Monday, November 25, 2024
ಸುದ್ದಿ

ಆಶ್ರಯ ಪೂರ್ಣಕ್ಕೆ ಸಿಗದ ಅನುದಾನ : ಫಲಾನುಭವಿಗಳಿಂದ ಮಂಗಳೂರು ಉತ್ತರ ಶಾಸಕರಿಗೆ ಸಾಲು ಸಾಲು ಮನವಿ – ಕಹಳೆ ನ್ಯೂಸ್

ಸುರತ್ಕಲ್: ಆಶ್ರಯ ಮನೆ ನೀಡುವ ಸರಕಾರದ ಯೋಜನೆ ಪೂರ್ಣಗೊಳ್ಳದ ಹಿನ್ನಲೆ ಬಾಡಿಗೆ ಮನೆಯಲ್ಲಿ ಆರ್ಥಿಕ ಸಂಕಷ್ಟದಿಂದ ಇರುವುದೂ ಸಾಧ್ಯವಾಗುತ್ತಿಲ್ಲ. ಬೇಗನೆ ಮನೆ ಸಿಗುವಂತೆ ಮಾಡಿ, ಬಿಪಿಎಲ್ ಬದಲು ನಮಗೆ ಎಪಿಎಲ್ ನೀಡಿದ್ದಾರೆ, ಹೃದಯ ಖಾಯಿಲೆಯಿಂದ ಬಳಲುತ್ತಿದ್ದು ಕೆಲಸ ಮಾಡಲೂ ಆಗುತ್ತಿಲ್ಲ , ಬಿಪಿಎಲ್ ಮಾಡಿ ಕೊಡಿ , ಉದ್ಯೋಗವಿಲ್ಲದೆ ಕಷ್ಟವಾಗುತ್ತಿದೆ ಎಲ್ಲಿಯಾದರೂ ಕೆಲಸ ಕೊಡಿಸಿ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಅವರಿಗೆ ಫಲಾನುವಿಗಳು ಮನವಿ ಮಾಡಿಕೊಂಡಿದ್ದಾರೆ.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.6ರಲ್ಲಿ 600 ಮನೆಗಳ ಸಮುಚ್ಚಯ ಜಿ ಪ್ಲಸ್ 3 ಮಾದರಿಯಲ್ಲಿ ನಿರ್ಮಾಣವಾಗುತ್ತಿರುವ ಅನುದಾನದ ಕೊರತೆಯಿಂದ ನಿರೀಕ್ಷಿತ ಮಟ್ಟದಲ್ಲಿ ಮುಂದುವರೆಯುತ್ತಿಲ್ಲ. ಸರಕಾರ ಅನುದಾನ ಶೀಘ್ರ ಬಿಡುಗಡೆ ಮಾಡಲು ಒತ್ತಾಯ ಮಾಡಿದ್ದೇನೆ ಪೂರ್ಣಗೊಳಿಸಲು ಸಕಲ ಪ್ರಯತ್ನ ನಡೆಸಲಾಗುವುದು ಎಂದು ಆಶ್ರಯ ಮನವಿಗೆ ಭರವಸೆ ನೀಡಿ, ಅಂಗವಿಕಲ ಸೌಲಭ್ಯ ರಿಕ್ಷಾ ಪಾರ್ಕ್ ದುರಸ್ತಿ ಸಹಿತ ವಿವಿಧ ಮನವಿಗಳನ್ನು ಸ್ವೀಕರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಮಾತನಾಡಿದ ಅವರು ಸರಕಾರ ಯಾವುದಕ್ಕೂ ಅನುದಾನ ಒದಗಿಸಲು ಹೆಚ್ಚಿನ ಆಸಕ್ತಿ ವಹಿಸಬೇಕು. ಗ್ಯಾರಂಟಿ ನೀಡುವುದರಲ್ಲಿಯೇ ಕಳೆದು ಹೋಗದೆ ಬಿಜೆಪಿ ಕೈಗೊಂಡಿರುವ ಯೋಜನೆ ಪೂರ್ಣಕ್ಕೂ ಒತ್ತು ನೀಡಬೇಕು.ಬಿಜೆಪಿ ಶಾಸಕರ ನಿಯೋಗ ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸುತ್ತಲೇ ಇದೆ ಎಂದರು. ಈ ಸಂದರ್ಭದಲ್ಲಿ ಮಂಗಳೂರು ನಗರ ಪಾಲಿಕೆಯ ಸದಸ್ಯರು ಉಪಸ್ಥಿತರಿದ್ದರು.