕನೊಬ್ಬ ತನ್ನ ಮದುವೆ ಆಸೆ ಈಡೇರಲಿಲ್ಲ ಎಂಬ ಕಾರಣದಿಂದ ದೇವಸ್ಥಾನದಿಂದ ಶಿವಲಿಂಗ ಕದ್ದಿದ್ದಾನೆ. ಸದ್ಯ ಆರೋಪಿ ಯುವಕನನ್ನು ಪೆÇಲೀಸರು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಲವು ಸಂದರ್ಭದಲ್ಲಿ ತಾವು ಅಂದುಕೊಂಡಿದ್ದ ನೆರವೇರಿದ ಕಾರಣ ದೇವರಿಗೆ ಹರಕೆಯನ್ನೂ ಜನರು ತೀರಿಸುತ್ತಾರೆ. ಆದರೆ, ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯಲ್ಲಿ ಯುವಕನೊಬ್ಬ ತನ್ನ ಮದುವೆಯಾಗುವ ಆಸೆ ಈಡೇರಲಿಲ್ಲ ಎಂಬ ಕೋಪದಲ್ಲಿ ದೇವರ ಶಿವಲಿಂಗವನ್ನೇ ಕದ್ದು ಹೊಲದಲ್ಲಿ ಬಚ್ಚಿಟ್ಟಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿನ ಮಹೇವ ಘಾಟ್ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದ್ದು, 27 ವರ್ಷದ ಯುವಕ ಕುಮ್ಹಿಯಾವಾಹ ಬಜಾರ್‍ನಲ್ಲಿರುವ ಭೈರೋ ಬಾಬಾ ದೇವಸ್ಥಾನಲ್ಲಿನ ಶಿವಲಿಂಗ ಕಳ್ಳತನ ಮಾಡಿದ್ದಾನೆ. ಇತರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದಾಗ ಶಿವಲಿಂಗ ಕಂಡು ಬಂದಿಲ್ಲ. ಇದರಿಂದ ದೇವಸ್ಥಾನದ ಅಧಿಕಾರಿಗಳು ಮತ್ತು ಪೆÇಲೀಸರಿಗೆ ಭಕ್ತರು ವಿಷಯ ಮುಟ್ಟಿಸಿದ್ದಾರೆ. ಅಲ್ಲದೇ, ಇದೇ ವಿಷಯವಾಗಿ ಗ್ರಾಮದ ಮುಖಂಡ ಓಂಪ್ರಕಾಶ್ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ದೂರಿನ ಮೇರೆಗೆ ಎಫ್‍ಐಆರ್ ದಾಖಲಿಸಿಕೊಂಡ ಪೆÇಲೀಸರು ತನಿಖೆ ಆರಂಭಿಸಿದ್ದಾರೆ. ಈ ವೇಳೆ, ಭಾನುವಾರ ಕುಮ್ಹಿಯಾವಾಹ ಗ್ರಾಮದಲ್ಲೇ ಛೋಟು ಎಂಬ ಯುವಕನನ್ನು ವಶಕ್ಕೆ ಪಡೆದು ಪೆÇಲೀಸರು ವಿಚಾರಣೆ ನಡೆಸಿದ್ದಾರೆ. ಆರೋಪಿ ಛೋಟು ಶಿವಲಿಂಗ ಕದ್ದ ವಿಷಯವನ್ನು ಒಪ್ಪಿಕೊಂಡಿದ್ದಾನೆ. ಶಿವಲಿಂಗವನ್ನು ಹೊಲವೊಂದರಲ್ಲಿ ಎಲೆಗಳು ಮತ್ತು ಬಿದಿರುಗಳ ರಾಶಿಯ ಅಡಿ ಮರೆಮಾಚಲಾಗಿತ್ತು ಎಂದು ಮಹೇವ ಘಾಟ್ ಪೆÇಲೀಸ್ ಠಾಣಾಧಿಕಾರಿ ರಜನಿಕಾಂತ್ ಹೇಳಿದ್ದಾರೆ.