ಉಡುಪಿ : ಇಂದು ಕಡೆಗೋಲು ಶ್ರೀಕೃಷ್ಣನ ನಗರಿ ಉಡುಪಿಯಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಿದ್ಧತೆಗಳು ನಡೆದಿದೆ. ಸಾವಿರಾರು ಭಕ್ತರು ಮಠದ ಅಷ್ಟಮಿಯಲ್ಲಿ ಭಾಗಯಾಗಲಿದ್ದಾರೆ. ಲಕ್ಷ ಉಂಡೆ ಚಕ್ಕುಲಿ ಸಿದ್ಧವಾಗುತ್ತಿದ್ದು, ಹುಲಿ ವೇಷಗಳಿಗೆ ಆರ್ಥಿಕ ಸಹಕಾರ ನೀಡಲು ಶೀರೂರು ಮಠ ನೋಟಿನ ಮಾಲೆಗಳನ್ನು ರೆಡಿ ಮಾಡುತ್ತಿದ್ದಾರೆ.
ಉಡುಪಿಯಲ್ಲಿ ಎರಡು ದಿನಗಳ ಕಾಲ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ನಡೆಯಲಿದೆ. ಎಂಟು ಶತಮಾನಗಳ ಹಿಂದೆ ಪ್ರತಿμÁ್ಠಪಿಸಲ್ಪಟ್ಟ ಉಡುಪಿಯ ಕೃಷ್ಣಮಠದ ಜನ್ಮಾಷ್ಟಮಿಗೆ ವಿಶೇಷ ಮಹತ್ವ ಇದೆ. ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನ ಹಗಲೆಲ್ಲ ಭಕ್ತರು ಉಪವಾಸ ಇರುತ್ತಾರೆ. ದೇವರ ಪೂಜೆಗೆ ಹೂವಿನ ಮಾರುಕಟ್ಟೆ ಸಿದ್ದವಾಗಿದ್ದು, ನಾಡಿನ ನಾನಾ ಭಾಗಗಳಿಂದ ಬಂದಿರುವ ವ್ಯಾಪಾರಿಗಳು ವ್ಯಾಪಾರದಲ್ಲಿ ಬಿಜಿಯಾಗಿದ್ದಾರೆ. ರಥಬೀದಿಯಲ್ಲಿ ನಡೆಯುವ ವಿಟ್ಲಪಿಂಡಿ ಮಹೋತ್ಸವ ಅಥವಾ ಶ್ರೀ ಕೃಷ್ಣ ಲೀಲೋತ್ಸವಕ್ಕೆ ತಯಾರಿಗಳು ನಡೆದಿವೆ. ಅಷ್ಟಮಠಗಳ ಸುತ್ತಲೂ ಮರದ ಗುರ್ಜಿಗಳನ್ನು ಅಳವಡಿಸಲಾಗಿದೆ.
ಉಡುಪಿಯ ಅಷ್ಟಮಿ ಅಂದರೆ ಅಲ್ಲಿ ಹುಲಿವೇಷ ಸಹಿತ ಅನೇಕ ವೇಷಧಾರಿಗಳ ಆರ್ಭಟ ಇರುತ್ತದೆ. ಈ ಬಾರಿ ನೂರಕ್ಕೂ ಅಧಿಕ ಹುಲಿವೇಷ ತಂಡಗಳು ಹಬ್ಬಕ್ಕೆ ಹೊಸ ಹುರುಪು ನೀಡಲಿವೆ. ಶಿರೂರು ಮಠದಿಂದ ಈ ಬಾರಿ ಹುಲಿ ವೇಷಗಳ ಪೆÇೀಷಣೆಗೆ ನೋಟಿನ ಮಾಲೆ ಸಿದ್ಧಗೊಳಿಸಲಾಗಿದೆ. ಶ್ರೀ ಶೀರೂರು ವೇದವರ್ಧನ ತೀರ್ಥ ಸ್ವಾಮೀಜಿ ಸುಮಾರು ಐದು ಲಕ್ಷ ರುಪಾಯಿ ಹುಲಿವೇಷ ಸಹಿತ ಎಲ್ಲಾ ಕಲಾವಿದರಿಗೆ ಸಹಾಯ ಮಾಡಲಿದ್ದಾರೆ.
ಅಘ್ರ್ಯ ಪ್ರಧಾನದ ವೇಳೆ ಕೃಷ್ಣ ದೇವರಿಗೆ ಅರ್ಪಿಸಲು ನಾನಾ ಬಗೆಯ ಉಂಡೆ ಚಕ್ಕುಲಿಗಳ ತಯಾರಿ ನಡೆದಿದೆ. ಮಠಕ್ಕೆ ಬರುವ ಭಕ್ತರಿಗೆ ವಿತರಿಸಲು 40 ಸಾವಿರ ಚಕ್ಕುಲಿಗಳು ಸಿದ್ಧವಾಗುತ್ತಿದೆ. ಅರಳು, ತಂಬಿಟ್ಟು, ನೆಲಗಡಲೆ, ಎಳ್ಳು ಬೆಲ್ಲದಿಂದ ತಯಾರಿಸಿದ ಸುಮಾರು 80ಸಾವಿರದಷ್ಟು ಉಂಡೆಗಳನ್ನು ಬಾಣಸಿದರು ಸಿದ್ದ ಮಾಡುತ್ತಿದ್ದಾರೆ. ಶ್ರೀಕೃಷ್ಣ ಲೀಲೋತ್ಸವ ಸಂದರ್ಭ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದ್ದು ಉಂಡೆ ಚಕ್ಕುಲಿಯನ್ನು ವಿತರಿಸಲಾಗುತ್ತದೆ. ಸುತ್ತಮುತ್ತಲ ಶಾಲೆಗಳು ಸಾರ್ವಜನಿಕ ಸಂಸ್ಥೆಗಳಿಗೆ ಶ್ರೀ ಕೃಷ್ಣ ಪ್ರಸಾದವನ್ನು ಪರ್ಯಾಯ ಕೃμÁ್ಣಪುರ ಮಠ ವಿತರಣೆ ಮಾಡಲಿದೆ.
ಶಕ್ತಿ ಯೋಜನೆಯಡಿಯಲ್ಲಿ ಉಚಿತ ಸರ್ಕಾರಿ ಬಸ್ ವ್ಯವಸ್ಥೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವ ಸಾಧ್ಯತೆ ಇದೆ. ಪೆÇಲೀಸರು ಹೆಚ್ಚುವರಿ ಬಂದೋಬಸ್ತ್ ಮಾಡಿದ್ದಾರೆ.